ಡೈಲಿ ವಾರ್ತೆ:23 ಜುಲೈ 2023
2023-24 ನೇ ಸಾಲಿನ ಲಯನ್ಸ್ ಕ್ಲಬ್ ಬನ್ನಾಡಿ – ವಡ್ಡರ್ಸೆ ಇದರ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಕೋಟ: 2023-24 ನೇ ಸಾಲಿನ ಲಯನ್ಸ್ ಕ್ಲಬ್ ಬನ್ನಾಡಿ-ವಡ್ಡರ್ಸೆ ಇದರ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜು. 22 ರಂದು ಶನಿವಾರ ಸಂಜೆ ಗಂಟೆ 7:00 ಕ್ಕೆ ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನ, ಬನ್ನಾಡಿ ಇಲ್ಲಿ ಜರುಗಿತು.
ಸುರೇಂದ್ರ ಶೆಟ್ಟಿ, ಕೊಮೆ, ಅಚ್ಲಾಡಿ ಅಧ್ಯಕ್ಷರಾಗಿ ಲಯನ್ ಮಹೇಂದ್ರ ಆಚಾರ್ ಮಧುವನ ಕಾರ್ಯದರ್ಶಿಯಾಗಿ ವಸಂತ ವಿ ಶೆಟ್ಟಿ, ಸೂರಿಬೆಟ್ಟು, ಅಚ್ಲಾಡಿ ಕೋಶಾಧಿಕಾರಿಯಾಗಿ ಪಧ ಪ್ರಧಾನ ಸ್ವೀಕರಿಸಿದರು.
ಪದಗ್ರಹಣಾಧಿಕಾರಿಯಾಗಿ ದೂರದ ಸಕಲೇಶಪುರದಿಂದ ಆಗಮಿಸಿದ ಲಯನ್ ಸಂಜೀತ್ ಶೆಟ್ಟಿ ಪಿ.ಎಮ್.ಜೆ.ಎಫ್, (ವೈಸ್ ಮಲ್ಟಿಪಲ್ ಡಿಸ್ಟ್ರಿಕ್ಟ್ ಕೌನ್ಸಿಲ್ ಚಯರ್ ಪರ್ಸನ್ & ಇಮ್ಮಿಡಿಯಟ್ ಪಾಸ್ಟ್ ಡಿಸ್ಟ್ರಿಕ್ಟ್ ಗವರ್ನರ್, ಲಯನ್ ಡಿಸ್ಟ್ರಿಕ್ಟ್ 317 ಡಿ. ಇವರು ನೂತನ ಪಧಾಧಿಕಾರಿಗಳಿಗೆ ಪ್ರಮಾಣ ವಚನ ಭೋಧಿಸಿದರು.
ಪ್ರಥಮ ಉಪ ಜಿಲ್ಲಾ ಗವರ್ನರ್ ಲಯನ್ ಮಹಮ್ಮದ್ ಹನೀಫ್* ಶುಭಾಶಂಸನೆ ಮಾಡಿ,
ನೂತನ ಸದಸ್ಯರಾದ ಅಚ್ಲಾಡಿ ಸೂರಿಬೆಟ್ಟು ಅಶ್ವಥ್ ಶೆಟ್ಟಿ, ಅಚ್ಲಾಡಿ ದಿನೇಶ್ ಶೆಟ್ಟಿ ಹಾಗೂ ಮಾನಂಬಳ್ಳಿ ಹರೀಶ್ ಶೆಟ್ಟಿ ಇವರಿಗೆ ಪ್ರಮಾಣವಚನ ಭೋಧಿಸಿದರು.
ಲಯನ್ಸ್ ಬಂಧುಗಳನ್ನಗಲಿದ ಪಿ.ಡಿ.ಜಿ. ಉಜ್ಜನಪ್ಪ ಹಾಗೂ ಇತ್ತೀಚೆಗೆ ನಿಧನರಾದ ಪೇತ್ರಿ ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ಲಯನ್ ಹರಿಪ್ರಸಾದ್ ಶೆಟ್ಟಿ ಯವರ ಆತ್ಮಕ್ಕೆ ಚಿರಶಾಂತಿ ಕೋರಿ ಹಾಗೂ ವಿಶ್ವ ಶಾಂತಿಗಾಗಿ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು.
ಸೇವಾ ಕಾರ್ಯಕ್ರಮದ ಅಂಗವಾಗಿ ಉತ್ತಮ ಅಂಕಗಳನ್ನು ಪಡೆದು ಇದೀಗ ಇಂಜಿನಿಯರಿಂಗ್ ಮಾಡುತ್ತಿರುವ ಬನ್ನಾಡಿಯ ಗುರುಕಿರಣ್ ಹಾಗು ಕೊತ್ತಾಡಿ ಸಾತ್ವಿಕ್ ಶೆಟ್ಟಿ ಯವರಿಗೆ ವಿದ್ಯಾಭ್ಯಾಸಕ್ಕಾಗಿ ನೆರವನ್ನು ನೀಡಲಾಯಿತು ಮತ್ತು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವಡ್ಡರ್ಸೆ ಮಾಹಾಬಲ ಆಚಾರ್ ಇವರಿಗೆ ವೈದ್ಯಕೀಯ ನೆರವನ್ನು ನೀಡಲಾಯಿತು ಹಾಗೂ ಅಂಚೆ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತರಾದ ಮಧುವನದ ಮಂಜು ಮರಕಾಲ ರವರನ್ನು ಗೌರವಿಸಲಾಯಿತು.
ನೂತನ ಅಧ್ಯಕ್ಷರಾದ ಲಯನ್ ಸುರೇಂದ್ರ ಶೆಟ್ಟಿ ಕೊಮೆ ಅಚ್ಲಾಡಿ ಇವರು “ಎಸ್ಸೆಪ್ಟೆನ್ಸ್ ಸ್ಪೀಚ್” ಮಾಡಿದರು.
ನಿರ್ಗಮನ ಅಧ್ಯಕ್ಷರಾದ ಲಯನ್ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ ಇವರು ಅನುಭವಗಳನ್ನು ಹಂಚಿಕೊಂಡರು.
ಮಂಗಳೂರು ಲಯನ್ಸ್ ಕ್ಲಬ್ ನ ಸದಸ್ಯರಾದ ಪಿ.ಡಿ.ಜಿ ಲಯನ್ Adv ಅರುಣ್ ಶೆಟ್ಟಿ,
ಜಿಲ್ಲಾ ಸಂಪುಟ ಜಿ.ಎಮ್.ಟಿ. ಚೀಫ್ ಕೋ ಆರ್ಡಿನೇಟರ್ ಲಯನ್ ಅರುಣ್ ಕುಮಾರ್ ಹೆಗ್ಡೆ,
ರೀಜನ್ ಚಯರ್ ಪರ್ಸನ್ ಲಯನ್ ದೀನಪಾಲ್ ಶೆಟ್ಟಿ,,
ಝೋನ್ ಚಯರ್ ಪರ್ಸನ್ ಲಯನ್ ಶಂಕರ್ ಶೆಟ್ಟಿ, ರೀಜನ್ ಸೆಕ್ರಟರಿ ಲಯನ್ ಯು. ಮೋಹನ್ ದಾಸ ಶೆಟ್ಟಿ,
ಎಕ್ಸ್ಟೆನ್ಷನ್ ಚಯರ್ ಮ್ಯಾನ್ ಲಯನ್ ದಿನಕರ ಶೆಟ್ಟಿ ಎಮ್, ಶುಭಾಶಂಸನೆಗೈದರು.
ಜಿಲ್ಲಾ ಕ್ಯಾಬಿನೆಟ್ ಸದಸ್ಯರು, ಲಯನ್ಸ್ ಪದಾಧಿಕಾರಿಗಳು, ಬೇರೆ ಬೇರೆ ಲಯನ್ಸ್ ಕ್ಲಬ್ ಗಳ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿಗಳು ಹಾಗೂ ಸದಸ್ಯರು ಹಾಗೂ ಕುಟುಂಬ ಸದಸ್ಯರು ಹಾಗೂ ಬನ್ನಾಡಿ ವಡ್ಡರ್ಸೆ ಲಯನ್ಸ್ ಕ್ಲಬ್ ನ ಎಲ್ಲಾ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರು ಹಾಜರಿದ್ದರು.
ಪ್ರಥಮ ಉಪಾಧ್ಯಕ್ಷರಾದ ಲಯನ್ ಉಪ್ಲಾಡಿ ಬಿ. ಬಿ. ಪ್ರವೀಣ್ ಹೆಗ್ಡೆ ಬನ್ನಾಡಿ ಇವರು ಪ್ರಾರ್ಥಿಸಿದರು.
ನಿಕಟ ಪೂರ್ವ ಅಧ್ಯಕ್ಷರಾದ ಲಯನ್ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ ಇವರು ಸ್ವಾಗತಿಸಿದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಯ ಮಾಜಿ ಅಧ್ಯಕ್ಷರಾದ ಲಯನ್ Adv ಕೊತ್ತಾಡಿ ಉದಯ್ ಕುಮಾರ್ ಶೆಟ್ಟಿ ಲಯನ್ ಫ್ಲಾಗ್ ಸೆಲ್ಯುಟೇಷನ್ ವಾಚಿಸಿದರು.
ಸ್ಥಾಪಕ ಕಾರ್ಯದರ್ಶಿಯಾದ ಲಯನ್ ಪ್ರೊ| ಕಲ್ಕಟ್ಟೆ ಚಂದ್ರ ಶೇಖರ್ ಶೆಟ್ಟಿ ಲಯನ್ ಕೋಡ್ ಆಫ್ ಕಂಡಕ್ಟ್ ಓದಿದರು.
ಸ್ಥಾಪಕಾಧ್ಯಕ್ಷರಾದ ಲಯನ್ Adv ಬನ್ನಾಡಿ ಸೋಮನಾಥ್ ಹೆಗ್ಡೆ ಪದಗ್ರಹಣಾಧಿಕಾರಿಯವರ ಪರಿಚಯ ವಾಚಿಸಿದರು.
ನಿರ್ಗಮನ ಕೋಶಾಧಿಕಾರಿ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ ನೂತನ ಅಧ್ಯಕ್ಷರ ಪರಿಚಯ ಮಾಡಿದರು.
ನಿರ್ಗಮನ ಕಾರ್ಯದರ್ಶಿ ಲಯನ್ ಕೊತ್ತಾಡಿ ಅಜಿತ್ ಕುಮಾರ್ ಶೆಟ್ಟಿ, ಲಯನ್ ನಿತೀಶ್ ಆಚಾರ್ಯ ಮಧುವನ, ಲಯನ್ ಸುಭಾಶ್ ಶೆಟ್ಟಿ ಅಚ್ಲಾಡಿ ಇವರು ನೂತನ ಸದಸ್ಯರ ಪರಿಚಯ ಮಾಡಿದರು.
ನೂತನ ಕಾರ್ಯದರ್ಶಿ ಲಯನ್ ಮಹೇಂದ್ರ ಆಚಾರ್ ಮಧುವನ ವಂದಿಸಿದರು.
ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಯ ಸ್ಥಾಪಕಾಧ್ಯಕ್ಷರಾದ ಲಯನ್ Adv ಬನ್ನಾಡಿ ಸೋಮನಾಥ್ ಹೆಗ್ಡೆ ಮತ್ತು ಸ್ಥಾಪಕ ಕಾರ್ಯದರ್ಶಿ ಲಯನ್ ಪ್ರೊ| ಕಲ್ಕಟ್ಟೆ ಚಂದ್ರ ಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.