ಡೈಲಿ ವಾರ್ತೆ:21 ಜುಲೈ 2023

ಊಟದ ನಂತರ ಕೆಲವು ಹವ್ಯಾಸಗಳು ಅರೋಗ್ಯಕ್ಕೆ ಅಪಾಯಕಾರಿ.!

ಊಟದ ನಂತರದ ಕೆಲವು ಹವ್ಯಾಸಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಕೆಲವರು ಊಟದ ನಂತರ ಸಿಗರೇಟ್ ಸೇದುತ್ತಾರೆ. ಇನ್ನು ಕೆಲವರು ಊಟದ ನಂತರ ಟೀ ಕುಡಿಯುತ್ತಾರೆ ಅಥವಾ ಯಾವುದಾದರೂ ಸ್ವೀಟ್ಸ್ ತಿನ್ನುತ್ತಾರೆ. ಈ ರೀತಿ ಮಾಡಿದರೆ ಮಾತ್ರ ಊಟ ಮಾಡಿದ ತೃಪ್ತಿ ನಮಗೆ ಸಿಗುತ್ತದೆ ಎನ್ನುತ್ತಾರೆ. ಆದರೆ, ತಜ್ಞರ ಪ್ರಕಾರ ಈ ಹವ್ಯಾಸಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಬದಲಾಗಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.

ಧೂಮಪಾನ ಸೇವನೆ: ಮೊದಲನೆಯದಾಗಿ ಈ ಹವ್ಯಾಸವೇ ತುಂಬಾ ಅಪಾಯಕಾರಿ. ಇದು ಕ್ಯಾನ್ಸರ್ಕಾರಕ ಮತ್ತು ಉಸಿರಾಟದ ಕಾಯಿಲೆಗಳಿಗೆ ಕಾರಣವಾಗುತ್ತದೆ. ಊಟದ ನಂತರದ ವಿಶ್ರಾಂತಿಗೆ ಧೂಮಪಾನ ಮೊರೆ ಹೋದಲ್ಲಿ, ನಿಮ್ಮ ಚಯಾಪಚಯವು ನಿಧಾನಗೊಂಡು, ದೇಹದಲ್ಲಿ ಕೊಬ್ಬು ಸಂಗ್ರಹವಾಗುತ್ತದೆ ಮತ್ತು ಇದು ಬೊಜ್ಜುಗೆ ಕಾರಣವಾಗುತ್ತದೆ. ಹೀಗಾಗಿ ಊಟದ ನಂತರ ಧೂಮಪಾನ ಹವ್ಯಾಸ ಒಳ್ಳೆಯದಲ್ಲ

ಟೀ ಕುಡಿಯುವುದು: ಊಟದ ನಂತರ ಕೆಲವರು ಟೀ ಅಥವಾ ಕಾಫಿ ಕುಡಿಯುತ್ತಾರೆ. ಕೆಲವರಿಗೆ ಇದು ಚಟವಾಗಿದೆ. ಟೀ ಅಥವಾ ಕಾಫಿ ಕುಡಿಯದಿದ್ದಲ್ಲಿ ಊಟ ಮಾಡಿದ ತೃಪ್ತಿ ಸಿಗುವುದಿಲ್ಲ ಎನ್ನುತ್ತಾರೆ. ಕಾಫಿ ಮತ್ತು ಟೀನಲ್ಲಿರುವ ಕೆಫಿನ್ ಅಂಶ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಸಿಡಿಟಿ ಸಮಸ್ಯೆ ಬರುತ್ತದೆ.

ಊಟದ ತಕ್ಷಣ ಸ್ನಾನ ಮಾಡುವುದು: ಏನಾದರೂ ತಿಂದ ನಂತರ ಸ್ನಾನ ಮಾಡುವುದು ಒಳ್ಳೆಯ ಹವ್ಯಾಸವಲ್ಲ. ಅದು ನಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹಸಿವಾದಾಗ ಊಟ ಮಾಡುತ್ತಾರೆ. ಅದರ ತಕ್ಷಣವೇ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಸರಿಯಾಗಿ ಜೀರ್ಣವಾಗುವುದಿಲ್ಲ. ಆಹಾರವು ಸರಿಯಾಗಿ ಜೀರ್ಣವಾಗದಿದ್ದರೆ, ಅದು ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ ಮತ್ತು ದೇಹಕ್ಕೆ ಪೋಷಕಾಂಶಗಳು ಸರಿಯಾಗಿ ಸಿಗುವುದಿಲ್ಲ, ಇದರಿಂದಾಗಿ ಬೊಜ್ಜು ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ.