


ಡೈಲಿ ವಾರ್ತೆ:21 ಜೂನ್ 2023


ನಡುರಸ್ತೆಯಲ್ಲೇ ಇಂಜಿನಿಯರ್‌ಗೆ ಕಪಾಳಮೋಕ್ಷ ಮಾಡಿದ ಮಹಾರಾಷ್ಟ್ರದ ಶಾಸಕಿ! (ವಿಡಿಯೋ ವೈರಲ್)
ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮಹಿಳಾ ಶಾಸಕಿಯೊಬ್ಬರು ನಗರಪಾಲಿಕೆಯ ಇಂಜಿನಿಯರ್‌ಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೀರಾ ಭಾಯಂದರ್ ಶಾಸಕಿ ಗೀತಾ ಜೈನ್ ಅವರು ಕೆಲವು ಕಟ್ಟಡಗಳನ್ನು ನೆಲಸಮಗೊಳಿಸುವ ಬಗ್ಗೆ ಮೀರಾ ಭಾಯಂದರ್ ಮುನ್ಸಿಪಲ್ ಕಾರ್ಪೊರೇಷನ್‌ನ ಇಬ್ಬರು ಇಂಜಿನಿಯರ್‌ಗಳನ್ನು ನಿಂದಿಸುತ್ತಿರುವುದು ವೀಡಿಯೊ ದಲ್ಲಿ ಕಂಡುಬಂದಿದೆ.
ಎಂಜಿನಿಯರುಗಳು ಕಟ್ಟಡಗಳನ್ನು ಹೇಗೆ ನೆಲಸಮಗೊಳಿಸಿದ್ದು ಏಕೆ ಎಂದು ಜೈನ್ ಪ್ರಶ್ನಿಸಿದರು ಮತ್ತು ಸರಕಾರಿ ನಿರ್ಣಯವನ್ನು (ಜಿಆರ್) ನೀಡಲು ಕೇಳಿಕೊಂಡರು.
ಬಿಜೆಪಿಯ ಮಾಜಿ ಮೇಯರ್ ಆಗಿದ್ದ ಗೀತಾ ಜೈನ್ 2019 ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ.
ಅವರು ಈ ಹಿಂದೆ ಬಿಜೆಪಿ-ಶಿವಸೇನೆ ಸರಕಾರಕ್ಕೆ ಬೆಂಬಲ ನೀಡಿದ್ದರು.