ಡೈಲಿ ವಾರ್ತೆ:13ಜೂನ್ 2023
ಹೆತ್ತತಾಯಿ ಕೊಂದು ಸೂಟ್ ಕೇಸ್ ನಲ್ಲಿ ಪೊಲೀಸ್ ಠಾಣೆಗೆ ಶವ ತಂದ ಮಗಳು!
ಬೆಂಗಳೂರು: ತಾಯಿಯನ್ನು ಕೊಂದು ಸೂಟ್ ಕೇಸ್ ನಲ್ಲಿ ಶವ ಹೊತ್ತುಕೊಂಡು ಮಗಳು ಪೊಲೀಸ್ ಠಾಣೆಗೆ ಬಂದು ಆತಂಕ ಸೃಷ್ಟಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೆನಾಲಿ ಸೇನ್ (39) ಹೆತ್ತ ತಾಯಿಯನ್ನು ಕೊಲೆ ಮಾಡಿದಾಕೆ. 70 ವರ್ಷದ ಬೀವಾ ಪಾಲ್ ಕೊಲೆಯಾದ ವೃದ್ಧೆ.
ಸೋನಾಲಿ ಸೇನ್ ಕುಟುಂಬ ಕೊಲ್ಕತ್ತಾ ಮೂಲದವರಾಗಿದ್ದು, ಕಳೆದ 6 ವರ್ಷಗಳಿಂದ ನಗರದ ಬಿಳೆಕಳ್ಳಿಯ ಎನ್ಎಸ್ಆರ್ ಗ್ರೀನ್ ಅಪಾರ್ಟ್ಮೆಂಟ್ ನ 106 ಫ್ಲಾಟ್ ನಲ್ಲಿ ವಾಸವಾಗಿದ್ದರು. ಫ್ಲಾಟ್ ನಲ್ಲಿ ಸೋನಾಲಿ ಸೇನ್, ಸೋನಾಲಿ ಸೇನ್ ಪತಿ, ಮಗ, ಅತ್ತೆ ಮತ್ತು ಸೋನಾಲಿ ಸೇನ್ ತಾಯಿ ವಾಸವಾಗಿದ್ದರು.
ಸೆನಾಲಿ ಸೇನ್ ಅಮ್ಮ ಮತ್ತು ಅತ್ತೆ ಒಂದೇ ಮನೆಯಲ್ಲಿದ್ದರು. ಇಬ್ಬರೂ ದಿನಾ ಗಲಾಟೆ ಮಾಡಿಕೊಳ್ಳುತ್ತಿದ್ದರು. ಬೀಗರ ಜಗಳಕ್ಕೆ ಬೇಸತ್ತಿದ್ದ ಬೀವಾ ಪಾಲ್ ನಿದ್ರೆ ಮಾತ್ರೆ ನುಂಗಿ ಸಾಯೋದಾಗಿ ಹೇಳಿದ್ದಾರೆ. ಬೆದರಿಕೆಯಂತೆಯೇ ಮುಂಜಾನೆ ಸೆನಾಲಿ ಸೇನ್ ತನ್ನ ತಾಯಿಗೆ 20 ನಿದ್ರೆ ಮಾತ್ರೆ ನುಂಗಿಸಿದ್ದಾಳೆ.
ತಾಯಿ ಹೊಟ್ಟೆ ನೋವು ಎಂದಾಗ ವೇಲ್ ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ. ಟ್ರ್ಯಾಲಿ ಸೂಟ್ ಕೇಸ್ ನಲ್ಲಿ ತಾಯಿ ಶವವಿಟ್ಟು, ತಂದೆಯ ಫೋಟೊ ಇಟ್ಟು ಮಗಳು ಸ್ಟೇಷನ್ ಗೆ ಬಂದಿದ್ದಾಳೆ. ಇದನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ.
ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸೆನಾಲಿ ಸೇನ್ ಳನ್ನು ಬಂಧಿಸಿದ್ದಾರೆ.