ಡೈಲಿ ವಾರ್ತೆ: 6 ಜುಲೈ 2023

ವರದಿ: ಅದ್ದಿ ಬೊಳ್ಳೂರು

ಹಳೆಯಂಗಡಿ: ತಡೆಗೋಡೆಯ ಸ್ಲಾಬ್ ಕುಸಿದು ಪಕ್ಕದ ಮನೆಗೆ ಹಾನಿ

ಇತ್ತೀಚೆಗೆ ಸುರಿದ ಧಾರಾಕಾರ ಮಳೆಗೆ ಆವರಣ ಗೋಡೆಯ ಸ್ಲಾಬ್ ಜೊತೆಗೆ ಕಲ್ಲು ಮಣ್ಣುಗಳು ಪಕ್ಕದ ಮನೆಯ ಮೇಲೆ ಕುಸಿರು ಬಿದ್ದು, ಮನೆ ಭಾಗಸ ಹಾನಿಗೊಳಗಾದ ಘಟನೆ ಹಳೆಯಂಗಡಿ ಸಮೀಪದ ಪಕ್ಷಿಕೆರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಂಗಿಬೊಟ್ಟು ಎಂಬಲ್ಲಿ ಸಂಭವಿಸಿದೆ.

ಭಾರಿ ಗಾತ್ರದ ಕಾಂಕ್ರೀಟ್ ಸ್ಲಾಬ್ ಕುಸಿದು ಮನೆಯ ಗೋಡೆಗೆ ತಾಗಿಕೊಂಡು ನಿಂತಿದ್ದು ಮನೆ ಮಂದಿ ಆತಂಕದಲ್ಲಿದ್ದಾರೆ.

ಕಳೆದ ಬಾರಿ ಸ್ಲಾಬ್ ಕುಸಿದು ಮನೆಯ ಗೋಡೆಗೆ ತಾಗಿಕೊಂಡು ಬಿದ್ದ ಕಾರಣ ಸ್ಥಳೀಯ ಗ್ರಾಮ ಪಂಚಾಯಿತ್ ಗೆ ದೂರು ಸಲ್ಲಿಸಲಾಗಿತ್ತು. ಈ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರು ಸದಸ್ಯರು ಹಾಗೂ ಗ್ರಾಮ ಲೆಕ್ಕಿಗರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮನೆಗೆ ಸಂಭವಿಸಿದ ಹಾನಿಯ ಪರಿಹಾರ ರೂಪವಾಗಿ ಸರಕಾರದಿಂದ ಒಂದಿಷ್ಟು ಮೊತ್ತವನ್ನು ನೀಡಿದ್ದರು ಎನ್ನಲಾಗಿದೆ. ಆದರೆ ಕುಸಿದ ಸ್ಲಾಬ್ ಅನ್ನು ಸರಿಪಡಿಸದೆ ಹಾಗೆ ಬಿಟ್ಟಿದ್ದು ಈ ಬಾರಿಯ ಮಳೆಗಾಲದಲ್ಲಿ ಮೇಲಿಂದ ಕಲ್ಲು ಮಣ್ಣುಗಳು ಮನೆಯ ಮುಂದೆ ಬೀಳುತ್ತಿದ್ದು ಇನ್ನಷ್ಟು ಹಾನಿ ಉಂಟು ಮಾಡಿದೆ ಎಂದು ಮನೆಯವರು ಅಳಲು ತೋಡಿಕೊಂಡಿದ್ದಾರೆ.