ಡೈಲಿ ವಾರ್ತೆ: ಫೆ./23/2026

ಮಂಜುನಾಥ ಭಂಡಾರಿ ಶೀಘ್ರ ಗುಣಮುಖರಾಗಲಿ: ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯುವ ಕಾಂಗ್ರೆಸ್ ವತಿಯಿಂದ ವಿಶೇಷ ಪೂಜೆ, ಅನ್ನಸಂತರ್ಪಣೆ

ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ವಿಧಾನಪರಿಷತ್ ಶಾಸಕರಾದ ಶ್ರೀ ಮಂಜುನಾಥ ಭಂಡಾರಿ ಅವರ ಆರೋಗ್ಯ ಶೀಘ್ರ ಸುಧಾರಿಸಲಿ ಹಾಗೂ ಮತ್ತೆ ಚುರುಕಾಗಿ ಜನಸೇವೆಯಲ್ಲಿ ತೊಡಗುವಂತಾಗಲಿ ಎಂಬ ಪ್ರಾರ್ಥನೆೊಂದಿಗೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಇತಿಹಾಸ ಪ್ರಸಿದ್ಧ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ, ಭಕ್ತರಿಗೆ ಅನ್ನಸಂತರ್ಪಣೆ ಮಾಡುವ ಮೂಲಕ ನಾಯಕನ ಆರೋಗ್ಯಕ್ಕಾಗಿ ಪ್ರಾರ್ಥಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರ್ ಮಾತನಾಡಿ, ಮಂಜುನಾಥ ಭಂಡಾರಿ ಅವರು ಶೀಘ್ರ ಗುಣಮುಖರಾಗಿ ಮತ್ತೆ ಸಾರ್ವಜನಿಕ ಸೇವೆಯಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸಿದರು.

ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜೆಗೋಳಿ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎಂ.ಎ. ಗಫೂರ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿನೇಶ್ ಪುತ್ರನ್, ದಿನಕರ ಹೇರೂರ್, ಜ್ಯೋತಿ ಹೆಬ್ಬಾರ್, ವಿಶ್ವಾಸ್ ಅಮೀನ್, ಮಹಾಬಲ ಕುಂದರ್, ಅಣ್ಣಯ್ಯ ಶೇರಿಗಾರ್, ಮಾದವ ಬನ್ನಂಜೆ, ಹರೀಶ್ ಕಿಣಿ, ದಿವಾಕರ್ ಕುಂದರ್, ಇಚ್ಛಿತಾರ್ಥ್ ಶೆಟ್ಟಿ, ನವೀನ್ ಸಾಲಿಯಾನ್, ರವಿ ಶೆಟ್ಟಿ, ಯತೀಶ್ ಕರ್ಕೇರ, ಸದಾಶಿವ ಕಟ್ಟೆಗುಡ್ಡೆ, ರಾಘವೇಂದ್ರ ಶೆಟ್ಟಿ, ನವೀನ್ ಮರಕಾಲ, ಸುರೇಶ್ಪ್ರ ಶೆಟ್ಟಿ, ಶಾಂತ್ ಮಾಯಾಡಿ, ಉದಯ್ ಆಚಾರ್ಯ, ಶಬರೀಶ್ ಸುವರ್ಣ, ಮೀನಾಕ್ಷಿ ಮಾಧವ ಬನ್ನಂಜೆ, ಪುಷ್ಪ ಅಂಚನ್, ಸುರೇಂದ್ರ ಆಚಾರ್ಯ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮವು ಭಕ್ತಿಪೂರ್ವಕ ವಾತಾವರಣದಲ್ಲಿ ನೆರವೇರಿದ್ದು, ನಾಯಕನ ಶೀಘ್ರ ಚೇತರಿಕೆಗೆ ಎಲ್ಲರೂ ಪ್ರಾರ್ಥನೆ ಸಲ್ಲಿಸಿದರು.