ಡೈಲಿ ವಾರ್ತೆ:05 ಜೂನ್ 2023
ಹಾವಂಜೆ ಗ್ರಾ. ಪಂ.ನ ಜೀವ ವೈವಿಧ್ಯ ನಿರ್ವಹಣಾ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಹಾಗೂ ಪರಿಸರ ದಿನಾಚರಣೆ
ಬ್ರಹ್ಮಾವರ:ಹಾವಂಜೆ ಗ್ರಾಮ ಪಂಚಾಯತ್ ನ ಜೀವ ವೈವಿಧ್ಯ ನಿರ್ವಹಣಾ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆ ಹಾಗೂ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಹಾವಂಜೆ ಇದರ ವಠಾರದಲ್ಲಿ ನೆರವೇರಿಸಲಾಯಿತು.
ಪಂಚಾಯತ್ ಅಧ್ಯಕ್ಷರಾದ ಅಜಿತ್ ಗೋಳಿಕಟ್ಟೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಪ್ರಸನ್ನ ಎಚ್. ರವರು ಹಾವಂಜೆ ಹಕ್ಕಿಗಳ ನಾಮ ಫಲಕ ಅನಾವರಣ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪಕ್ಷಿ ವೀಕ್ಷಣೆಯಂತ ವಿಶಿಷ್ಟ ಕಾರ್ಯಕ್ರಮವು ಜಿಲ್ಲೆಯಲ್ಲಷ್ಟೇ ಅಲ್ಲದೆ ರಾಜ್ಯದಲ್ಲಿಯೇ ಪ್ರಥಮ ಇಂತಹ ವೈಶಿಷ್ಟ್ಯಮಯ ಕಾರ್ಯಕ್ರಮಗಳನ್ನು ಎಲ್ಲಾ ಪಂಚಾಯತ್ ನಲ್ಲಿ ಮಾಡುವಂತಾಗಬೇಕು ಎಂದರು.
ಭಾಸ ಗ್ಯಾಲರಿ ಮತ್ತು ಸ್ಟುಡಿಯೋದ ನಿರ್ದೇಶಕರಾದ ಡಾ. ಜನಾರ್ಧನ್ ಹಾವಂಜೆ ಹಾಗೂ ಪಕ್ಷಿ ತಜ್ಞರಾದ ತೇಜಸ್ವಿ ಆಚಾರ್ಯರವರು ಹಾವಂಜೆ ಹಕ್ಕಿಗಳ ಕುರಿತು ಮಾಹಿತಿಯನ್ನು ಬಿತ್ತಿಚಿತ್ರದ ಮೂಲಕ ಪ್ರಸ್ತುತಿಪಡಿಸಿದರು. ಇದೇ ಸಂದರ್ಭದಲ್ಲಿ ಭಾವನಾ ಫೌಂಡೇಶನ್ ಆಯೋಜಿಸಿದ ಹಾವಂಜೆ ಹಕ್ಕಿಗಳ ಕುರಿತಾದ ಬಿತ್ತಿ ಚಿತ್ರಗಳ ಕಲಾಪ್ರದರ್ಶನವು ನಡೆದಿತ್ತು. ಗ್ರಾಮ ಪಂಚಾಯತ್ ವ್ಯಾಪ್ತಿಯ ವಿಶಿಷ್ಟ ಸಾಧಕರಾದ ಗುಣಪಾಲ ಶೆಟ್ಟಿ (ನಾಟಿ ವೈದ್ಯ), ಶ್ರೀಮತಿ ಸುಮತಿ ಶೆಟ್ಟಿ (ನಾಟಿ ವೈದ್ಯ) ಹಾಗೂ ಡಾ. ಜನಾರ್ಧನ್ ರಾವ್ ಹಾವಂಜೆ ( ಕಲಾವಿದ ಹಾಗೂ ಪರಿಸರ ಪ್ರೇಮಿ ) ಇವರುಗಳನ್ನುಸಮ್ಮಾನಿಸಲಾಯಿತು. ಪರಿಸರ ದಿನದ ಪ್ರಯುಕ್ತ ಅತಿಥಿಗಣ್ಯರು ಹಾಗೂ ಭಾಗವಹಿಸಿದ್ದವರೆಲ್ಲರಿಗೂ ವಿಶಿಷ್ಟ ತಳಿಯ ಲಿಂಬೆಗಿಡವನ್ನು ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ದಾನಿಗಳು ಹಾಗೂ ಸಂಘ ಸಂಸ್ಥೆಗಳು ಸಹಕಾರ ನೀಡಿದ್ದರು ಉಡುಪಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಯಶ್ಪಾಲ್ ಸುವರ್ಣ ರವರು ಗ್ರಾಮ ಪಂಚಾಯತ್ ವಿಶಿಷ್ಟ ಕಾರ್ಯವನ್ನು ಶ್ಲಾಘಿಸಿದರು. ಪ್ರಕೃತಿಯು ಸಮತೋಲನೆಯಲ್ಲಿ ಇರಬೇಕಾದರೆ ನಮ್ಮ ಸುತ್ತಮುತ್ತಲಿನ ಜೀವವೈವಿಧ್ಯತೆಗಳನ್ನು ಸಂರಕ್ಷಿಸಬೇಕು ಎಂಬುದಾಗಿ ಕರೆ ನೀಡಿದರು. ಉಪಾಧ್ಯಕ್ಷರಾದ ಶ್ರೀಮತಿ ಸುಜಾತ ಯು ಶೆಟ್ಟಿ, ಬ್ರಹ್ಮಾವರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಯವರಾದ ಎಚ್. ವಿ.ಇಬ್ರಾಹಿಂಪುರ್, ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಶ್ರೀ ರಂಗನಾಥನ್ , ವಲಯ ಅರಣ್ಯ ಅಧಿಕಾರಿ ಅನುಷಾ ಭಟ್. ಹಾಗೂ ಗೌರವಾನ್ವಿತ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ, ಶಿಕ್ಷಕರು, ಶಿಶುಅಭಿವೃದ್ದಿ ಇಲಾಖೆಯ ಮೇಲ್ವಿಚಾರಕಿ, ಶಿಕ್ಷಣ ಪೌಂಡೇಶನ್ ಜಿಲ್ಲಾ ಸಂಯೊಜಕಿ ಗ್ರಂಥಾಲಯ ಮೇಲ್ವಿಚಾರಕಿ, ಪಂಚಾಯತ್ ಸಿಬ್ಬಂದಿ ವರ್ಗ ಅಂಗನವಾಡಿ ಕಾರ್ಯಕರ್ತರು, ಅಶಾ ಕಾರ್ಯಕರ್ತೆಯರು, ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು, ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ದಿವ್ಯ ಎಸ್ ರವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು ಯೋಗೀಶ್ ಕೊಳಲಗಿರಿಯವರು ಕಾರ್ಯಕ್ರಮ ನಿರೂಪಿಸಿದರು ಪಂಚಾಯತ್ ಸಿಬ್ಬಂದಿ ಸದಾಶಿವ ವಂದಿಸಿದರು.