ಡೈಲಿ ವಾರ್ತೆ: 12 ಜೂನ್ 2023
ಗ್ಯಾಸ್ ಗೀಸರ್ ಸೋರಿಕೆ: ಯುವಕ, ಯುವತಿ ಬಾತ್ ರೂಂನಲ್ಲೇ ಉಸಿರುಗಟ್ಟಿ ಮೃತ್ಯು!
ಬೆಂಗಳೂರು:ಬಾತ್ರೂಮ್ನಲ್ಲಿ ಗ್ಯಾಸ್ ಗೀಸರ್ ಸೋರಿಕೆಯಾಗಿ ಯುವಕ & ಯುವತಿ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಚಿಕ್ಕಜಾಲ ವ್ಯಾಪ್ತಿಯ ತರಬನಹಳ್ಳಿಯಲ್ಲಿ ನಡೆದಿದೆ.
ಗುಂಡ್ಲುಪೇಟೆ ಮೂಲದ ಚಂದ್ರಶೇಖರ್ ಹಾಗೂ ಗೋಕಾಕ್ನ ಸುಧಾರಾಣಿ ಮೃತ ದುರ್ವೈವಿಗಳು.
ತರಬನಹಳ್ಳಿಯಲ್ಲಿ ವಾಸವಿದ್ದ ಚಂದ್ರಶೇಖರ್ ಬಾಡಿಗೆ ಮನೆಗೆ ಸುಧಾರಾಣಿ ತೆರಳಿದ್ದಳು. ಇಬ್ಬರಿಗೆ ವಿವಾಹ ನಿಶ್ಚಯವಾಗಿತ್ತು ಎನ್ನಲಾಗಿದೆ.
ಇಬ್ಬರು ಕೂಡ ರಾತ್ರಿ ಸ್ನಾನಕ್ಕೆಂದು ಗ್ಯಾಸ್ ಗೀಸರ್ ಆನ್ ಮಾಡಿ ಬಾತ್ರೂಮ್ಗೆ ಹೋಗಿದ್ದಾರೆ. ಆ ವೇಳೆ ಗ್ಯಾಸ್ ಗೀಸರ್ನಿಂದ ವಿಷಾನಿಲ ಸೋರಿಕೆಯಾಗಿದೆ.
ಇದರಿಂದ ಸ್ನಾನ ಮಾಡುತ್ತಿರುವಾಗಲೇ ಉಸಿರುಗಟ್ಟಿ ಇಬ್ಬರು ಕೂಡ ಬಾತ್ರೂಮ್ನಲ್ಲೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.