ಡೈಲಿ ವಾರ್ತೆ: 14 ಜುಲೈ 2023
ವರದಿ: ವಿದ್ಯಾಧರ ಮೊರಬಾ
ವಕೀಲರ ಮೇಲೆ ಹಲ್ಲೆ ಖಂಡಿಸಿ ಅಂಕೋಲ ವಕೀಲರ ಸಂಘದಿಂದ ಮುಖ್ಯಮಂತ್ರಿ, ಗೃಹಮಂತ್ರಿಗೆ ಮನವಿ.
ಅಂಕೋಲಾ : ಹಳಿಯಾಳ ತಾಲೂಕಿನ ವಕೀಲರ ಸಂಘದ ಅಧ್ಯಕ್ಷರಾದ ಎಮ್.ವಿ.ಅಸ್ಬೇಕರ ಇವರ ಮೇಲೆ ಕಕ್ಷಿಗಾರರೊಬ್ಬರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ಅಂಕೋಲಾ ವಕೀಲರ ಸಂಘದ ವತಿಯಿಂದ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಕಕ್ಷಿಗಾರರೊಬ್ಬರು ವಕೀಲರ ಸಂಘದ ಅಧ್ಯಕ್ಷರೂ ಆಗಿರುವ ವಕೀಲ ಎಮ್ ವಿ ಅಸ್ಬೇಕರ ಅವರ ಮೇಲೆ ಮಾರಣಾಂತಿಕ ಹಲ್ಲೆಯನ್ನು ತಾಲೂಕಾ ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ. ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಎಂದರು.
ವಕೀಲರು ಸಾರ್ವಜನಿಕರ ಪ್ರತಿನಿಧಿಯಾಗಿ ಕೆಲಸ ಮಾಡುವುದರಿಂದ ಅವರಿಗೆ ತಮ್ಮ ಕೆಲಸವನ್ನು ನಿರ್ವಹಿಸಿವಾಗ ರಕ್ಷಣೆಯ ಅಗತ್ಯವಿರುತ್ತದೆ. ಆದ್ದರಿಂದ ವಕೀಲರ ಸಂರಕ್ಷಣಾ ಅಧಿನಿಯಮವನ್ನು ಅತೀ ಶೀಘ್ರವಾಗಿ ಜಾರಿಗೆ ತರುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ತಹಶೀಲದ್ದಾರರ ಪರವಾಗಿ ಉಪತಹಶೀಲ್ದಾರ ಸುರೇಶ ಹರಿಕಂತ್ರ ಮನವಿಯನ್ನು ಸ್ವೀಕರಿಸಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ನಿತ್ಯಾನಂದ ಕವರಿ, ಖಜಾಂಚಿ ಆರ್ ಟಿ ಗೌಡ, ಸಹಕಾರ್ಯದರ್ಶಿ ಮಮತಾ ಕೆರೆಮನೆ, ಸುಭಾಶ ನಾರ್ವೇಕರ, ಉಮೇಶ ನಾಯ್ಕ, ಬಿ ಡಿ ನಾಯ್ಕ, ನಾಗಾನಂದ ಬಂಟ, ಬಿ ಟಿ ನಾಯಕ, ಗಜಾನನ ನಾಯ್ಕ, ಮನೀಷ ಆನಂದಗಿರಿ, ಸುರೇಶ ಬಾನಾವಳಿಕರ, ಪ್ರತಿಭಾ ನಾಯ್ಕ, ಹೀನಾ ಕೌಸರ, ತೇಜು ಬಂಟ, ಸಂತೋಷ ನಾಯ್ಕ, ಜಗದೀಶ ಹಾರವಾಡೇಕರ, ರಾಜು ಹರಿಕಂತ್ರ ಇದ್ದರು.ರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ಅಂಕೋಲಾ ವಕೀಲರ ಸಂಘದ ವತಿಯಿಂದ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆ ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಕಕ್ಷಿಗಾರರೊಬ್ಬರು ವಕೀಲರ ಸಂಘದ ಅಧ್ಯಕ್ಷರೂ ಆಗಿರುವ ವಕೀಲ ಎಮ್ ವಿ ಅಸ್ಬೇಕರ ಅವರ ಮೇಲೆ ಮಾರಣಾಂತಿಕ ಹಲ್ಲೆಯನ್ನು ತಾಲೂಕಾ ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ. ತಪ್ಪಿತಸ್ಥರ ವಿರುದ್ಧ ಕಾನೂನಿನ ಪ್ರಕಾರ ಕ್ರಮ ಜರುಗಿಸಬೇಕು ಎಂದರು. ವಕೀಲರು ಸಾರ್ವಜನಿಕರ ಪ್ರತಿನಿಧಿಯಾಗಿ ಕೆಲಸ ಮಾಡುವುದರಿಂದ ಅವರಿಗೆ ತಮ್ಮ ಕೆಲಸವನ್ನು ನಿರ್ವಹಿಸಿವಾಗ ರಕ್ಷಣೆಯ ಅಗತ್ಯವಿರುತ್ತದೆ. ಆದ್ದರಿಂದ ವಕೀಲರ ಸಂರಕ್ಷಣಾ ಅಧಿನಿಯಮವನ್ನು ಅತೀ ಶೀಘ್ರವಾಗಿ ಜಾರಿಗೆ ತರುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ. ತಹಶೀಲದ್ದಾರರ ಪರವಾಗಿ ಉಪತಹಶೀಲ್ದಾರ ಸುರೇಶ ಹರಿಕಂತ್ರ ಮನವಿಯನ್ನು ಸ್ವೀಕರಿಸಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ವಕೀಲರ ಸಂಘದ ಉಪಾಧ್ಯಕ್ಷ ನಿತ್ಯಾನಂದ ಕವರಿ, ಖಜಾಂಚಿ ಆರ್ ಟಿ ಗೌಡ, ಸಹಕಾರ್ಯದರ್ಶಿ ಮಮತಾ ಕೆರೆಮನೆ, ಸುಭಾಶ ನಾರ್ವೇಕರ, ಉಮೇಶ ನಾಯ್ಕ, ಬಿ ಡಿ ನಾಯ್ಕ, ನಾಗಾನಂದ ಬಂಟ, ಬಿ ಟಿ ನಾಯಕ, ಗಜಾನನ ನಾಯ್ಕ, ಮನೀಷ ಆನಂದಗಿರಿ, ಸುರೇಶ ಬಾನಾವಳಿಕರ, ಪ್ರತಿಭಾ ನಾಯ್ಕ, ಹೀನಾ ಕೌಸರ, ತೇಜು ಬಂಟ, ಸಂತೋಷ ನಾಯ್ಕ, ಜಗದೀಶ ಹಾರವಾಡೇಕರ, ರಾಜು ಹರಿಕಂತ್ರ ಇದ್ದರು.