ಡೈಲಿ ವಾರ್ತೆ:21 ಜುಲೈ 2023

ದಕ್ಷಿಣ ಕನ್ನಡ: ಮಾದಕ ದ್ರವ್ಯ ಮಿಶ್ರಿತ ಚಾಕಲೇಟ್ ಮಾರಾಟ ಪ್ರಕರಣ ಬೆಳಕಿಗೆ.!

ಮಂಗಳೂರು: ಮಂಗಳೂರಿನಲ್ಲಿ ಮಾದಕ ದ್ರವ್ಯ ಮಿಶ್ರಿತ ಚಾಕಲೇಟ್ ಮಾರಾಟ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಫಳ್ನೀರ್ ಮತ್ತು ಕಾರ್ ಸ್ಟ್ರೀಟ್ನಲ್ಲಿ ಎರಡು ಅಂಗಡಿಗಳಲ್ಲಿ ಮಾದಕ ಚಾಕಲೇಟ್ಗಳನ್ನು ವಶಕ್ಕೆ ಪಡೆಯಲಾಗಿದೆ.

ಈ ಪ್ರಕರಣದಲ್ಲಿ, ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ (45), ಹಾಗೂ ಗುಜರಾತ್ ಮೂಲದ ಮನೋಹರ್ ಶೇಟ್ (49) ಎಂಬುವವರನ್ನು ಬಂಧಿಸಲಾಗಿದೆ. ಈ ಖದೀಮ ಸೋನ್ಕರ್, ಫಳ್ನೀರಿನ ಹೈಲ್ಯಾಂಡ್ ಆಸ್ಪತ್ರೆ ಬಳಿ ಗೂಡಂಗಡಿಯಲ್ಲಿ ಗಾಂಜಾ ತುಂಬಿದ ಚಾಕಲೇಟ್ ಮಾರುತ್ತಿದ್ದ. ಅದೇ ಮನೋಹರ್ ಶೇಟ್ ಕಾರ್ ಸ್ಟ್ರೀಟ್ ಬಳಿಯಲ್ಲಿ ಮಾರುತ್ತಿದ್ದ ಎನ್ನಲಾಗಿದೆ,

ಚಾಕಲೇಟ್ಅಲ್ಲಿ ಏನಿತ್ತು?
ಈ ಚಾಕಲೇಟ್ನಲ್ಲಿ ಗಾಂಜಾವನ್ನು ಮಿಶ್ರಿಸಾಗುತ್ತಿತ್ತು. ಅದಕ್ಕೆ ‘ಮಹಾಶಕ್ತಿ ಮುನಕ್ಕಾ’, ಬಮ್ ಬಮ್ ಮುನಕ್ಕಾ, ಪವರ್ ಮುನಕ್ಕಾ ವಟಿ, ಆನಂದ ಚೂರ್ಣ ಎಂದೆಲ್ಲ ಹೆಸರಿಟ್ಟು ಮಾರಾಟ ಮಾಡಲಾಗುತ್ತಿತ್ತು.
ಮನೋಹರ್ ಶೇಟ್ ಬಳಿ ಮೂರು ಗೋಣಿ ಚೀಲಗಳಲ್ಲಿ ಇಟ್ಟಿದ್ದ 48 ಸಾವಿರ ಮೌಲ್ಯದ ಚಾಕಲೇಟ್ ವಶಕ್ಕೆ ಪಡೆಯಲಾಗಿದೆ. ಖಚಿತ ಮಾಹಿತಿ ಮೇರೆಗೆ ಈ ಮಂಗಳೂರಿನ ಬಂದರು ಮತ್ತು ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.