ಡೈಲಿ ವಾರ್ತೆ:03 ಜೂನ್ 2023

ರೈಲು ಅವಘಡದ ಬಗ್ಗೆ ಸಂತಾಪ ಸೂಚಿಸಿ ಟ್ವೀಟ್ ಮಾಡುವಾಗ ಯಾವುದೋ ಪೋಟೋ ಹಾಕಿ ಸಂಸದ ನಳಿನ್ ಕುಮಾರ್ ಕಟೀಲ್ ಯಡವಟ್ಟು

ಮಂಗಳೂರು:ಒಡಿಶಾ ರೈಲು ಅಪಘಾತಕ್ಕೆ ಸಂತಾಪ ಸೂಚಿಸುವಾಗ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಹಾ ಯಡವಟ್ಟು ಮಾಡಿದ್ದಾರೆ.

ನಳಿನ್ ಕುಮಾರ್ ಕಟೀಲ್ ಟ್ವಿಟ್ ನಲ್ಲಿ ರೈಲು ಬೋಗಿಗಳು ಹೊತ್ತಿ ಉರಿಯುತ್ತಿರುವಂತ ಯಾವುದೋ ಪೋಟೋ ಹಾಕಿ, ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಂದು ಈ ಘಟನೆ ಸಂಬಂಧ ಟ್ವಿಟ್ ಮಾಡಿದ್ದಂತ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು, ಓಡಿಶಾದಲ್ಲಿ ಸರಣಿ ರೈಲು ಅಪಘಾತದಲ್ಲಿ ಪ್ರಾಣ ಕಳೆದುಕೊಂಡ ನಾಗರಿಕ ಬಂಧುಗಳ ಆತ್ಮಕ್ಕೆ ಸದ್ಗತಿ ಕೋರುತ್ತಾ, ಗಾಯಗೊಂಡಿರುವ ಪ್ರಯಾಣಿಕರು ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಎಂದಿದ್ದರು. ಆದರೆ ಟ್ವಿಟ್ ಜೊತೆ ಹಾಕಿದ್ದಂತ ಪೋಟೋ ನಿನ್ನೆಯ ಘಟನೆ ಪೋಟೋ ಆಗಿರಲಿಲ್ಲ.

ಈ ಬಗ್ಗೆ ಅನೇಕರು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಮಾಡಿದ್ದಂತ ಟ್ವಿಟ್ಟರ್ ವಿಷಯದ ಪೋಟೋ ಕಂಡು ಟೀಕಿಸಿದ್ದರು.ಇದು ಒಡಿಶಾದಲ್ಲಿನ ರೈಲುಗಳ ಅಪಘಾತದ ಪೋಟೋವಲ್ಲ.ಬದಲಾಗಿ ವಿದೇಶದಲ್ಲಿ ನಡೆದಿದ್ದಂತ ರೈಲುಗಳ ಮುಖಾಮುಖಿ ಡಿಕ್ಕಿಯ ಪೋಟೋ ಇರಬೇಕು ಎಂಬುದಾಗಿ ಕಮೆಂಟ್ ಮಾಡಿದ್ದರು.

ಈ ವಿಷಯ ಗಮನಿಸಿದಂತಹ ಸಂಸದರು ಟ್ವಿಟ್ ಡಿಲಿಟ್ ಮಾಡಿ, ಮತ್ತೊಂದು ಒಡಿಶಾದಲ್ಲಿ ರೈಲು ಅಪಘಾತದ ಪೋಟೋ ಹಾಕಿ ಟ್ವಿಟ್ ಮಾಡಿದ್ದಾರೆ.
ಒಡಿಶಾದಲ್ಲಿ ನಡೆದ ರೈಲು ದುರಂತದಲ್ಲಿ ಈವರೆಗೆ 288 ಮಂದಿ ಮೃತಪಟ್ಟಿದ್ದಾರೆ.
900ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ.