ಡೈಲಿ ವಾರ್ತೆ:08 ಜೂನ್ 2023

ಭಾರತ ಮೋಟಾರ್ ಡ್ರೈವಿಂಗ ಸ್ಕೂಲ್ ನ ಬಸವರಾಜ ಕಡ್ಲಿ ಗೆ ಸನ್ಮಾನ

ಬೆಳಗಾವಿ 08 : ಮಾಜಿ ಯೋಧ, ಅಪ್ಪಟ ಕನ್ನಡ ಪ್ರೇಮಿ , ಸಾಮಾಜಿಕ ಕಾರ್ಯಕರ್ತ ಮತ್ತು ಭಾರತ ಮೋಟಾರ ಡ್ರೈವಿಂಗ ಸ್ಕೂಲ್ ನ ವ್ಯವಸ್ಥಾಪಕ ಬಸವರಾಜ ಕಡ್ಲಿ ರವರನ್ನು ನಗರದ ಅವರ ಕಛೇರಿಯಲ್ಲಿ ಶಾಲು ಹೊದಿಸಿ ಅಭಿನಂದನಾ ಪತ್ರದ ಜೊತೆಗೆ ಪುಸ್ತಕವನ್ನು ನೀಡಿ ಸನ್ಮಾನಿಸಲಾಯಿತು.


ಬಸವರಾಕ ಕಡ್ಲಿ ರವರು ಕಳೆದ ಕೆಲವು ದಶಕಗಳಿಂದ ನಗರದಲ್ಲಿ ರಸ್ತೆ ಸುರಕ್ಷತೆ, ವಾಹನ ಚಾಲನೆಯ ನಿಯಮಗಳ ಕುರಿತಂತೆ ಭಾರತ ಮೋಟಾರ ಡ್ರೈವಿಂಗ ಸ್ಕೂಲ್ ನ ಮುಖಾಂತರ ನಿಯಮಿತವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಿಗೆ ಜಾಗೃತಿಯನ್ನುಂಟು ಮಾಡುತ್ತಾ ರಸ್ತೆ ಅಪಘಾತಗಳನ್ನು ನಿಯಂತ್ರಿಸುವಲ್ಲಿ ಶ್ರಮಿಸುತ್ತಿರುವ ಹಿನ್ನಲೆಯಲ್ಲಿ ಖಾನಾಪೂರ ತಾಲೂಕಾ ಕಸಾಪ ಗೌರವ ಕಾರ್ಯದರ್ಶಿ ಕಿರಣ ಸಾವಂತನವರ ಮತ್ತು ಜಿಲ್ಲಾ ಕಸಾಪ ಸಹ ಮಾಧ್ಯಮ ಪ್ರತಿನಿಧಿ ಆಕಾಶ್ ಥಬಾಜ ಸನ್ಮಾನಿಸಿದರು.


ಈ ಸಂಧರ್ಭದಲ್ಲಿ ಮಾತನಾಡಿದ ಬಸವರಾಜ ಕಡ್ಲಿ ತಮ್ಮ ಸಂಸ್ಥೆಯ ಮುಖಾಂತರ ಪ್ರತಿ ತಿಂಗಳಿಗೆ ಸುಮಾರು 200 ಜನರಿಗೆ ವಾಹನಾ ಚಾಲನಾ ತರಭೇತಿ ನೀಡಲಾಗುತ್ತಿದೆ. ಜೀವ ಅತ್ಯಮೂಲ್ಯವಾಗಿದ್ದು ಪ್ರತಿಯೊಬ್ಬರು ರಸ್ತೆಗಿಳಿದಾಗ ಕಡ್ಡಾಯವಾಗಿ ರಸ್ತೆಯ ಮತ್ತು ವಾಹನ ಚಾಲನೆಯ ನಿಯಮಗಳನ್ನು ಪಾಲಿಸಿದಾಗ ಮಾತ್ರ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ಅಲ್ಲದೇ ಪ್ರತಿಯೊಬ್ಬ ವಾಹನ ಸವಾರರು ಕಡ್ಡಾಯವಾಗಿ ಲೈಸನ್ಸ್ ಪಡದೇ ವಾಹನ ಚಲಾಯಿಸುವಂತೆ ವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ಭಾರತ ಮೋಟಾರ ಡ್ರೈವಿಂಗ ಸ್ಕೂಲ್ ನ ಸಿಬ್ಬಂದಿ ಹಾಗೂ ಮತ್ತೀತರರು ಉಪಸ್ಥಿತರಿದ್ದರು.