ಡೈಲಿ ವಾರ್ತೆ:20 ಜುಲೈ 2023

ನುಗ್ಗೆಕಾಯಿ ಸೇವನೆಯಿಂದ ದೇಹಕ್ಕೆ ಸಿಗುವ ಲಾಭಗಳೇನು ಗೊತ್ತಾ.?

ನುಗ್ಗೆಕಾಯಿ ತಿಂದರೆ ಅದರಿಂದ ಹಲವಾರು ರೀತಿಯ ಲಾಭಗಳು ಇವೆ ಎಂದು ನಮ್ಮ ಹಿರಿಯರು ಹೇಳುತ್ತಲಿದ್ದರು. ನುಗ್ಗೆಕಾಯಿ ಬಳಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ ಬನ್ನಿ.

1) ಹೈ ಬಿಪಿ ಇದ್ದವರು ನುಗ್ಗೇಕಾಯಿ ಸೇವಿಸಬೇಕು.
2) ಮೊಡವೆ ವಿರುದ್ಧ ಹೋರಾಡುವುದು ಚರ್ಮದ ಕೆಲವೊಂದು ಸಮಸ್ಯೆಗಳಾಗಿರುವಂತಹ ಮೊಡವೆ ಹಾಗೂ ಬೊಕ್ಕೆಯನ್ನು ಇದು ದೂರವಿಡುವುದು. ರಕ್ತವನ್ನು ಶುದ್ದೀಕರಿಸುವ ಇದು ರಕ್ತದಲ್ಲಿ ಇರುವಂತಹ ಎಲ್ಲಾ ರೀತಿಯ ವಿಷಕಾರಿ ಅಂಶವನ್ನು ಹೊರಗೆ ಹಾಕುವುದು.
3) ನಿಯಮಿತ ರೂಪದಲ್ಲಿ ನುಗ್ಗೇಕಾಯಿ ಸೇವಿಸಿದ್ದಲ್ಲಿ ಸಮಯಕ್ಕೂ ಮೊದಲು ಚರ್ಮ ಸುಕ್ಕುಗಟ್ಟುವುದನ್ನು ತಡಿಯಬುಹುದು.
4) ಮಂಡಿ ನೋವು, ಮೈ ಕೈ ನೋವಿನಿಂದ ನೀವು ಬಳಲುತ್ತಿದ್ದಲ್ಲಿ, ನುಗ್ಗೇಕಾಯಿ ಸೇವನೆ ಮಾಡಿ. ನುಗ್ಗೇಕಾಯಿಯನ್ನು ಎಣ್ಣೆಯಲ್ಲಿ ಕಾಯಿಸಿ, ನುಗ್ಗೇ ಎಣ್ಣೆ ತಯಾರಿಸಿ, ಆ ಎಣ್ಣೆಯನ್ನ ಮಂಡಿ ನೋವಿಗೆ ಅಥವಾ ಮೊಣಕೈ ನೋವಿದ್ದ ಜಾಗದಲ್ಲಿ ಮಸಾಜ್ ಮಾಡಿಕೊಂಡು, ಆ ಜಾಗದಲ್ಲಿ ಬಟ್ಟೆ ಸುತ್ತಿಕೊಳ್ಳಿ.
5) ಗರ್ಭಿಣಿಯರು ನುಗ್ಗೇಕಾಯಿ ಸೇವನೆ ಮಾಡುವುದು ಮೆದುಳಿನ ವಿಕಾಸಕ್ಕೆ ಒಳ್ಳೆಯದು. ಅಲ್ಲದೇ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಆರೋಗ್ಯಕ್ಕೂ ಒಳ್ಳೆಯದು.
6) ಮಕ್ಕಳು ನುಗ್ಗೇಕಾಯಿ ತಿನ್ನುವುದರಿಂದ ಅವರ ಬೆಳವಣಿಗೆಗೆ ಇದು ಸಹಕಾರಿಯಾಗಿದೆ. ನುಗ್ಗೇಕಾಯಿಯಲ್ಲಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಿದ್ದು, ಮಕ್ಕಳಿಗೆ ಕ್ಯಾಲ್ಸಿಯಂನ ಅವಶ್ಯಕತೆ ಹೆಚ್ಚಿರುತ್ತದೆ. ಹೀಗಾಗಿ ಮಕ್ಕಳು ನುಗ್ಗೇಕಾಯಿ ತಿನ್ನುವುದು ಒಳ್ಳೆಯದು.
7) ಪುರುಷರಲ್ಲಿ ಲೈಂಗಿಕ ಸಮಸ್ಯೆ ಇದ್ದಲ್ಲಿ ನುಗ್ಗೇಕಾಯಿ ಸೇವನೆ ಇದಕ್ಕೆ ಉತ್ತಮ ಪರಿಹಾರ.
8) ವಾರದಲ್ಲಿ ಮೂರು ಬಾರಿ ನುಗ್ಗೇಕಾಯಿ ಸೇವನೆ ತೂಕ ಕಳೆದುಕೊಳ್ಳುವುದರಲ್ಲಿ ಸಹಾಯವಾಗಿದೆ. ಆದ್ರೆ ನುಗ್ಗೇಕಾಯಿ ಸಾರು ಮಾಡುವಾಗ ಎಣ್ಣೆಯ ಉಪಯೋಗ ಕಡಿಮೆ ಇರಲಿ.
9) ನಿಯಮಿತವಾಗಿ ನುಗ್ಗೇಕಾಯಿ ತಿನ್ನುವುದರಿಂದ ಕೂದಲಿನ ಆರೋಗ್ಯ ವೃದ್ಧಿಯಾಗುತ್ತದೆ. ಸಮಯಕ್ಕೂ ಮುನ್ನ ಕೂದಲು ಬೆಳ್ಳಗಾಗುವುದಿಲ್ಲ. ಮತ್ತು ಕೂದಲಿನ ಬುಡ ಗಟ್ಟಿಗೊಳ್ಳುತ್ತದೆ.
10) ನುಗ್ಗೆಕಾಯಿಯಲ್ಲಿ ಕೆಲವೊಂದು ಪ್ರಮುಖ ಪೋಷಕಾಂಶಗಳು ಇದ್ದು, ನಿಯಮಿತವಾಗಿ ಸೇವನೆ ಮಾಡಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುವುದು. ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡು ಹೃದಯದ ಆರೋಗ್ಯ ಸುಧಾರಿಸುವುದು. ರಕ್ತವನ್ನು ದಪ್ಪವಾಗಿಸುವ ಮತ್ತು ಹೃದಯದ ಕಾರ್ಯವು ಸೂಕ್ತವಾಗಿ ಇರುವಂತೆ ನೋಡಿಕೊಳ್ಳುವುದು.
11) ಪಿತ್ತಜನಕಾಂಗ ಕಾಯಿಲೆಗಳು ದೂರವಾಗುತ್ತವೆ.
12) ಜಂತು ಹುಳುಗಳನ್ನು ನಾಶ ಮಾಡುತ್ತವೆ.

Disclaimer : ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಡೈಲಿ ವಾರ್ತೆ ನ್ಯೂಸ್ ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ಇದಕ್ಕೆ ಜವಾಬ್ದಾರಿಯಲ್ಲ.