ಡೈಲಿ ವಾರ್ತೆ:31 ಜುಲೈ 2023

ಬೆಳ್ಮಣ್: ಕೆಸರ್‌ಡ್ ಒಂಜಿ ದಿನ ಮುಂಡೇರ್‌ಡ್- ಕೆಸರಲ್ಲಿ ಮಿಂದೆದ್ದ ಮಕ್ಕಳು, ಹಿರಿಯರು

ಬೆಳ್ಮಣ್: ಕೆಸರ‍್‌ಡ್ ಒಂಜಿ ದಿನದಂತಹ ಕಾರ್ಯಕ್ರಮಗಳು ನಮ್ಮ ತುಳುನಾಡಿನ ಗ್ರಾಮೀಣ ಬದುಕು, ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಸಮಾಜಕ್ಕೆ ಪರಿಚಯಿಸಲು ಪ್ರೇರಣೆ ಹಾಗೂ ಪೂರಕ ಎಂದು ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ರಾಮದಾಸ ಆಚಾರ್ಯ
ಹೇಳಿದರು. ಅವರು ರವಿವಾರ ಮುಂಡ್ಕೂರು ಪಡಿತ್ತಾರ್‌ನಲ್ಲಿ ಮುಂಡ್ಕೂರು -ಮುಲ್ಲಡ್ಕ- ಇನ್ನಾದ ಬಿಲ್ಲವ ಯುವ ವೇದಿಕೆ ಹಾಗೂ ಮಹಿಳಾ ವೇದಿಕೆಗಳ ಆಶ್ರಯದಲ್ಲಿ “ಕೆಸರ್‌ಡ್ ಒಂಜಿ ದಿನ ಮುಂಡೇರ್‌ಡ್” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಬಿಲ್ಲವ ಯುವ ವೇದಿಕೆಯ ಅಧ್ಯಕ್ಷ ಹರೀಶ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದು, ಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ವಾದಿರಾಜ ಶೆಟ್ಟಿ, ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರವೀಂದ್ರ ಶೆಟ್ಟಿ, ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷ ಶ್ರೀಧರ ಸನಿಲ್, ಮುಂಡ್ಕೂರು ಶೇಖರ ಶೆಟ್ಟಿ, ಮುಂಡ್ಕೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಭಾಸ್ಕರ ಶೆಟ್ಟಿ, ಸದಸ್ಯರಾದ ದೇವಪ್ಪ ಸಪಳಿಗ, ಕರಿಯ ಪೂಜಾರಿ, ಲೋಕೇಶ್ ಪೂಜಾರಿ, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್, ಮಹಿಳಾ ವೇದಿಕೆಯ ಅಧ್ಯಕ್ಷೆ ಯಶೋದಾ, ಬೋಳ ಜಯರಾಮ ಸಾಲ್ಯಾನ್, ಸಾಯಿನಾಥ ಶೆಟ್ಟಿ, ಶರತ್ ಶೆಟ್ಟಿ, ಸೋಮನಾಥ ಪೂಜಾರಿ, ಅರುಣ್ ರಾವ್, ಯುವ ವೇದಿಕೆಯ ಗೌರವ ಸಲಹೆಗಾರರಾದ ಕೃಷ್ಣ ಸಾಲ್ಯಾನ್, ಕೃಷ್ಣ ಪೂಜಾರಿ ಬಂಡ್ರೊಟ್ಟು, ಪುರುಷೋತ್ತಮ ಪೂಜಾರಿ ಜೋಗಿನಾಡು, ಗೌರವಾಧ್ಯಕ್ಷ ಸುರೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಸಂಚಾಲಕ ಉದಯ ಪೂಜಾರಿ, ಕೋಶಾಧಿಕಾರಿ ಸುಖೇಶ್ ಪೂಜಾರಿ, ಉಪಾಧ್ಯಕ್ಷರಾದ ಲತೀಶ್ ಪೂಜಾರಿ, ವಿನಯ ಪೂಜಾರಿ, ಕ್ರೀಡಾ ಕಾರ್ಯದರ್ಶಿಗಳಾದ ಸುಧೀರ್, ಸೃಜನ್, ಬಿಲ್ಲವ ಮಹಿಳಾ ವೇದಿಕೆಯ ಗೌರವಾಧ್ಯಕ್ಷೆ ಮಲ್ಲಿಕಾ, ಕಾರ್ಯದರ್ಶಿ ಲೀಲಾ ಪಡುದಡ್ಡು, ಉಪಾಧ್ಯಕ್ಷರಾದ ಸುಮತಿ ಪೂಜಾರ‍್ತಿ, ಸುಮತಿ ಎಚ್, ಕೋಶಾಧಿಕಾರಿ ರಂಜನಿ, ಕ್ರೀಡಾ ಕಾರ್ಯದರ್ಶಿ ರಾಧಿಕಾ ಮತ್ತಿತರರಿದ್ದರು.


ಸಂದೀಪ್ ಸಂಕಲಕರಿಯ ಕಾರ್ಯಕ್ರಮ ನಿರೂಪಿಸಿದರು.
ಇಡೀ ದಿನ ಮುಂಡ್ಕೂರು ಸುತ್ತಮುತ್ತಲ ಮಕ್ಕಳು, ಹಿರಿಯರು ಕೆಸರಲ್ಲಿ ಮಿಂದೆದ್ದರು. ಪುರುಷರಿಗೆ ಕಬಡ್ಡಿ, ವಾಲಿಬಾಲ್, ಮಡಕೆ ಹೊಡೆಯುವುದು, ಹಗ್ಗ ಜಗ್ಗಾಟ, ನಿಧಿ ಶೋಧನೆ ಸಹಿತ ವಿವಿಧ ಸ್ಪರ್ಧೆಗಳು, ಮಹಿಳೆಯರಿಗೆ ಹಗ್ಗ ಜಗ್ಗಾಟ, ತ್ರೋ ಬಾಲ್, ಮಡಕೆ ಹೊಡೆಯುವುದು ಸಹಿತ ವಿವಿಧ ಸ್ಪರ್ಧೆಗಳು ನಡೆದವು.