ಡೈಲಿ ವಾರ್ತೆ:17 ಜುಲೈ 2023
“ಪತ್ರಕರ್ತ, ವರದಿಗಾರ – ಕೆ. ಸಂತೋಷ್ ಶೆಟ್ಟಿ ,ಮೊಳಹಳ್ಳಿ ಇವರಿಗೆ “ವಿಶ್ವ ಮಾಧ್ಯಮ ಸೇವಾ ರತ್ನ ಪ್ರಶಸ್ತಿ – 2023 ಪ್ರಕಟ!
ಸುದ್ದಿ:ಧಾರವಾಡ ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹಾಗೂ ಪ್ರಜಾದರ್ಶನ ಕನ್ನಡ ಮಾಸಪತ್ರಿಕೆ ಮತ್ತು ರಂಗಾಯಣ ಸಾಹಿತ್ಯ ಸಂಘ-ಧಾರವಾಡ, ಏರ್ಪಡಿಸುತ್ತಿರುವ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ ದ್ವಿತೀಯ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ “ವಾರ್ಷಿಕ ರಾಷ್ಟ್ರೀಯ ಪ್ರಶಸ್ತಿ 2023/2024 ಘೋಷಣೆಯಾಗಿದೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಜಾಡಿ ಮನೆ – ಶ್ರೀಯುತ ಜಗನ್ನಾಥ್ ಶೆಟ್ಟಿ ಮತ್ತು ವಸಂತಿ ಶೆಟ್ಟಿ ಅವರ ಪುತ್ರರಾದ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರಿಗೆ ರಾಷ್ಟ್ರೀಯ ಮಾಧ್ಯಮ ಸೇವ ರತ್ನ ಪ್ರಶಸ್ತಿ 2023 ಪ್ರಕಟವಾಗಿದೆ.
ಕಳೆದ ಎರಡು ವರುಷಗಳಿಂದ ಸಮಾಜಮುಖಿ ಚಿಂತನೆ ಚಿಂತನೆ ಹಾಗೂ ವೈಶಿಷ್ಟ್ಯ ಬರಹಗಳನ್ನ ಪ್ರತಿನಿತ್ಯ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯಲ್ಲಿ ವಿಶ್ವ ದರ್ಶನ ವಿಶೇಷ ವರದಿ ಎಂಬ ಹೆಸರಿನಲ್ಲಿ ಪ್ರಕಟವಾಗುತ್ತಿರುವುದು ನಾಡಿನ ಜನತೆಗೆ ತಿಳಿದಿರುವ ವಿಚಾರ. ಕಲೆ ,ಸಂಸ್ಕೃತಿ, ಸಾಮಾಜಿಕ ವಿದ್ಯಮಾನ, ಪರಿಸರ, ರಾಜಕೀಯ ಸಿನಿಮಾ ಹಾಗೂ ಕರ್ನಾಟಕದ ವಿಶಿಷ್ಟ ಹಾಗೂ ವೈವಿಧ್ಯಮಯ ಕಲೆಗಳನ್ನ ಮತ್ತು ಪ್ರಪಂಚದ ಆಗುಹೋಗು ವಿದ್ಯಮಾನಗಳನ್ನು ವಿಶೇಷ ರೀತಿಯಲ್ಲಿ ಮತ್ತು ಅನಾರೋಗ್ಯ ಪೀಡಿತ ವ್ಯಕ್ತಿಗಳ ಪರವಾಗಿ ಪ್ರೋತ್ಸಾಹ ನೀಡುವಂತಹ ದೃಷ್ಟಿಯಲ್ಲಿ ನಿರಂತರ ವರದಿ ಪ್ರಕಟಿಸಿ ಫಲಶ್ರುತಿ ಕಂಡಂತಹ ಉದಾರಣೆಗಳು ಇದೆ. ಅದೇ ರೀತಿ 2015 ರಲ್ಲಿ ಉತ್ತಮ ವರದಿಗಾರಿಕೆ ಪ್ರಶಸ್ತಿ, 2016 ರಲ್ಲಿ ಬೆಂಗಳೂರಿನ ಕೆಂಪೇಗೌಡ ಪ್ರಶಸ್ತಿ ಹಾಗೂ 2017 ರಲ್ಲಿ ರಾಷ್ಟ್ರೀಯ ಮಾಧ್ಯಮ ಭೂಷಣ ಪ್ರಶಸ್ತಿ, ದಿ ಮೀಡಿಯಾ ಅಸೋಸಿಯೇಷನ್ ಬೆಂಗಳೂರು ಕೊಡಮಾಡಿದ ಮಾಧ್ಯಮ ಪ್ರಶಸ್ತಿ, ಮ್ಯಾಕ್ಸ್ ಇನ್ಸೂರೆನ್ಸ್ ಪ್ರೈವೇಟ್ ಲಿಮಿಟೆಡ್ ಕೊಡ ಮಾಡಿದ ಶ್ರೇಷ್ಠ ಬರಹಗಾರ ಪ್ರಶಸ್ತಿ, ರಾಣೆಬೆನ್ನೂರು ವಿದ್ಯಾವರ್ಧಕ ಸಂಘ ನೀಡಿದ ಪಬ್ಲಿಕ್ ರೈಟರ್ ಅವಾರ್ಡ್, ಹೀಗೆ ಹತ್ತು ಹಲವು ರಾಷ್ಟ್ರೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಇವರು ಇದೀಗ ವಿಶ್ವ ದರ್ಶನ ಕನ್ನಡ ದಿನಪತ್ರಿಕೆ, ಪ್ರಜಾದರ್ಶನ ಮಾಸ ಪತ್ರಿಕೆ, ಹಾಗೂ ಸಾಹಿತ್ಯ ಸಂಘ ರಂಗಾಯಣ, ಧಾರವಾಡ ನೀಡುತ್ತಿರುವ ರಾಷ್ಟ್ರೀಯ ಮಾಧ್ಯಮ ಸೇವ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸುದ್ದಿ ಮನೆ ಕನ್ನಡ ವಾರಪತ್ರಿಕೆಯ ಭಾವದೀಪ್ತಿ ಅಂಕಣ, ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ ಬೆಂಗಳೂರು ಮುಖ್ಯಸ್ಥರಾಗಿ, ಉತ್ತರ ಕರ್ನಾಟಕದ ಕಲ್ಯಾಣ ವೈಭವ ಪತ್ರಿಕೆ ಹಾಗೂ ಡೈಲಿ ವಾರ್ತೆ ಕನ್ನಡ ಸುದ್ದಿ ವೆಬ್ಸೈಟ್, ಪಬ್ಲಿಕ್ ಫೈಲ್ ಕನ್ನಡ ಪಾಕ್ಷಿಕ ಪತ್ರಿಕೆ ಉಡುಪಿ ಇದರ ಪ್ರಧಾನ ರಾಜ್ಯ ವಿಶೇಷ ವರದಿಗಾರರಾಗಿ, ವಿವಿಧ ಪತ್ರಿಕೆಯಲ್ಲಿ ಅಂಕಣಕಾರಕಕಾರರಾಗಿ, ಇದುವರೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ ಕಳಕಳಿ ಹಾಗೂ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವಲ್ಲಿ ಬರಹದ ಮೂಲಕ ಪತ್ರಿಕೋದ್ಯಮದ ಶ್ರೇಷ್ಠತೆಯನ್ನು ಹೆಚ್ಚಿಸಿರುವ ಇವರಿಗೆ ಮಾಧ್ಯಮ ಸೇವಾ ರತ್ನ ಪ್ರಶಸ್ತಿ- 2023 ಪ್ರಕಟವಾಗಿದೆ. ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ದಿನಾಂಕ 20.07.2023ನೇ ಗುರುವಾರ ಬೆಳಿಗ್ಗೆ 10 ಗಂಟೆಗೆ ಧಾರವಾಡದ ರಂಗಾಯಣ ಸಾಹಿತ್ಯ ಸಂಘದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ನೆರವೇರಲಿದೆ.
ಕಾರ್ಯಕ್ರಮದಲ್ಲಿ ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಇವರು ಪತ್ರಿಕೋದ್ಯಮ ಸಮಾಜ ಮತ್ತು ಜನತೆಯ ಬಗ್ಗೆ ಪ್ರಾಸ್ತಾವಿಕ ಮಾತನಾಡಲಿದ್ದಾರೆ. ನಾಡಿನ ಹೆಸರಾಂತ ಮಠಾಧಿಪತಿಗಳು, ವಕೀಲರು ,ಪತ್ರಕರ್ತ ಮಿತ್ರರು, ಸಾಹಿತ್ಯ ಆಸಕ್ತರು ಹಾಗೂ ಚಲನಚಿತ್ರ ನಟರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರಧಾನ ನೆರವೇರಲಿದೆ.