ಡೈಲಿ ವಾರ್ತೆ: 06 ಜೂನ್ 2023
ಮಾಡಾವು : ನುಸ್ರತುಲ್ ಇಸ್ಲಾಂ ಮದರಸ ಇದರ 2023-24 ನೆ ಸಾಲಿನ ಶೈಕ್ಷಣಿಕ ವರ್ಷದ ಶಿಕ್ಷಕ ರಕ್ಷಕ ಸಭೆ.
ಪುತ್ತೂರು : ಇಲ್ಲಿಗೆ ಸಮೀಪದ ಮಾಡಾವು ನುಸ್ರತುಲ್ ಇಸ್ಲಾಂ ಮದರಸ ಇದರ 2023-24 ನೆ ಸಾಲಿನ ಶೈಕ್ಷಣಿಕ ವರ್ಷದ ಮೊದಲ ಶಿಕ್ಷಕ ರಕ್ಷಕ ಸಭೆಯು ಇತ್ತೀಚೆಗೆ ನುಸ್ರತುಲ್ ಇಸ್ಲಾಂ ಮದರಸ ಹಾಲ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ಥಳೀಯ ಖತೀಬ್ ನೌಫಲ್ ರಹ್ಮಾನಿ ಮಾತನಾಡಿ ಮಕ್ಕಳ ಉತ್ತಮ ಶಿಕ್ಷಣ ಹಾಗೂ ಭವಿಷ್ಯಕ್ಕಾಗಿ ಪೋಷಕರು ಮತ್ತು ಶಿಕ್ಷಕರು ಒಟ್ಟಾಗಿ ಪ್ರಯತ್ನಿಸಬೇಕಾಗಿದೆ, ಈ ನಿಟ್ಟಿನಲ್ಲಿ ಪರಸ್ಪರ ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು.
ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ, ಗೌಸಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ಮಾಡಾವು ಇದರ ಗೌರವಾಧ್ಯ ಯಂ. ಹುಸೈನಾರ್ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ಇಬ್ರಾಹಿಂ ಎಸ್.ಯಂ. ಕಲಿಕೆಗೆ ಬೇಕಾಗುವ ಪೂರಕ ಅಂಶಗಳು ಹಾಗೂ ಪರಿಣಾಮದ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಮಸೀದಿ ಅಧ್ಯಕ್ಷ ಹಸೈನಾರ್ ಸಂತೋಷ್, ಉಪಾಧ್ಯಕ್ಷ ಹಾಜಿ ಅಬ್ದುಲ್ ಹಮೀದ್ ಫ್ಯಾಮಿಲಿ, ಕೋಶಾಧಿಕಾರಿ ಪುತ್ತುಂಞಿ ಮಾಡಾವು ಅವರು ವಿಧ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಮತ್ತು ಐಡಿ ಕಾರ್ಡ್ ನೀಡುವುದರ ಜೊತೆಗೆ ವಿದ್ಯಾರ್ಥಿಗಳ ಇನ್ನಿತರ ಸಮಸ್ಯೆಗಳಿಗೂ ಸ್ಪಂದಿಸಲು ನಾವು
ಸದಾ ಸಿದ್ದರಿದ್ದೇವೆ ಎಂದು ರಕ್ಷಕರಿಗೆ ವಾಗ್ದಾನ ಮಾಡಿದರು.
ಬಿಜೆಯಂ ಉಪಾಧ್ಯಕ್ಷ ಅಬ್ದುಲ್ ಖಾದರ್ ಮುಸ್ಲಿಯಾರ್, ಜೊತೆ ಕಾರ್ಯದರ್ಶಿ ಇಸ್ಮಾಯಿಲ್ ಎಂ.ಎ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಿಜೆಯಂ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಆಯ್ಯನಕಟ್ಟೆ ಸ್ವಾಗತಿಸಿ,
ರಫೀಕ್ ಮುಸ್ಲಿಯಾರ್ ಕಿರಾಅತ್ ಪಠಿಸಿದರು. ಇಕ್ಬಾಲ್ ಮುಸ್ಲಿಯಾರ್ ವಂದಿಸಿದರು.