ಡೈಲಿ ವಾರ್ತೆ: 19 ಜುಲೈ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ನಾಯಿಗಳ ದಾಳಿಗೆ ಜಾನುವಾರು ಬಲಿ:ಘನ ತ್ಯಾಜ್ಯ ವಿಲೇವಾರಿ ಘಟಕದ ಬೇಜವಾಬ್ದಾರಿ – ಕಾರ್ಗಲ್ ಜೋಗ ಪಟ್ಟಣ ಪಂಚಾಯಿತಿ ದುರಾಡಳಿತ!

ಕಾರ್ಗಲ್ : ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ವಿಧಾನಸಭಾ ಕ್ಷೇತ್ರದ ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿಯ ದುರಾಡಳಿತದಿಂದ ಇಡುವಾಣಿ ಭಾಗದ ಜನಜೀವನ ಜಾನವಾರುಗಳು ಜೀವ ಭಯದಿಂದ ಬದುಕುವ ಸ್ಥಿತಿಗೆ ತಲುಪಿದೆ.

ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿಯ ಘನ ವಿಲೇವಾರಿ ಘಟಕವು ಕಾರ್ಗಲ್ ಪಟ್ಟಣ ಪಂಚಾಯಿತಿ ಹಾಗೂ ತಲವಾಟ ಗ್ರಾಮ ಪಂಚಾಯಿತಿ ಗಡಿ ಭಾಗದಲ್ಲಿದ್ದೂ, ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿಯ ಸೂಕ್ತ ನಿರ್ವಹಣೆಯಿಲ್ಲದೇ ಘನ ವಿಲೇವಾರಿ ಘಟಕ ತುಂಬಾ ಗಬ್ಬೆದ್ದು ಹೋಗಿದ್ದೂ, ನಾಯಿಗಳ ಹಾವಳಿ ಮಿತಿಮೀರಿದ್ದು ರಸ್ತೆಬದಿ ಶಾಲಾ ಮಕ್ಕಳು, ಹಿರಿಯ ನಾಗರೀಕರು, ಸಾರ್ವಜನಿಕರು, ಜಾನವಾರುಗಳು ಓಡಾಡುವುದೇ ದುಸ್ಥರವಾಗಿದ್ದೂ ಜೀವ ಕೈಯಲ್ಲಿ ಹಿಡಿದುಕೊಂಡು ಬದುಕುವ ಸ್ಥಿತಿ ನಿರ್ಮಾಣವಾಗಿದೆ

ಕೂಡಲೇ ಶಿವಮೊಗ್ಗ ಜಿಲ್ಲಾಧಿಕಾರಿಗಳು ವಿಶೇಷ ಪ್ರಕರಣ ಎಂದೂ ನೊಂದ ಸಾರ್ವಜನಿಕರ ಮನವಿಯನ್ನು ಪುರಸ್ಕರಿಸಿ ಕಾರ್ಗಲ್ – ಜೋಗ ಪಟ್ಟಣ ಪಂಚಾಯಿತಿ ಬೇಜವಾಬ್ದಾರಿ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡು ಘನ ವಿಲೇವಾರಿ ಘಟಕವನ್ನೂ ಸೂಕ್ತ ನಿರ್ವಹಣೆ ಮಾಡಲು ಕ್ರಮವಹಿಸಲು ನೊಂದ ಘನ ವಿಲೇವಾರಿ ಘಟಕದ ಸುತ್ತಮುತ್ತಲಿನ ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಕೆ.