ಡೈಲಿ ವಾರ್ತೆ:06 ಜೂನ್ 2023

ಸಿಂಧನೂರು ನಗರವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಪೌರಯುಕ್ತರು ಕರೆ

ಸಿಂಧನೂರು ನಗರವನ್ನ ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರ ಪೂರಕ ನಗರವನ್ನಾಗಿ ಮಾಡಲು ಸಿಂಧನೂರು ನ ಸ್ವಯಂ ಸೇವಾ ಸಂಸ್ಥೆಗಳು, ಮಹಿಳೆಯರು, ಯುವಕರು ಹಾಗೂ ಸಮುದಾಯ ಕುಡಿ ಜಂಟಿ ಪ್ರಯತ್ನ ಮಾಡಬೇಕಂದು ಪೌರಯುಕ್ತರಾದ ಮಂಜುನಾಥ್ ಗುಂಡೂರ್ ಅವರು ಕರೆ ನೀಡಿದರು ಅವರು ಇಂದು ನಗರಸಭೆ ಸಿಂಧನೂರು ಹಾಗೂ ಸಾಧನಾ ಸ್ವಯಂ ಸೇವಾ ಸಂಸ್ಥೆ ಸಿಂಧನೂರು ಜೊತೆಗೂಡಿ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದ ಮೂಲಕ ಪರಿಸರ ದ ಪೂರಕ ಸಸಿಗಳನ್ನ ನೆಡುವ ಮೂಲಕ ಕಾರ್ಯಕ್ರಮ ಅಧ್ಯಕ್ಷತೆಯನ್ನ ವಹಿಸಿ ಮಾತಾಡತ್ತಿದ್ದರು.

ಈ ಕಾರ್ಯಕ್ರಮ ತುಂಬಾ ಪ್ರಸ್ತುತವಾಗಿದೆ. ನಾವು ಪರಿಸರ ವಿರುದ್ದ ಕಾರ್ಯಕ್ರಮಗಳನ್ನು ಮಾಡುವದನ್ನು ಬಿಟ್ಟು ಪರಿಸರ ಪೂರಕ ಕಾರ್ಯಕ್ರಮಗಳನ್ನು ಮಾಡ್ಬೇಕಂದು ನೆನಪಿಸ್ಕೊಡರು ಈ ಕಾರ್ಯಕ್ರಮದ ವಿಶ್ವ ಪರಿಸರ ಕಾರ್ಯಕ್ರಮ ದಲ್ಲಿ ನಗರ ಸಭೆಯ ಕಿರಿಯ ಅಭಿಯಂತ್ರರು ಮಹೇಶ್ ಅಂಗಡಿ, ಆರೋಗ್ಯ ನಿರೀಕ್ಷೆಕಾರದ ಲಷ್ಮಿಪತಿ, ಸಮುದಾಯ ಅಧಿಕಾರಿ ದುರಗಪ್ಪ, ಸಾಧನಾ ಸಂಸ್ಥೆಯ ಜಿಲ್ಲಾ ಸಂಚಾಲಕರಾದ ಸುರೇಶರೆಡ್ಡಿ ವಿರೂಪಾಪುರ, ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ಜಾಲವಾಡಗಿ , ಹಾಗೂ ಪೌರ ಕಾರ್ಮಿಕರು ಸಾರ್ವಜನಿಕರು ಮಹಿಳೆ ಇದ್ದರು