ಡೈಲಿ ವಾರ್ತೆ:18 ಜೂನ್ 2023

ರಾಮದುರ್ಗ: ಸಾರಿಗೆ ಬಸ್ ಹತ್ತಲು ನೂಕುನುಗ್ಗಲು, ಜಾರಿ ಬಿದ್ದ ಬಾಲಕಿ (ವಿಡಿಯೋ ವೀಕ್ಷಿಸಿ)

ವಿಡಿಯೋ ವೀಕ್ಷಿಸಿ

ರಾಮದುರ್ಗ(ಬೆಳಗಾವಿ ಜಿಲ್ಲೆ): ಪಟ್ಟಣದಲ್ಲಿ ಭಾನುವಾರ ಸಂಚರಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಏರುವಾಗ ಬಾಲಕಿಯೊಬ್ಬಳು ಜಾರಿ ಬಿದ್ದು ಗಾಯಗೊಂಡ ಘಟನೆ ನಡೆದಿದೆ.

ರಾಮದುರ್ಗ-ಧಾರವಾಡ ಮಾರ್ಗವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಬಸ್ ಪ್ರಯಾಣಿಕರಿಂದ ತುಂಬಿತ್ತು. ಬಾಲಕಿ ಕೂಡ ಅದೇ ಬಸ್ ಏರುತ್ತಿದ್ದಳು. ಆದರೆ, ಆಯತಪ್ಪಿ ಕೆಳಗೆ ಬಿದ್ದಿದ್ದಾಳೆ.

ಇದರಿಂದ ಸಿಟ್ಟಾದ ಬಾಲಕಿ ಪಾಲಕರು ಚಾಲಕ ಮತ್ತು ನಿರ್ವಾಹಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.