ಡೈಲಿ ವಾರ್ತೆ:06 ಜೂನ್ 2023

ಸಾಲಿಗ್ರಾಮ: ಕಾರ್ಕಡ ಬಡಾಹೋಳಿಯ ಹಡಲು ಭೂಮಿಗೆ ಆಕಸ್ಮಿಕ ಬೆಂಕಿ – 40 ಎಕ್ರೆ ಪ್ರದೇಶದಲ್ಲಿ ಬೆಂಕಿ ರುದ್ರ ನರ್ತನ, ಅಗ್ನಿ ಶಾಮಕದಳದವರಿಂದ ಕಾರ್ಯಾಚರಣೆ

ವಿಡಿಯೋ ವೀಕ್ಷಿಸಿ

ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಕಡ ಬಡಾಹೋಳಿಯಲ್ಲಿನ ಕುರುಚಲು ಬೆಳೆದಿದ್ದ ಹಡಲು ಭೂಮಿಗೆ ಆಕಸ್ಮಿಕ ಬೆಂಕಿ ಹತ್ತಿಕೊಂಡ ಘಟನೆ ಮಂಗಳವಾರ ಬೆಳಿಗ್ಗೆ 11:30 ರ ಸುಮಾರಿಗೆ ನಡೆದಿದೆ.

ಬೆಂಕಿಯು ಸುಮಾರು 40 ಎಕ್ರೆ ಬಯಲು ಪ್ರದೇಶವನ್ನು ಅವರಿಸಿದ್ದು ಬೆಂಕಿಯ ರುದ್ರ ನರ್ತನ ಕಂಡು, ಅದಿನ್ನು ಪರಿಸರವೆಲ್ಲಾ ವ್ಯಾಪಿಸುವುದೆಂಬ ಭೀತಿಯಿಂದ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದರು.

ವಿಡಿಯೋವೀಕ್ಷಿಸಿ



ಕುಂದಾಪುರ ಅಗ್ನಿ ಶಾಮಕ ದಳದವರು ಒಂದು ಘಂಟೆ ತಡವಾಗಿ ಬಂದರೂ ಬೆಂಕಿ ನಂದಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಈ ವಿಶಾಲ ಪ್ರದೇಶದಲ್ಲಿ ಕುರುಚಲು ಗಿಡ, ಪೊದೆಗಳು ಬೆಳೆದಿದ್ದು, ಯಾವುದೇ ಬೆಳೆ, ಪ್ರಾಣಹಾನಿಯಾಗಿಲ್ಲ. ಗಾಳಿಯ ವೇಗ ಜಾಸ್ತಿಯಿದ್ದುದರಿಂದ ಅಗ್ನಿ ಶಮನ ಸವಾಲಾಗಿತ್ತು. ಸ್ಥಳೀಯರ ಸಹಕಾರ ಹಾಗೂ ಅಗ್ನಿ ಶಾಮಕ ದಳದವರ ಕಾರ್ಯಾಚರಣೆ ಹೆಚ್ಚಿನ ಅನಾಹುತವನ್ನು ತಪ್ಪಿಸಿದೆ. ಬಯಲು ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಹತ್ತಿಕೊಳ್ಳಲು ಕಾರಣ ತಿಳಿದುಬಂದಿಲ್ಲ.



ಅಗ್ನಿ ಶಾಮಕ ದಳದ ಮುಖ್ಯ ಅಗ್ನಿಶಾಮಾಕ ಪ್ರದೀಪ್ ಹಾಗೂ ಸಿಬ್ಬಂದಿಗಳಾದ ಮುಸ್ತಾಫ, ನಾಗರಾಜ್ ಪೂಜಾರಿ, ಸಂತೋಷ್ ಶೆಟ್ಟಿ ಅಭಿಷೇಕ್ ಹಾದಿಮನಿ, ಸಚಿನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ ಸ್ಥಳೀಯರಾದ ಸಮಾಜಸೇವಕ ನಾಗರಾಜ್ ಗಾಣಿಗ, ಪತ್ರಕರ್ತ ರಮೇಶ್ ಮೆಂಡನ್, ವಾರ್ಡ್ ಮೆಂಬರ್ ಗಣೇಶ್, ಸಂತೋಷ ನೈರಿ, ರಾಘು ದೇವಾಡಿಗ, ಕೃಷ್ಣ ಕಾರ್ಕಡ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಸಹಕಾರ ನೀಡಿದರು.