ಡೈಲಿ ವಾರ್ತೆ:05 ಜೂನ್ 2023

ಕೋಟ ಗ್ರಾಮ ಪಂಚಾಯತ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಕೋಟ: 2ನೇ ಕೋಟ ಗ್ರಾಮ ಪಂಚಾಯತ್, ಎಸ್ಎಲ್ಆರ್ ಎಂ ಘಟಕ, ಕೋಟ ಗ್ರಾಮ ಪಂಚಾಯತ್ ಸಂಜೀವಿನಿ ಒಕ್ಕೂಟ, ಗ್ರಾಮ ಪಂಚಾಯತ್ ಕೋಟ ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂ. 5 ರಂದು ಕೋಟ ಹಿರೇ ಮಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ ವಹಿಸಿದದ್ದರು.

ಮುಖ್ಯ ಅತಿಥಿಗಳಾದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುರೇಶ್ ಬಂಗೇರ ಮಾತನಾಡಿ ಹವಾಮಾನ ವೈಪರಿತ್ಯತೆ ಬಗ್ಗೆ ಪ್ರಧಾನಿ ಮೋದಿಜಿ 9 ವರ್ಷದ ಹಿಂದೆ ಹೇಳಿದ್ದಾರೆ. ಉದಾರಣೆಗೆ ಸಮಯಕ್ಕೆ ಸರಿಯಾಗಿ ಮಳೆ ಬಾರದೆ ಇರುವುದು. ಬೇಸಿಗೆ ಸಮಯದಲ್ಲಿ ಮಳೆ ಬರುವುದು ಮಳೆಗಾಲದಲ್ಲಿ ಮಳೆ ಬಾರದೆ ಇರುವುದು ಇದು ಹವಮಾನ ವೈಫರೀತ್ಯತೆಯಾಗಿದೆ ಎಂದರು.
ಪೂರ್ವಿಕರಿಗೆ ನಮ್ಮ ಪರಿಸರ ಮತ್ತು ಪ್ರಕೃತಿಯ ಬಗ್ಗೆ ಬಹಳ ಕಾಳಜಿ ಇರುತ್ತಿತ್ತು. ಒಂದು ಮರ ಕಡಿದರೆ ಮತ್ತೊಂದು ಗಿಡ ನೆಡುತ್ತಿದ್ದರು. ಆದರೆ ಈಗ ಕೇವಲ ಮರ ಕಡಿಯುವುದಾಗಿದೆ. ಇದು ನಮ್ಮ ಪೂರ್ವಿಕರಿಗೂ ನಮಗೂ ಇರುವ ವ್ಯತ್ಯಾಸ ಎಂದರು. ಒಂದು ಮರ ಕಡಿದರೆ 4 ಗಿಡವನ್ನು ನೆಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರಕೃತಿಯ ಜೊತೆಗೆ ಮನುಷ್ಯ ಬದುಕಬೇಕು. ಪ್ರಕೃತಿ, ಭೂಮಿ ಆರೋಗ್ಯವಾಗಿದ್ದರೆ ಬದುಕು ಹಸನಾಗುತ್ತದೆ. ಪ್ಲಾಸ್ಟಿಕ್ ಬಳಕೆಯಿಂದ ಪ್ರಕೃತಿ ಹಾನಿಯಾಗುತ್ತದೆ ಎಂದು ಹೇಳಿದರು. ಮಕ್ಕಳಲ್ಲಿ ಪ್ರಕೃತಿಯನ್ನು ಕಾಪಾಡುವ ಮನೋಭಾವ ಬಂದರೆ ಅದು ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದು ಸುರೇಶ್ ಬಂಗೇರ ಹೇಳಿದರು.

ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಶ್ರೀ ಗಣೇಶ್ ಭಟ್ ರವರು ಸಂಕೇತಿಕವಾಗಿ ಗಿಡವನ್ನು ವಿತರಣೆ ಮಾಡಿ ಶುಭ ಹಾರೈಸಿದರು.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ಜಯಂಟ್ಸ್ ಗ್ರೂಪ್ ಶ್ರೀನಾಥ್, ಗ್ರಾ. ಪಂ. ಉಪಾಧ್ಯಕ್ಷೆ ಜಯಂತಿ ಪೂಜಾರ್ತಿ, ಎಸ್ಎಲ್ಆರ್ ಎಂ ಮೇಲ್ವಿಚಾರಕಿ ಶ್ರೀಮತಿ ಲೋಲಾಕ್ಷಿ, ಪಂಚಾಯತ್ ಸದಸ್ಯರಾದ ಸಂತೋಷ್ ಪ್ರಭು, ಶಿವರಾಂ ಶೆಟ್ಟಿ, ಹಾಗೂ ಪಂಚಾಯತ್ ಸಿಬ್ಬಂದಿಗಳು ಮತ್ತು ಊರ ಮಹನೀಯರು ಉಪಸ್ಥಿತರಿದ್ದರು.

ಪಂಚಾಯತ್ ಲೆಕ್ಕಪರಿಶೋಧಕಿ ಶ್ರೀಮತಿ ಪೂರ್ಣಿಮಾ ಸ್ವಾಗತಿಸಿದರು. ಕಾರ್ಯದರ್ಶಿ ಶೇಖರ್ ವಂದಿಸಿದರು.