ಡೈಲಿ ವಾರ್ತೆ: 12 ಜುಲೈ 2023

ಬಂಟ್ವಾಳ : ಹಾಸಿಗೆ ಹಾಗೂ ತಲೆದಿಂಬು ತಯಾರಿಕಾ ಘಟಕಕ್ಕೆ ಬೆಂಕಿ, ಲಕ್ಷಾಂತರ ರೂ ನಷ್ಟ.

ಬಂಟ್ವಾಳ : ಹಾಸಿಗೆ ಹಾಗೂ ತಲೆದಿಂಬು ತಯಾರಿಕಾ ಪ್ಯಾಕ್ಟರಿಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಸಜೀಪ ಗ್ರಾಮದ ಆಲಾಡಿ ಸಮೀಪದ ಮುಂಡಕೋಡಿ ಎಂಬಲ್ಲಿ ಬುಧವಾರ ನಡೆದಿದೆ.

ಸಜೀಪ ನಿವಾಸಿ ಲತೀಫ್ ಎಂಬವರಿಗೆ ಸೇರಿದ ಈ
ಪ್ಯಾಕ್ಟರಿಯೊಳಗೆ ಲಕ್ಷಾಂತರ ರೂ.ಮೌಲ್ಯದ ಮೆಷಿನರಿಗಳು, ತಲೆದಿಂಬು ಹಾಗೂ ಹಾಸಿಗೆಗಳು ದಸ್ತಾನು ಇರಿಸಲಾಗಿತ್ತು.

ಬೆಂಕಿ ಹಚ್ಚಿಕೊಂಡ ತಕ್ಷಣವೇ ನೀರು ಹಾಯಿಸುವ ಮೂಲಕ ಹೆಚ್ಚಿನ ಪ್ರಮಾಣದ ನಷ್ಟವನ್ನು ತಡೆಯಲಾಗಿದೆ. ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿದ್ದು , ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.