ಡೈಲಿ ವಾರ್ತೆ:13ಜೂನ್ 2023

ಬ್ರಹ್ಮಾವರ: ಸಾಲ ಮರುಪಾವತಿ ಮಾಡುವಂತೆ ಹಲ್ಲೆ ಜೀವ ಬೆದರಿಕೆ ದೂರು

ಬ್ರಹ್ಮಾವರ :ವ್ಯವಹಾರದ ಸಲುವಾಗಿ ಬ್ಯಾಂಕ್‌ನಲ್ಲಿ ಸಾಲ ಪಡೆದ ಬಾಳ್ಕುದ್ರು ಸಂದೀಪ್‌ ಅಮೀನ್‌ ಎನ್ನುವವರ ಮೇಲೆ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಖಾಲಿ ಸ್ಟ್ಯಾಂಪ್‌ ಪೇಪರ್‌ ಮೇಲೆ ಸಹಿ ಹಾಕಿಸಿ ಜೀವ ಬೆದರಿಕೆ ಒಡ್ಡಿದ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಂದೀಪ್‌ ಅವರು ಕೊಳಲಗಿರಿಯ ಲಿನೆಟ್‌ ಎಂಬವರಿಂದ ವ್ಯವಹಾರದ ಸಲುವಾಗಿ ಸಾಲ ಮತ್ತು ಪೇತ್ರಿಯ ಉಡುಪಿ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸೊಸೈಟಿಯಲ್ಲಿ ಚಿನ್ನಾಭರಣಗಳನ್ನು ಅಡವಿಟ್ಟು ಸಾಲ ಪಡೆದಿರುತ್ತಾರೆ. ಲಿನೆಟ್‌ ಮನೆಯವರು ಸಾಲದ ವಿಚಾರವಾಗಿ ಸಂದೀಪ್‌ ಅವರನ್ನು ಮನೆಗೆ ಕರೆದಿದ್ದು ಅದರಂತೆ ಕಳೆದ 5 ರಂದು ಹೋದಾಗ ಅಖಿಲ್ ಹೆಗ್ಡೆ,‌ ಲಿನೆಟ್‌, ಹೆನ್ರಿ‌ ಡೇಸಾ, ಗ್ರೆಟ್ಟಾ, ವಿನ್ಸೆಂಟ್, ಡೇಲಿಯಾ, ಡೇವಿಸ್, ರೈಲ್ವೆ ಸುನೀಲ್ ಶೆಟ್ಟಿ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿರುತ್ತಾರೆ.
 
ಇದಲ್ಲದೇ ಸಂದೀಪ್ ಅವರ ತಂಗಿಯ ಪೇತ್ರಿಯಲ್ಲಿರುವ‌ ಗಾರ್ಮೆಂಟ್ಸ್, ಫ್ಯಾಕ್ಟರಿಯನ್ನು ಅವರ ಹೆಸರಿಗೆ ಬರೆದುಕೊಡುವಂತೆ ಬೆದರಿಸಿ ಖಾಲಿ ಪೇಪರ್ ಮೇಲೆ‌ ಸಹಿ ಹಾಕಿಸಿಕೊಂಡಿರುತ್ತಾರೆ. ಈ‌ಮಧ್ಯೆ ಅಖಿಲ್ ಹೆಗ್ಡೆ ಸುಮಾರು 45 ಲಕ್ಷ‌ ತೆಗೆದುಕೊಂಡಿರುವ‌ ಬಗ್ಗೆ ಸಹಿ‌ ಹಾಕಿಸಿಕೊಂಡು ಜೀವ ಬೆದರಿಕೆ‌ ಒಡ್ಡಿದ್ದಾರೆ ಮತ್ತು‌ ಪೇತ್ರಿ ಬ್ಯಾಂಕ್ ಗೆ ಕರೆದುಕೊಂಡು ಹೋಗಿ 5 ಚೆಕ್ ಮೇಲೆ ಸಹಿ‌ ಮಾಡಿ ತೆಗೆದುಕೊಂಡಿದ್ದಾರೆ ಎಂದು ದೂರಿನಲ್ಲಿ‌ತಿಳಿಸಿದ್ದಾರೆ.