



ಡೈಲಿ ವಾರ್ತೆ: 15 ಜುಲೈ 2023


ಮಣಿಪಾಲ: ಬಸ್- ದ್ವಿಚಕ್ರ ವಾಹನದ ನಡುವೆ ಅಪಘಾತ; ಗಾಯಗೊಂಡ ತಂದೆ, ಮಗಳು
ಮಣಿಪಾಲ: ಇಲ್ಲಿನ ಟೈಗರ್ ಸರ್ಕಲ್ ಬಳಿ ಬಸ್ ಹಾಗು ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿ ತಂದೆ, ಮಗಳು ಗಾಯಗೊಂಡ ಘಟನೆ ಶನಿವಾರ ಸಂಜೆ ನಡೆದಿದೆ.
ಉಡುಪಿಯಿಂದ ಪರ್ಕಳಕ್ಕೆ ತಂದೆ ಮಗಳಿದ್ದ ಮೊಪೆಡ್ ವಾಹನಕ್ಕೆ ಉಡುಪಿಯಿಂದ ಮಣಿಪಾಲಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ಟೈಗರ್ ಸರ್ಕಲ್ ಬಳಿ ಯು ಟರ್ನ್ ಹೊಡೆಯುತ್ತಿದ್ದ ವೇಳೆ ಢಿಕ್ಕಿ ಹೊಡೆದಿದೆ. ಮೊಪೆಡ್ ನಲ್ಲಿದ್ದ ಶ್ರಿದೇವಿ ಪ್ರಭು (42) ಎಂಬವರು ಗಾಯಗೊಂಡಿದ್ದು, ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇವರ ತಂದೆ ರಮೇಶ್ ಪ್ರಭು ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.