ಡೈಲಿ ವಾರ್ತೆ:22 ಜುಲೈ 2023
ವರದಿ: ವಿದ್ಯಾಧರ ಮೊರಬಾ
ಅಂಕೋಲಾ: ಕಸಾಪ ಜಿಲ್ಲಾ ಘಟದಿಂದ ಅಭಿನಂದನಾ ಕಾರ್ಯಕ್ರಮ – ಧರ್ಮಕ್ಕಿಂತ ಸಂಬಂಧಗಳನ್ನು ಬೆಸೆಯುವ ಭಾಷೆಯೇ ದೊಡ್ಡದು:ಶಾಂತಾರಾಮ ನಾಯಕ
ಅಂಕೋಲಾ : ಕನ್ನಡ ನಾಡಿನಲ್ಲಿ ಯಾವುದೇ ಧರ್ಮಕ್ಕಿಂತ ಮಾನವೀಯ ಸಂಬಂಧಗಳ ನ್ನು ಬೆಸೆಯುವ ಭಾಷೆಯೇ ದೊಡ್ಡದ್ದು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸದ ಜತೆ ವಿಶೇಷತೆ ಇದೆ. ಕನ್ನಡ ಭಾಷೆಯನ್ನು ಉಳಿಸುವ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರಲ್ಲೂ ಇದೆ. ಇಂತಹ ಕನ್ನಡ ಭಾಷೆಯನ್ನು ಬೆಳೆಸುವ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಶ್ಪಾಘನೀಯ ಎಂದು ಹಿರಿಯ ಸಾಹಿತಿ ಹಾಗೂ ನಿಕಟ ಪೂರ್ವ ಜಿಲ್ಲಾ ಸಮ್ಮೇಳನಾಧ್ಯಕ್ಷ ಶಾಂತಾರಾಮ ನಾಯಕ ಹಿಚ್ಕಡ ಹೇಳದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಘಟಕ ಮತ್ತು ಅಂಕೋಲಾ ತಾಲೂಕ ಘಟಕದವರ ಸಹಯೋಗದಲ್ಲಿ ಪಟ್ಟಣದ ಜೈಹಿಂದ್ ಹೈಸ್ಕೂಲಿನ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡ 2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಕನ್ನಷ ಭಾಷಾ ವಿಷಯದಲ್ಲಿ ಶೇ.100 ರಷ್ಟು ಅಂಕಪಡೆದ ವಿದ್ಯಾರ್ಥಿ ಗಳಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡಿಸ್ ಮಾತನಾಡಿ, ಪಠ್ಯಪುಸ್ತಕದ ಜತೆ ಪಾಲಕರು ತಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ನೀಡಬೇಕು. ಶಾರೀರಕವಾಗಿ ಮತ್ತು ಸಾಂಸ್ಕøತಿಕವಾಗಿ ಮಕ್ಕಳು ಬೆಳೆಯಲು ಅವಕಾಶ ಕಲ್ಪಿಸಬೇಕು. ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎನ್.ವಾಸರೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಇದು ಕನ್ನಡದ ಜನ ಸಾಮಾನ್ಯರ ಪರಿಷತ್ ಆಗಿರಬೇಕು. ಕೇವಲ ಸಾಹಿತಿಗಳಿಗೆ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿ ರಬಾರದು. ಇಂಗ್ರೀಷ ಪ್ರಧಾನ ಅಲ್ಲ ಇಂದು ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳನ್ನು ಕೂಡ ಕನ್ನಡ ದಲ್ಲೇ ಬರೆಯುವ ಅವಕಾಶ ಇದೆ. ಇಂಗ್ಲೀಷ ಭಾಷೆಯೂ ಬೇಕು, ಆದರೆ ಕನ್ನಡದ ಮೇಲೆ ಸವಾರಿ ಮಾಡುವ ಇಂಗ್ಲೀಷ ಬೇಡ ಎಂದರು.
ಬಿಇಓ ಮಂಗಳಲಕ್ಷ್ಮೀ ಪಾಟೀಲ, ಸಾಹಿತಿ ಹೊನ್ನಮ್ಮಾ ನಾಯಕ, ಜಿಲ್ಲಾ ಸಮಿತಿ ಗೌರವ ಅಧ್ಯಕ್ಷ ಮರ್ತುಜಾ ಆನೆಹೊಸೂರ, ತಾಲೂಕಾ ಪ್ರಾ.ಶಿ. ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ, ಸರ್ಕಾರಿ ನೌಕರ್ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ಶಾಲಾ ಮುಖ್ಯೋಧ್ಯಾಪಕ ಪ್ರಭಾಕರ ಬಂಟ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ತಾಲೂಕಿನ 50 ವಿದ್ಯಾ ರ್ಥಿಗಳಿಗೆ ಪ್ರತಿಭಾ ಪುರಸ್ಕರ ನೀಡಿ ಗೌರವಿಸಿದರು.
ಕಸಾಪ ತಾಲೂಕ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಸ್ವಾಗವತಿಸಿ, ಪ್ರಾಸ್ತವಿಕ ಮಾತನಾಡಿದರು. ಕಾರ್ಯದರ್ಶಿ ಜಿ.ಆರ್.ತಾಂಡೇಲ ನಿರ್ವಹಿಸಿದರು. ಡಾ.ಪುಷ್ಪಾ ನಾಯ್ಕ, ಸುಜೀತ ನಾಯ್ಕ, ರಫೀಕ ಶೇಖ, ಪ್ರಕಾಶ ಕುಂಜಿ, ಎಂ.ಬಿ.ಆಗೇರ, ತಿಮ್ಮಣ್ಣ ಭಟ್ ಸಹಕರಿದರು.