ಡೈಲಿ ವಾರ್ತೆ:22 ಜೂನ್ 2023

ಉಡುಪಿ:ಬ್ಯಾಂಕ್‌ ಖಾತೆ ಕೆವೈಸಿ ಅಪ್‌ಡೇಟ್‌ ನೆಪದಲ್ಲಿ ನಕಲಿ ಕರೆ: 3ಲಕ್ಷಕ್ಕೂ ಅಧಿಕ ಹಣ ವಂಚನೆ!

ಉಡುಪಿಯ ಡೆವಿಡ್ ಅಶೋಕ್ ರೋಡ್ರಿಗಸ್ ಅವರ ಮೊಬೈಲ್ ಗೆ ಕೆ.ವೈ.ಸಿ. ಅಪ್‌‌ಡೇಟ್ ಮಾಡುವ ಬಗ್ಗೆ ಸಂದೇಶ ಮತ್ತು‌ ದೂರವಾಣಿ ಕರೆ‌ ಬಂದು 3 ಲಕ್ಷಕ್ಕೂ ಅಧಿಕ‌ ಹಣ ಕಳೆದುಕೊಂಡ ಘಟನೆ‌ ನಡೆದಿದೆ.

ರೋಡ್ರಿಗಸ್ ಅವರ ಮೊಬೈಲ್ ಗೆ‌ ಕೆವೈಸಿ‌ ಮಾಡುವ ಬಗ್ಗೆ ಸಂದೇಶ ಬಂದಿದ್ದು, ಅದನ್ನು ಬ್ಯಾಂಕ್ ನವರೇ ಕಳಿಸಿರಬಹುದೆಂದು ತಿಳಿದು ಸಂದೇಶದಲ್ಲಿದ್ದ ನಂಬ್ರಕ್ಕೆ ಕರೆ ಮಾಡಿ ಮಾತನಾಡಿರುತ್ತಾರೆ. ಆದ ಬಳಿಕ ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್ ನಂಬ್ರ (+919038279760)ರಿಂದ ಕರೆ ಮಾಡಿ ತಾನು ಕೆನರಾ ಬ್ಯಾಂಕ್ ಹೆಡ್ ಆಫೀಸ್ ನಿಂದ ಮಾತನಾಡುವುದು ಎಂದು ಹೇಳಿ, ನಿಮ್ಮ ಬ್ಯಾಂಕ್ ಖಾತೆಯ ಕೆ.ವೈ.ಸಿ. ಅಪ್‌‌ಡೇಟ್ ಮಾಡದೇ ಇದ್ದಲ್ಲಿ ಅಕೌಂಟ್ ಬ್ಲಾಕ್ ಆಗುವುದು ಎಂದು ನಂಬಿಸಿದ್ದಾನೆ. ನಂತರ 4 ಬಾರಿ OTP ಪಡೆದು, ರೂ. 99,999/-, 99,999/-, 99,997/- ಮತ್ತು ರೂ. 99,994/- ರಂತೆ ಒಟ್ಟು ರೂ. 3,99,989/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾರೆ‌ ಎಂದು ಉಡುಪಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.