ಡೈಲಿ ವಾರ್ತೆ:01 ಆಗುಸ್ಟ್ 2023
✒️ ಓಂಕಾರ ಎಸ್. ವಿ. ತಾಳಗುಪ್ಪ
ಕೊಲ್ಲೂರು: 10 ದಿನಗಳ ಹಿಂದೆ ಅರಿಶಿನಗುಂಡಿ ಜಲಪಾತದಲ್ಲಿ ಕಾಲು ಜಾರಿಬಿದ್ದು ಮೃತಪಟ್ಟ ಯುವಕ ಶರತ್ ಮೃತದೇಹ ವಾರದ ಬಳಿಕ ಪತ್ತೆ(ಕಾರ್ಯಾಚರಣೆ ವಿಡಿಯೋ ವೀಕ್ಷಿಸಿ)
ಕೊಲ್ಲೂರು : ಧಾರ್ಮಿಕ ಶ್ರದ್ದಾ ಕೇಂದ್ರವಾದ ಕೊಲ್ಲೂರು ಸನಿಹದ ಅರಿಶಿನ ಗುಂಡಿ ಜಲಪಾತವೂ ರಸ್ತೆಯಿಂದ ಸುಮಾರು 06 ಕಿ. ಮೀ. ದುರ್ಗಮ ಕಾಡಿನ ಮಧ್ಯೆ ಈ ಜಲಪಾತವಿದ್ದೂ, ಯಾವುದೇ ವಾಹನ ಓಡಾಡಲು ಸಂಪರ್ಕ ರಸ್ತೆಯಿಲ್ಲ, ಜಲಪಾತ ನೋಡಲು ಕಾಲು ನಡುಗೆಯಲ್ಲೇ ನೆಡೆದುಕೊಂಡು ಹೋಗಬೇಕು.
ಇತ್ತೀಚಿಗೆ ಭದ್ರಾವತಿ ಮೂಲದ ಯುವಕ ಶರತ್ ತನ್ನ ಸ್ನೇಹಿತರೊಂದಿಗೆ ಅರಿಶಿನ ಜಲಪಾತ ವೀಕ್ಷಣೆ ಮಾಡಲು 06 ಕಿ. ಮೀ. ದುರ್ಗಮ ಕಾಡಿನಲ್ಲಿ ಸಂಚರಿಸಿ ಜಲಪಾತ ವೀಕ್ಷಣೆ ಮಾಡುತ್ತಾ ಎಲ್ಲರಂತೆ ವಿಡಿಯೋ ತೆಗೆಯುವ ಹುಚ್ಚು ಸಾಹಸಕ್ಕೆ ಈತ ತನ್ನ ಜೊತೆಯಲ್ಲಿದ್ದ ಸ್ನೇಹಿತರಿಗೆ ವಿಡಿಯೋ ತೆಗೆಯಲು ಹೇಳಿದಾಗ ಈ ಯುವಕ ಅತೀ ಹೆಚ್ಚು ಪಾಚಿ ಕಟ್ಟಿದ ಕಲ್ಲು ಬಂಡೆ ಮೇಲೆ ನಿಂತು ವಿಡಿಯೋಕ್ಕೆ ಫೋಸು ನೀಡುತ್ತಿದ್ದಾಗ ಆಕಸ್ಮಿಕವಾಗಿ ಬಂಡೆಯಿಂದ ಜಾರಿ ಬಿದ್ದಿರುವ ವಿಡಿಯೋ ಈಗ ಎಲ್ಲಡೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುತ್ತದೆ.
ಮೃತ ಶರತ್ ಯುವಕನ ಪಾರ್ಥಿವ ಶರೀರ ಹುಡುಕಲು ಜಿಲ್ಲಾಡಳಿತ, ಈಶ್ವರ್ ಮಲ್ಪೆ ಹಾಗೂ ತಂಡ, ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಹಾಗೂ ತಂಡ, ಜ್ಯೋತಿರಾಜ್ ತಂಡ, ಅಗ್ನಿ ಶಾಮಕ ದಳ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಸ್ಥಳೀಯ ಸಂಘ ಸಂಸ್ಥೆಗಳು ಸುಮಾರು 08 ದಿನಕ್ಕಿಂತಲೂ ಹೆಚ್ಚಿನ ದಿನ ಶ್ರಮಪಟ್ಟಿದ್ದೂ ನಿಜಕ್ಕೂ ಶ್ಲಾಘನೀಯ ಸಂಗತಿಯಾಗಿದೆ.
ಮಳೆಯ ಆರ್ಭಟ ಕಡಿಮೆಯಾದ ನಂತರ ಶರತ್ ಜಾರಿ ಬಿದ್ದ ಸ್ಥಳದಿಂದ ಕೆಲವೇ ಮೀಟರ್ ಅಂತರದಲ್ಲಿ ಮರದ ಕೊಂಬೆಯಲ್ಲಿ ಸಿಕ್ಕಿಹಾಕಿ ಕೊಂಡಿದ್ದೂ, ಸ್ಥಳೀಯರ ಸಹಾಯದಿಂದ 06 ಕಿ. ಮೀ ದುರ್ಗಮ ಕಾಡಿನಲ್ಲಿ ಶರತ್ ಪಾರ್ಥಿವ ಶರೀರವನ್ನೂ ಜೋಲಿ ಮೂಲಕ ಹೊತ್ತು ಕೊಂಡು ಬಂದಿರುತ್ತಾರೆ.
ತನ್ನ ಮಗನ ಜೀವಂತವಾಗಿ ನೋಡುವ ತವಕದಲ್ಲಿದ್ದ ಶರತ್ ತಂದೆ ತನ್ನ ಮಗನ ಪಾರ್ಥಿವ ಶರೀರ ಕಂಡು ಆಕಾಶವೇ ಕಳಚಿ ಬಿದ್ದಂತೆ ಆದ ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ ಇಂತವರಿಗೂ ಹೃದಯ ಕಲುಕುತ್ತಿತ್ತು
ಇಂತಹ ದುಸ್ಥಿತಿಯಲ್ಲಿಯೂ ಮೃತ ಯುವಕ ಶರತ್ ತಂಗಿ ಯುವಕರಿಗೆ ಕೊಟ್ಟ ಸಂದೇಶ ಮಾತ್ರಾ ನಿಜಕ್ಕೂ ಕಣ್ಣೀರು ಬರುತ್ತಿತ್ತು ” ದಯವಿಟ್ಟು ನನ್ನ ಅಣ್ಣ ತಮ್ಮಂದಿರೇ, ಅಕ್ಕ ತಂಗಿಯರೇ ನಿಮ್ಮನ್ನೇ ನಂಬಿಕೊಂಡು ಕುಟುಂಬ ಇರುತ್ತದೆ, ದಯವಿಟ್ಟು ಯಾರೂ ನನ್ನ ಸಹೋದರ ಮಾಡಿಕೊಂಡಂತೆ ದುಸಾಹಸಕ್ಕೆ ಕೈ ಹಾಕಬೇಡಿ – ಪ್ರಕೃತಿಯ ವಿರುದ್ಧ ಜೀವ ಜೀವನ ಕಳೆದುಕೊಳ್ಳದಿರಿ “ ಎಂದೂ ಕಣ್ಣೀರು ಸಹಿತ ಸಮಾಜಕ್ಕೆ ಕೊಟ್ಟ ಸಂದೇಶ ಮಾತ್ರಾ ನೋಡುಗರ ಕಣ್ಣಲ್ಲಿ ತಾನಾಗಿಯೇ ಕಣ್ಣೀರು ಹರಿಯದೇ ಇರದು