ಡೈಲಿ ವಾರ್ತೆ:02 ಜೂನ್ 2023
✒️ ಓಂಕಾರ ಎಸ್. ವಿ. ತಾಳಗುಪ್ಪ
ವರದಿಯಾದ 24 ಗಂಟೆಯೊಳಗೆ ತಾತ್ಕಾಲಿಕ ಪರಿಹಾರ ಮಾಡಿದ ಸಾರ್ವಜನಿಕ ಶಿಕ್ಷಣ ಇಲಾಖೆ – ಡೈಲಿ ವಾರ್ತೆ ವರದಿಗೆ ಫಿಧಾ ಆದ ಶಾಲಾ ಮಕ್ಕಳು, ಪೋಷಕರು ಹಾಗೂ ಊರ ಗ್ರಾಮಸ್ಥರು
ಇದೆ ನಿನ್ನೆಯ ವರದಿ
ಶಾಲೆಗೆ ಬಾರದ ಶಿಕ್ಷಕರು – ಶಾಲೆಯಲ್ಲಿ ಶಿಕ್ಷಕರಿಗಾಗಿ ಶಾಲಾ ಮಕ್ಕಳು ಕಾದು ಕಾದು ಸುಸ್ತು – ಮಕ್ಕಳ ಪೋಷಕರು ತಮ್ಮ ತಮ್ಮ ಮಕಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ – ಇದೇನಾ ಸರ್ಕಾರಿ ಶಾಲೆ – ಶಾಲೆಗೆ ಚಕ್ಕರ್ ಹೊಡೆದ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಾರ ಸಾರ್ವಜನಿಕ ಶಿಕ್ಷಣ ಇಲಾಖೆ
ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಕರೂರು ಹೋಬಳಿಯ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಳೂರು ಗ್ರಾಮ ಮಾರಲಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಮಕ್ಕಳು ಬೇಸಿಗೆ ರಜೆಯನ್ನು ಮುಗಿಸಿ ಸಮವಸ್ತ್ರದೊಂದಿಗೆ ಮರಳಿ ಇಂದು ಬೆಳಗ್ಗೆ ಶಾಲೆಗೆ ಹಾಜರಾಗಿದ್ದಾರೆ . ಅದರೆ 12 ಗಂಟೆಯಾದರೂ ಶಿಕ್ಷಕರು ಬಾರದಿರುವುದರಂದ ಪೋಷಕರು ಮಕ್ಕಳನ್ನು ತಮ್ಮ ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಿದ್ದಾರೆ.
ಬೇಜವಾಬ್ದಾರಿ ಶಿಕ್ಷಕರ ವಿರುದ್ಧ ಸೂಕ್ತ ಕ್ರಮ ಕೈಗೂಳ್ಳುತ್ತಾರಾ ಸಾರ್ವಜನಿಕ ಶಿಕ್ಷಣ ಇಲಾಖೆ ಕಾದು ನೋಡೋಣಾ
ಡೈಲಿ ವಾರ್ತೆ ವರದಿಗೆ ತಕ್ಷಣವೇ ಸ್ಪಂದನೆ ನೀಡಿದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ನೀಡಿ ಶಾಲಾ ಮಕ್ಕಳು, ಶಾಲಾ ಮಕ್ಕಳ ಪೋಷಕರು, ಊರ ಗ್ರಾಮಸ್ಥರೊಂದಿಗೆ ಸಭೆ ನೆಡೆಸಿ, ತಾತ್ಕಾಲಿಕವಾಗಿ ಸರ್ಕಾರಿ ಶಿಕ್ಷಕರನ್ನೂ ನೇಮಿಸಿ ಆದೇಶ ಮಾಡಿದರು