ಡೈಲಿ ವಾರ್ತೆ:01 ಆಗುಸ್ಟ್ 2023

ತುಳು ಅಧಿಕೃತ ಭಾಷೆ ಘೋಷಣೆಗೆ ಒತ್ತಾಯಿಸಿ ತುಳುನಾಡ ರಕ್ಷಣಾ ವೇದಿಕೆ ಮುಖ್ಯಮಂತ್ರಿ ಭೇಟಿ!

ಉಡುಪಿ: ಕಳೆದ 15 ವರ್ಷಗಳಿಂದ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷರಾಗಿರುವಂತ ಯೋಗಿಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ಈ ಹಿಂದೆ ಹಲವಾರು ಬಾರಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರಕಾರಗಳಿಗೆ ಮನವಿ ಹಾಗೂ ಹೋರಾಟ ಮೂಲಕ ಒತ್ತಾಯಿಸುತ್ತಾ ಬಂದಿದೆ. ಇಂದು ಉಡುಪಿಗೆ ಆಗಮಿಸಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ರವರನ್ನು ತುಳುನಾಡು ರಕ್ಷಣಾ ವೇದಿಕೆ ನಿಯೋಗ ಭೇಟಿಯಾಗಿ ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವಂತೆ ಪುನರ್ ಮನವಿ ನೀಡಿ ಒತ್ತಾಯಿಸಲಾಯಿತು.

ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ಸುಮಾರು 2500 ವರ್ಷಗಳ ಇತಿಹಾಸವಿರುವ ತುಳುಭಾಷೆಯನ್ನು ದೇಶದ
ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಬೇಕೆನ್ನುವುದು ತುಳುವರ ಹಲವು ವರ್ಷಗಳ ಬೇಡಿಕೆಯಾಗಿದೆ. ತುಳುವನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ಪ್ರಯತ್ನಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ತುಳುಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಣೆ ಮಾಡುವುದು ಅಗತ್ಯವಾಗಿದೆ.
ಈಗಾಗಲೇ ವಿಶ್ವದಾದ್ಯಂತ 1.5 ಕೋಟಿಗಿಂತಲೂ ಹೆಚ್ಚು ತುಳುಭಾಷಿಗರಿದ್ದು, ತುಳುವಿಗೆ ತನ್ನದೇ ಆದ ಲಿಪಿಯಿಂದ
ಇದರಲ್ಲಿ 14ನೇ ಶತಮಾನಕ್ಕಿಂತಲೂ ಹಿಂದಿನಿಂದಲೇ ಕಾವ್ಯಗಳು ಸೃಷ್ಟಿಯಾಗಿವೆ. ತುಳುಲಿಪಿಯ ಸಹಸ್ರಾರು ಶಿಲಾಶಾಸನಗಳು. ತಾಮ್ರ ಪತ್ರಗಳು, ತಾಡೆಯೋಲೆಗಳ ದಾಖಲೆಗಳು ಕರಾವಳಿ ಪ್ರದೇಶದಲ್ಲಿ ಲಭ್ಯವಿದೆ. ತುಳುಲಿಪಿಯಲ್ಲಿ ಸಾಹಿತ್ಯಕ ಪ್ರಕಾರಗಳು ರಾಮಾಯಣ, ಮಹಾಭಾರತದಂತಹ ಉದ್ಗಂಥಗಳು ಪ್ರಾಪ್ತಿಯಾಗಿದೆ. ಮೂಲದಲ್ಲಿ ರಾಮೇಶ್ವರದಿಂದ ನೀಲೇಶ್ವರದವರೆಗೆ, ನೀಲೇಶ್ವರದಿಂದ ಅಂಕೋಲ, ಮೂಡಣ ಘಟ್ಟ, ಪಡುವಣ ಕಡಲು, ಮೃದು ಮಣ್ಣಿನ ಈ ನೆಲವನ್ನು ತುಳುರಾಜ್ಯ ಎಂದೇ ಶಾಸನಗಳು ನಮಗೆ ಲಭ್ಯವಾಗಿದೆ. ಪ್ರಸ್ತುತ ಮಲೆಯಾಳಿ ಲಿಪಿ ಮೂಲತಃ ತುಳು ಲಿಪಿಯಿಂದ ಪರಿಷ್ಕೃತ ಲಿಪಿಯಾಗಿದೆ ತುಳುನಾಡಿನ ವ್ಯಾಪ್ತಿಯೊಳಗೆ ಸಂಸ್ಕೃತ ತುಳು ಲಿಪಿಯಲ್ಲಿ ಬರೆದಂತಹ ಸಾಹಿತ್ಯಗಳ ದಾಖಲೆಗಳು ಪ್ರಾಪ್ತಿಯಾಗಿರುತ್ತದೆ. ಪ್ರಸ್ತುತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಲೆಗಳಲ್ಲಿ 6ನೇ ತರಗತಿಯಿಂದ 10ನೇ ತರಗತಿವರಿಗೆ 2009 ರಿಂದ ತುಳು ಪಠ್ಯವನ್ನು ತೃತೀಯ ಭಾಷೆಯಾಗಿ ಬೋಧಿಸಲಾಗುತ್ತಿದೆ. ಈಗಾಗಲೇ ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲೂ ತುಳು ಪಠ್ಯವನ್ನು ಅನಿಷ್ಠಾನಗೊಳಿಸಲಾಗಿದೆ. ತಾವುಗಳು ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಹಾಗೂ ತುಳುನಾಡಿನ ಜನರ ಭಾವನಾತ್ಮಕ ವಿಷಯವಾಗಿರುವ ಈ ಒಂದು ಅಧಿಕೃತ ರಾಜ್ಯ ಭಾಷೆಯಾಗಿರುಬುದೆಂದು ನಮ್ಮ ಘನ ಸರಕಾರಕ್ಕೆ ಕೀರ್ತಿಯು ಸುಭದ್ರತೆಯನ್ನು ತಲುಪಿಸಿ ಇತಿಹಾಸದಲ್ಲಿ ಇದೊಂದು ದಾಖಲೆಯಾಗಿರುತ್ತದೆ.
ಈ ಬಗ್ಗೆ ನಾವು ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಹಲವಾರು ವರ್ಷಗಳಿಂದ ಬೇರೆ ಬೇರೆ ಸರ್ಕಾರ
ಸಂದರ್ಭದಲ್ಲಿ ಮನವಿಯನ್ನು ನೀಡುತ್ತಾ ಬಂದಿರುತ್ತಿದ್ದೇವೆ ತಾವು ಕರ್ನಾಟಕ ಜನ ಸರಕಾರದ ಮುಖ್ಯಮಂತ್ರಿಯಾಗಿ
ಆಯ್ಕೆಯಾಗಿರುವುದು ನಮಗೆ ಸಂತೋಷ ತಂದಿರುತ್ತದೆ.
ತುಳು ಭಾಷೆಯ ಉಳಿವಿಗೆ ಮತ್ತು ಮಾನ್ಯತೆಗೆ ತಮ್ಮ ಕೊಡುಗೆಯನ್ನು ಸಲ್ಲಿಸುವ ಅಮೂಲ್ಯ ಅವಕಾಶ ಬಂದಿರುವುದು ಸಮಸ್ತ ತುಳುವರಿಗೆ ಅಭಿಮಾನದ ಮತ್ತು ಸಂತಸದ ವಿಷಯ. ತುಳುವರ ಬಹುದಿನದ ಬೇಡಿಕೆಯಾದ ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನದ ಹಾದಿಯಲ್ಲಿ ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸುವಂತೆ ತಾವು ಕ್ರಮವಹಿಸಬೇಕಾಗಿ ಸಮಸ್ತ ತುಳು ಭಾಷಿಕರ ಪರವಾಗಿ ತುಳುನಾಡ ರಕ್ಷಣಾ ವೇದಿಕೆ ಮನವಿ ಮಾಡಿದೆ.
ಅಲ್ಲದೆ ಇದರೊಂದಿಗೆ ಅಕ್ರಮ ಸಕ್ರಮ ಅರ್ಜಿಯನ್ನು ಶೀಘ್ರದಲ್ಲಿ ವಿಲೇವಾರಿಗೊಳಿಸಲು ಮನವಿ ಮಾಡಲಾಯಿತು.

ಈ ಸಂದರ್ಭದಲ್ಲಿ ನಿಯೋಗದಲ್ಲಿ ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜ ತಾಲೂಕಾಧ್ಯಕ್ಷರಾದ ಕೃಷ್ಣಕುಮಾರ್ ಉಪಾಧ್ಯಕ್ಷರಾಗಿರುವಂತ ಜಯ ಪೂಜಾರಿ, ಗಣೇಶ್ ಮಲ್ಯ ,ಮಹಿಳಾ ಘಟಕ ಅಧ್ಯಕ್ಷರಾದ ಶೋಭಾ ಪಾಂಗಳ, ಮತ್ತಿತರ ಹಲವಾರು ತುಳುನಾಡು ರಕ್ಷಣಾ ವೇದಿಕೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ತು.ರ.ವೇ. ನಿಯೋಗಕ್ಕೆ ಆದಷ್ಟು ಶೀಘ್ರದಲ್ಲಿ ತುಳು ಅಧಿಕೃತ ಭಾಷೆ ಘೋಷಣೆ ಮಾಡುವಲ್ಲಿ ಪ್ರಯತ್ನಿಸುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದರು.