ಡೈಲಿ ವಾರ್ತೆ:04 ಜುಲೈ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಸಾಗರ-ಸಿಗಂದೂರು ಹೊರಡುವ KSRTC ವಿಶೇಷ ಬಸ್ಸುಗಳು ಸ್ಥಗಿತ: ಖಾಸಗಿ ಬಸ್ ಮಾಲೀಕರ ಆಮಿಷಕ್ಕೆ ಬಲಿಯಾದರೇ KSRTC ಅಧಿಕಾರಿಗಳು ಗಂಭೀರ ಆರೋಪ.?

ಸಾಗರ :ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಸಿಗಂದೂರು ಚೌಡೇಶ್ವರಿ ದೇವಾಲಯವು ನಾಡಿನ ಸುಪ್ರಸಿದ್ಧ ದೇವಸ್ಥಾನವಾಗಿದ್ದೂ, ನಾಡಿನ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುತ್ತಿದ್ದೂ, ಅದರಲ್ಲೂ ಸಿದ್ದರಾಮಯ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣ ಆದೇಶ ಜಾರಿಗೆ ಬಂದ ಮೇಲೆ ಮಹಿಳಾ ಪ್ರವಾಸಿಗರು ರಾಜ್ಯದ ಉದ್ದಗಲದ ಪ್ರವಾಸಿ ತಾಣಗಳಿಗೆ ತುಂಬಿ ತುಳುಕುತ್ತಿದ್ದೂ, ಕರ್ನಾಟಕ ಪ್ರವಾಸೋದ್ಯಮ ಎಂದೂ ಕಂಡರಿಯಾದ ಪ್ರಗತಿ ಹೊಂಡುತ್ತಿದ್ದೂ, ಪ್ರವಾಸೋದ್ಯಮವನ್ನೇ ನಂಬಿಕೊಂಡ ಕುಟುಂಬ ನೆಮ್ಮದಿಯ ಜೀವನ ನೆಡೆಸುತ್ತಿರುವುದು ನಗ್ನಸತ್ಯ.

ಅಪವಾದ ಎಂಬಂತೆ:
ಸಾಗರದ ಸಿಗಂದೂರು ದೇವಾಲಯ ವೀಕ್ಷಣೆ ಆಗಮಿಸುವ ಪ್ರವಾಸಿಗರು ಗಣನೀಯವಾಗಿ ಹೆಚ್ಚಿದ್ದು ಇದರಿಂದ ನಂಬಿಕೊಂಡ ಉದ್ಯಮಗಳು ಪ್ರಗತಿಯಲ್ಲಿರುವ ಹಿನ್ನಲೆಯಲ್ಲಿ ಸಾಗರ KSRTC ಡಿಪೋ ಈ ಹಿಂದೇ ಪ್ರವಾಸಿಗರ ಆಧ್ಯತೆ ಮೇರೆಗೆ ಹೆಚ್ಚುವರಿ ಬಸ್ಸುಗಳನ್ನೂ KSRTC ಬಿಡುತ್ತಿತ್ತು, ಆದರೇ ಕಳೆದ ಹಲವು ದಿನಗಳಿಂದ KSRTC ಬಸ್ ಸಾಗರದಿಂದ ಸಿಗಂದೂರು ಆಗಮಿಸುವ ಪ್ರವಾಸಿಗರಿಗೆ ಆಧ್ಯತೆಯ ಮೇರೆಗೆ ಮೊದಲಿನಂತೆ KSRTC ಅಧಿಕಾರಿಗಳು ಓಡಿಸದೇ ಇರುವ ಹಿಂದೇ ಖಾಸಗಿ ಬಸ್ ಮಾಲೀಕರುಗಳು KSRTC ಅಧಿಕಾರಿಗಳಿಗೆ ಕಾಣದ ಯಾವುದೋ ಆಮಿಷ ಮಾಡಿರುವ ಶಂಕೆ ವ್ಯಕ್ತಪಡಿಸುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು KSRTC ಅಧಿಕಾರಿಗಳ ನಡೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದೂ ಕರ್ನಾಟಕ ರಾಜ್ಯ ಸರ್ಕಾರದ ಸಾರಿಗೆ ಸಚಿವರೂ ಅಕ್ರಮಗಳಲ್ಲಿ ಭಾಗಿಯಾಗಿರಬಹುದಾದ ಅನುಮಾನದ ಕುರಿತು ಸೂಕ್ತ ನ್ಯಾಯಯುತ ತನಿಖೆ ನೆಡೆಸಿ, ಸಾಗರ ಸಿಗಂದೂರು ವೀಕ್ಷಣೆಗೆ ಆಗಮಿಸುವ ಪ್ರವಾಸಿಗರ ಆಧ್ಯತೆ ಮೇರೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ಸೂಕ್ತ KSRTC ಬಸ್ ಕಲ್ಪಿಸುವಂತೆ ಪ್ರವಾಸಿಗರು ಸರ್ಕಾರಕ್ಕೆ ಒತ್ತಾಯ ಮಾಡಿದ್ದಾರೆ.