ಡೈಲಿ ವಾರ್ತೆ:21 ಜುಲೈ 2023

” ಮಕ್ಕಳಿಗೆ ಸಮಾಜದಲ್ಲಿ ಸಂಸ್ಕಾರ, ಆಚಾರ ವಿಚಾರಗಳ ಶಿಕ್ಷಣ ನೀಡಿ, ಬದಲಾಗಿ ಮೌಡ್ಯ ,ಕ್ರೂರ ತನವನ್ನು ಬೆಳೆಸಬೇಡಿ: ಕಾಲಜ್ಞಾನ ಬ್ರಹ್ಮ ಸದ್ಗುರು ಶರಣಬಸವ ಮಹಾಸ್ವಾಮಿಗಳ ಅಭಿಮತ…!”
“ಕಾರ್ಯಕ್ರಮದಲ್ಲಿ ಪತ್ರಕರ್ತ ,ವರದಿಗಾರ, ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ , ಮಾಧ್ಯಮ ಸೇವಾ ರತ್ನ ಪ್ರಶಸ್ತಿ ಪ್ರದಾನ, ಹಾಗೂ ರಾಜ್ಯದ 255 ವಿವಿಧ ಕ್ಷೇತ್ರದ ಸಾಧಕರಿಗೆ ಪ್ರತಿಭಾ ಪುರಸ್ಕಾರ….!”

ಸುದ್ದಿ: ಧಾರವಾಡ: ಮಕ್ಕಳಿಗೆ ಸಮಾಜದಲ್ಲಿ ಸಂಸ್ಕಾರ, ಆಚಾರ ವಿಚಾರಗಳ ಶಿಕ್ಷಣವನ್ನು ನೀಡಿ, ಮೌಡ್ಯ ಮತ್ತು ಕ್ರೂರ ತನದ ಬದುಕನ್ನ ಕೊಡಬೇಡಿ, ಸಮಾಜದ ಅಭಿವ್ಯಕ್ತ ಸ್ವಾತಂತ್ರದಲ್ಲಿ ಮಕ್ಕಳಲ್ಲಿನ ಚಿಂತನೆ ಹಾಗೂ ಪ್ರಾಬಲ್ಯಕ್ಕೆ ಬೇಕಾದಂತಹ ಶಿಸ್ತಿನ ಜೀವನವನ್ನು ಬೆಳೆಸಿಕೊಳ್ಳುವುದರೊಂದಿಗೆ ತಂದೆ ತಾಯಿಯ ಪ್ರೇರಣೆ ಬಹುಮುಖ್ಯ, ಇಂದಿನ ಮಕ್ಕಳು ಮೊಬೈಲ್ ಗಳ ಗೀಳು ಬೆಳೆಸಿಕೊಳ್ಳುವುದರೊಂದಿಗೆ ಆಧ್ಯಾತ್ಮಿಕ, ದೈವಿಕ,ಆಸ್ತಿಕ ನೆಲೆಯಲ್ಲಿ ದುರ್ಬಲರಾಗುತ್ತಿದ್ದಾರೆ. ಬದುಕಿನ ಶಕ್ತಿಯುತ ಸಮಾಜ ನಿರ್ಮಿಸುವಲ್ಲಿ ಇಂದಿನ ಪತ್ರಿಕೋದ್ಯಮ ಹಾಗೂ ಇಂದಿನ ಮಕ್ಕಳು ಕೆಲಸ ಮಾಡಬೇಕಿದೆ ಎಂದು ಕಾಲಜ್ಞಾನ ಮಠ ಗಜೇಂದ್ರಗಡದ ಶಿವಯೋಗಿ ಶರಣಬಸವ ಮಹಾಸ್ವಾಮಿಗಳು ತಮ್ಮ ಆಶೀರ್ವಚನದಲ್ಲಿ ನುಡಿದರು. ಕಾರ್ಯಕ್ರಮದಲ್ಲಿ ಕಾರ್ಯಕ್ರಮದ ಸಂಘಟಕರು, ವಿಶ್ವ ದರ್ಶನ ಪತ್ರಿಕೆಯ ಸಂಪಾದಕರು, ಕಾರ್ಯಕ್ರಮದ ಸಂಘಟಕರಾದ ಎಸ್ಎಸ್ ಪಾಟೀಲ್ ಇವರು ಕಾರ್ಯಕ್ರಮದ ಸಂಪೂರ್ಣ ನೇತೃತ್ವ ವಹಿಸಿದ್ದರು. ಹಾಗೂ ವಿಶ್ವ ದರ್ಶನ ಕನ್ನಡ ದಿನಪತ್ರಿಕೆಯ ದ್ವಿತೀಯ ವಾರ್ಷಿಕೋತ್ಸವ, ಕರ್ನಾಟಕ ಪ್ರಜಾ ದರ್ಶನ ಕನ್ನಡ ಮಾಸಪತ್ರಿಕೆ ಸಂಯುಕ್ತ ಆಶಯದಲ್ಲಿ ವಿಶ್ವ ದರ್ಶನ “ಐಕನ್ ಅವಾರ್ಡ್ “ಹಾಗೂ “ರಾಷ್ಟ್ರೀಯ ಪ್ರಶಸ್ತಿ”ಗಳ ಪ್ರಧಾನ ಸಮಾರಂಭವು ಧಾರವಾಡ ರಂಗಾಯಣ ಸಭಾಭವನದಲ್ಲಿ, ಇತ್ತೀಚಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಹಾಂತೇಶ್ವರ ಮಠ, ನಂದವಾಡಗಿ, ದಿವ್ಯ ಸಾನಿಧ್ಯ ವಹಿಸಿದಂತಹ ಅಭಿನವ ಚೆನ್ನಬಸವ ಶಿವಾಚಾರ್ಯ, ಹಾಗೂ ಪವನ ನೇತೃತ್ವವನ್ನು ವಹಿಸಿದಂತಹ ಶ್ರೀ ರೇವಣ್ಣ ಸಿದ್ದೇಶ್ವರ ,ರಾಜರಾಜೇಶ್ವರಿ ಬ್ರಹ್ಮನ ಮಠ ಅರಳಿಹಳ್ಳಿ, ಶ್ರೀ ವೀರಯ್ಯ ಮಹಾಸ್ವಾಮಿಗಳು ಸಿದ್ದರಾಮೇಶ್ವರ ಮಠ, ಹೊಲಗೇರಿ, ಶ್ರೀ ರೇವಣ್ಣ ಸಿದ್ದಯ್ಯ ಮಠದ, ಅಷ್ಟಲಕ್ಷ್ಮಿ ಮಠ, ಹೊಣೆಹಾಳ ಹಾಗೂ ದಿವ್ಯ ನೇತ್ರತ್ವವನ್ನು ವಹಿಸಿದಂತಹ ಶ್ರೀ ಸದ್ಗುರು ಸಂಗಮೇಶ್ವರ ಶರಣರು, ಸಚಿನಂದ ಆಶ್ರಮ ಅಂಬಾಮಠ, ಸಿಂಧನೂರು. ಶ್ರೀ ಶಿವಕುಮಾರ ಮಹಾಸ್ವಾಮಿಗಳು ಕಾಲಜ್ಞಾನ ಮಠ ರಾಯಚೂರು, ಶ್ರೀ ವೀರಬಸಯ್ಯ ಕಂಡಯ್ಯ ರೇಣುಕಾ ಮಠ, ಶಿವಯೋಗ ಮಂದಿರ ಬಾದಾಮಿ. ಶ್ರೀ ದೇನ ಭಗತ್ ಗುರೂಜಿ ರಾಜಯೋಗ ಆಶ್ರಮ, ಚಳ್ಳಕೆರೆ. ಪ.ಪೂ. ಬಸವರಾಜ ಮಹಾಸ್ವಾಮಿಗಳು ಯಲಾಲಿಂಗೇಶ್ವರ ಮಠ, ಅಬ್ಬಿಗೇರಿ. ಶ್ರೀ ಪ್ರಭುದೇವ ಮಹಾಸ್ವಾಮಿಗಳು ಕಲ್ಮಠ, ಶ್ರೀ ಸಿ. ಬಿ ಮರಿಗೌಡ್ರು ಅಧ್ಯಕ್ಷರು ,ಸದ್ಗುರು ಸಿದ್ದೇಶ್ವರ ಕೇಂದ್ರ ಉಣಕಲ್, ಶ್ರೀ ನಾಗಯ್ಯ ತಾತ ಕಲ್ಮಲಾ, ಸಮಾಜ ಸೇವಕರು, ರಾಯಚೂರು ಹಾಗೂ ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.

ಶ್ರೀ ಬಂಗ್ಲೆ ಮಲ್ಲಿಕಾರ್ಜುನ ರಾಜ್ಯಾಧ್ಯಕ್ಷರು ಕರ್ನಾಟಕ ಕಾರ್ಯನಿರತ ಪತ್ರಕರ್ತನ ಧ್ವನಿ ಬೆಂಗಳೂರು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಸಾಧಕರಿಗೆ ವೇದಿಕೆಯಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕುಂದಾಪುರ ತಾಲೂಕಿನ ಉಡುಪಿ ಜಿಲ್ಲೆಯ, ಮೊಳಹಳ್ಳಿ ಗ್ರಾಮದ ಪತ್ರಕರ್ತರು ಹಾಗೂ ವರದಿಗಾರರಾಗಿ ಕಳೆದ ಹಲವು ವರ್ಷಗಳಿಂದ ವಿವಿಧ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ
ಕೆ.ಸಂತೋಷ ಶೆಟ್ಟಿ ಮೊಳಹಳ್ಳಿ, ಕುಂದಾಪುರ. ಇವರಿಗೆ “ಮಾಧ್ಯಮ ರತ್ನ ಪ್ರಶಸ್ತಿ- 2023” ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಬೇರೆ ,ಬೇರೆ ವಿಭಾಗಗಳಲ್ಲಿ ಸುಮಾರು 255 ಕ್ಕೂ ಹೆಚ್ಚು ಪ್ರಶಸ್ತಿ ಪಡೆದ ಸಾಧಕರಿಗೆ ಒಂದೇ ವೇದಿಕೆಯಲ್ಲಿ ಪ್ರಧಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ -ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ ಇವರು ಪ್ರಾಸ್ತಾವಿಕ ನುಡಿಯೊಂದಿಗೆ ಮಾತನಾಡುತ್ತಾ ” “ಸಮಾಜದಲ್ಲಿ ಪತ್ರಿಕೋದ್ಯಮಗಳ ಮಹತ್ವ ಹಾಗೂ ವಸ್ತುನಿಷ್ಠ ವರದಿಗಳನ್ನು ಕ್ರಮಬದ್ಧವಾಗಿ ನೀಡಿ ಹಾಗೂ ಸಮಾಜದಲ್ಲಿನ ವಿವಿಧ ಪ್ರಕಾರದ ಸಮಸ್ಯೆಗಳನ್ನ ಯಾವ ಮೊಲಾಜಿಗೂ ಒಳಗಾಗದೆ, ನಿರ್ಭಯವಾಗಿ ವರದಿ ಮಾಡುವ ಮೌಲ್ಯಗಾರಿಕೆಯನ್ನ ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸುಭದ್ರ ನಿರ್ಮಾಣದ ಸಮಾಜ ಸಾದ್ಯ, ಪತ್ರಕರ್ತರು ಸಮಾಜದ ಅವಿಭಾಜ್ಯ ಅಂಗದಂತೆ ಕಾರ್ಯನಿರ್ವಹಿಸಿದರೆ ಮಾತ್ರ ಸಮಾಜದ ಒಳಿತುಸಾಧ್ಯ ವಸ್ತುನಿಷ್ಠ ವರದಿಯೇ ಜೀವನವಾಗಬೇಕೆನ್ನುವುದು ಪತ್ರಿಕ ದಿನಾಚರಣೆಯ ಉದ್ದೇಶ. ಪತ್ರಕರ್ತರು ಸಮಾಜದ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುವ ಅಗತ್ಯತೆ ಇಂದಿನ ಸಮಾಜಕ್ಕೆ ಪೂರಕ ಎನ್ನುವಲ್ಲಿ ತಮ್ಮ ವಿಸ್ತಾರವಾದ ಪ್ರಸ್ತಾವಿಕ ನುಡಿ ಯೊಂದಿಗೆ ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು, ಸ್ವಾಮೀಜಿಗಳು, ವಿವಿಧ ಕ್ಷೇತ್ರದ ಸಾಧಕರು, ಪತ್ರಕರ್ತರು, ನಾಡಿನ ಸಾಹಿತಿಗಳು ಹಾಗೂ ಸಾರ್ವಜನಿಕರು, ಇದೇ ಸಂದರ್ಭದಲ್ಲಿ ಹಾಜರಿದ್ದು ಕಾರ್ಯಕ್ರಮ ಸಾಂಗವಾಗಿ ನೆರವೇರಿಸುವಂತೆ ಸಹಕರಿಸಿದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾಧಕರಿಗೆ ಒಂದೇ ವೇದಿಕೆಯಲ್ಲಿ ಭವ್ಯ ಸನ್ಮಾನ ಮಾಡಲಾಯಿತು. ಶಾಶ್ವತ ಫಲಕ, ಸ್ಮರಣಕೆ, ಮೆಡಲ್ ಹಾಗೂ ಮಾಲಾರ್ಪಣೆ ಮಾಡುವುದರೊಂದಿಗೆ ಗೌರವಿಸಲಾಯಿತು.
ಈ ಕಾರ್ಯಕ್ರಮವನ್ನು ಸಂಘಟನಾ ಅಧ್ಯಕ್ಷರಾದ ಎಸ್ ಎಸ್ ಪಾಟೀಲ್ ಸ್ವಾಗತಿಸಿ, ನಿರ್ವಹಿಸಿದರು.