ಡೈಲಿ ವಾರ್ತೆ:04 ಜುಲೈ 2023
ಕುಂದಾಪುರ ಗೋಲ್ಡ್ ಜ್ಯುವೆಲ್ಲರ್ಸ ಸಂಸ್ಥೆಯಿಂದ ವಂಚನೆಗೊಳಗಾದವರ ಮನವಿಗೆ ಸ್ಪಂದಿಸಿದ ಸಭಾಪತಿ:ಶೀಘ್ರ ವಿಲೇವಾರಿಗಾಗಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಆದೇಶ
ಬೆಂಗಳೂರು:ಗೋಲ್ಡ್ ಜ್ಯುವೆಲ್ಲರ್ಸ ಕುಂದಾಪುರ ಸಂಸ್ಥೆಯಿಂದ ವಂಚನೆಗೊಳಗಾದ ಗ್ರಾಹಕರು, ಮಾನ್ಯ ಸಭಾಪತಿ ಯು.ಟಿ.ಖಾದರ್ ರವರ ಕರೆ ಮೇರೆಗೆ ಬೆಂಗಳೂರಿಗೆ ತಲುಪಿ, ವಿಷಯದ ತೀವ್ರತೆಯನ್ನು ಮಾನ್ಯ ಸಭಾಪತಿಯವರಿಗೆ ವಿವರಿಸಿದರು.
ತಕ್ಷಣ ಸ್ಪಂದಿಸಿದ ಮಾನ್ಯ ಸಭಾಪತಿ ಯು.ಟಿ.ಖಾದರ್ ರವರು ಸಂಬಂಧ ಪಟ್ಟ ಇಲಾಖೆಯ ಮುಖ್ಯಸ್ಥರುಗಳಿಗೆ ಮೊಬೈಲ್ ಕರೆ ಮಾಡಿ ಶೀಘ್ರ ವಿಲೇವಾರಿಗಾಗಿ ಆದೇಶಿಸಿದರು.
ಈ ಸಂಬಂಧ, ವಂಚನೆಗೊಳಗಾದ ಜನರ ಪರವಾಗಿ ಸ್ಪಂದಿಸಿದ ಮಾನ್ಯ ಸಭಾಪತಿಯವರಿಗೆ ಸತೀಶ್ ಕುಮಾರ್ ಹಾಗೂ ರಷೀದ್ ಕಂಡ್ಲೂರು ಹೃದಯಂತರಾಳದ ಧನ್ಯವಾದಗಳನ್ನು ಸಮರ್ಪಿಸಿದರು.