ಡೈಲಿ ವಾರ್ತೆ:18 ಜೂನ್ 2023
ಹಿದಾಯ ಪಬ್ಲಿಕ್ ಸ್ಕೂಲ್ ಬೆಳ್ಳಾರೆ ಶಾಲಾ ಮಂತ್ರಿಮಂಡಲ ರಚನೆ:
ಮುಖ್ಯಮಂತ್ರಿ- ಅಹಮದ್ ಮುಫೀದ್ ಉಪಮುಖ್ಯಮಂತ್ರಿ – ಆಯಿಶತ್ ಶಾನಿಬ
ಉಳಿದಂತೆ ಶಿಕ್ಷಣ ಮಂತ್ರಿಯಾಗಿ ಮಹಮ್ಮದ್ ಸವಾದ್ ಉಪ ಶಿಕ್ಷಣಮಂತ್ರಿಯಾಗಿ ಕಮರುನ್ನೀಸ, ಆರೋಗ್ಯಮಂತ್ರಿಯಾಗಿ ಆಯಿಷ ಮನ್ಹಾ ಉಪ ಆರೋಗ್ಯಮಂತ್ರಿಯಾಗಿ ಮಹಮ್ಮದ್ ಶಮ್ಮಾಶ್ ಎಸ್.ಬಿ, ಕ್ರೀಡಾ ಮಂತ್ರಿಯಾಗಿ ಮಹಮ್ಮದ್ ಸಿಮಾಕ್ ಉಪ ಕ್ರೀಡಾಮಂತ್ರಿಯಾಗಿ ಆಯುಷ ನುಝ್ಹಾ,
ಸಾಂಸ್ಕೃತಿಕ ಮಂತ್ರಿಯಾಗಿ ನಿಹ್ಲತ್ ಫಾತಿಮ ಉಪಸಾಂಸ್ಕೃತಿಕ ಮಂತ್ರಿಯಾಗಿ ಫಾತಿಮಹಮ್ಮದ್ಮ ರಿದಾ, ಸ್ವಚ್ಛತಾ ಮಂತ್ರಿಯಾಗಿ ಮಹಮ್ಮದ್ ಅಝ್ಮಾನ್, ಉಪ ಸ್ವಚ್ಛತಾ ಮಂತ್ರಿಯಾಗಿ ಮಹಮ್ಮದ್ ಸಮ್ಮಾಶ್, ಶಿಸ್ತು ಮಂತ್ರಿಯಾಗಿ ಮೊಹಮ್ಮದ್ ಇಹಾನ್ ಉಪ ಶಿಸ್ತುಮಂತ್ರಿಯಾಗಿ ಶಹ್ಮಾ, ನೀರಾವರಿ ಮಂತ್ರಿಯಾಗಿ ಸಯ್ಯದ್ ಮುದಸ್ಸಿರ್ ಉಪ ನೀರಾವರಿ ಮಂತ್ರಿಯಾಗಿ ಫಾತಿಮತ್ ಶೈಮಾ ಮತ್ತು ನೆಬಿಸತ್ ಶಿಬಾ, ವಾರ್ತಾ ಮಂತ್ರಿಯಾಗಿ ಮೊಯಿದಿನ್ ಬಾತಿಷ ಉಪ ವಾರ್ತ ಮಂತ್ರಿಯಾಗಿ ಆಯುಷ್ ಕೆ ಮತ್ತು ಮೊಹಮ್ಮದ್ ಹಿಶಾನ್ ಆಯ್ಕೆಯಾದರು.
ಹಿದಾಯ ಪಬ್ಲಿಕ್ ಸ್ಕೂಲ್, ಬೆಳ್ಳಾರೆಯ ಸಂಸತ್ ಚುನಾವಣೆಯು ಶಾಲಾ ಮುಖ್ಯ ಶಿಕ್ಷಕಿ ಸುನೈನಾ ಬಿ ರವರ ಮಾರ್ಗದರ್ಶನದಲ್ಲಿ ನಡೆಯಿತು. ಚುನಾವಣೆಯಲ್ಲಿ ಅತ್ಯಧಿಕ ಮತ ಗಳಿಸಿ ಮುಖ್ಯಮಂತ್ರಿಯಾಗಿ ಅಹಮದ್ ಮುಫೀದ್ ಮತ್ತು ಉಪಮುಖ್ಯಮಂತ್ರಿಯಾಗಿ ಆಯಿಶತ್ ಶಾನಿಬ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಶಾಲಾ ಶಿಕ್ಷಕಿ ಖತೀಜತ್ ಸಫ್ರೀನ ಮತ್ತು ಶಿಕ್ಷಕಿಯರಾದ ಶ್ರೀಮತಿ ನಿವ್ಯಾ, ಸೆಕೀನಬಾನು, ಫಾತಿಮ ಬಿ.ಯಂ, ಕುಮಾರಿ ಹೇಮಲತಾ, ಕುಮಾರಿ ಅಶ್ವಿನಿ, ಮಿಸ್ರಿಯಾ, ಕುಮಾರಿ ರೋಹಿತಾಕ್ಷಿ, ಕಾಶಿಫಾ, ಫರ್ಝಾನ ರವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.