



ಡೈಲಿ ವಾರ್ತೆ: 24 ಜುಲೈ 2023


ಪುತ್ತೂರು:ಬೈಕ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಗೆ ಡಿಕ್ಕಿ: ಯುವಕ ಸ್ಥಳದಲ್ಲೇ ಮೃತ್ಯು
ಪುತ್ತೂರು: ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ–ಪುತ್ತೂರು ರಸ್ತೆಯ ಕೆಮ್ಮಾಯಿ ಬಳಿ ನಡೆದಿದೆ.
ಸೇಡಿಯಾಪು ನಿವಾಸಿ ಚರಣ್ (20) ಮೃತ ಯುವಕ.
ರಸ್ತೆಯಲ್ಲಿ ನೀರು ನಿಂತು ಬೇರೆ ವಾಹನದ ಬೆಳಕಿನಿಂದ ನೀರು ಕಾಣದೆ ಬೈಕ್ ರಸ್ತೆಯ ಸ್ಕಿಡ್ ಆಗಿ ಬಿದ್ದಿದೆ ಎಂದು ಹೇಳಲಾಗಿದೆ.
ಬೈಕ್ ರಸ್ತೆಯಲ್ಲಿ ಜಾರುತ್ತಿದ್ದಂತೆ, ಸವಾರನ ತಲೆ ವಿಭಜಕಕ್ಕೆ ಬಡಿದಿದೆ. ಇದರಿಂದ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.