ಡೈಲಿ ವಾರ್ತೆ: 4 ಜುಲೈ 2023

ಬೈಂದೂರು:ವಿದ್ಯುತ್ ಸಂಪರ್ಕ ಕಡಿತಕ್ಕೆ ಲಂಚ: ಲೋಕಾಯುಕ್ತ ಬಲೆಗೆ ಬಿದ್ದ ಲೈನ್ ಮ್ಯಾನ್

ಬೈಂದೂರು: ಮರ ಕಡಿಯುವ ಮೊದಲು ವಿದ್ಯುತ್ ಲೈನ್ ಕಡಿತಕ್ಕೆ ಲಂಚ ಪಡೆಯುತ್ತಿದ್ದ ಲೈನ್ ಮ್ಯಾನ್ ಇದೀಗ ಲೋಕಾಯುಕ್ತ ಪೊಲೀಸರ ಅತಿಥಿಯಾಗಿದ್ದಾನೆ.

ರಮೇಶ್ ಬಡಿಗೇರ್ ಬಂಧಿತ ಲೈನ್ ಮ್ಯಾನ್
ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಈ ಘಟನೆ ನಡೆದಿದ್ದು. ಮನೆ ಪಕ್ಕದ ಮರ ಕಡಿಯಲು ಅಡ್ಡಿಯಾಗುತ್ತಿದ್ದ ವಿದ್ಯುತ್ ಲೈನ್ ಸಂಪರ್ಕ ಕಡಿತ ಮಾಡಲು ಲೈನ್ ಮ್ಯಾನ್ ರಮೇಶ್ ಎರಡು ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ವೇಳೆ ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.