ಡೈಲಿ ವಾರ್ತೆ:02 ಆಗಸ್ಟ್ 2023
– ಕೆ ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ.ಉಡುಪಿ.
ವಿಶ್ವವಿಖ್ಯಾತ ಸಿದ್ದಗಂಗಾ ಮಠಕ್ಕೆ ಹೈಟೆಕ್ ಸ್ಪರ್ಶ:5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ ಸಿದ್ದಗಂಗಾ ಥೀಮ್ ಪಾರ್ಕ್ – ಸಿದ್ದಗಂಗರ ಬಾಲ್ಯದ ನೆನಪುಗಳನ್ನ ಹೊತ್ತು ತರಲಿದೆ ಈ ಥೀಮ್ ಪಾರ್ಕ್.!
ತುಮಕೂರು: ವಿಶ್ವವಿಖ್ಯಾತ ತುಮಕೂರು ಸಿದ್ದಗಂಗಾ ಮಠ ಇದೀಗ ತನ್ನದೇ ಆದಂತಹ ಹೊಸ ಕ್ರಾಂತಿಯನ್ನ ಹೊರ ಸುಸಲು ಧ್ವನಿ ಯಾಗುತಿದೆ. ಏಕೆಂದರೆ, ಸುಮಾರು 5 ಕೋಟಿ ವೆಚ್ಚದಲ್ಲಿ ಶಿವಕುಮಾರ ಸ್ವಾಮೀಜಿ ಅವರ ಹೆಸರಿನಲ್ಲಿ ಥೀಮ್ ಪಾರ್ಕ್ ನಿರ್ಮಾಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ರವಾಸಿಗರ ತಾಣವಾಗಿ ಭಕ್ತಿ ಮತ್ತು ಶ್ರದ್ಧಾ ಕೇಂದ್ರವಾಗಿ ಮಾರ್ಪಟ್ಟಾಗುತ್ತಿರುವುದು ಇದರಿಂದ ವಿಶೇಷ. ಬಹುಜನರ ಭಕ್ತಾಭಿಮಾನಿಗಳು ಹೊಂದಿರುವಂತಹ ಸಿದ್ಧಗಂಗಾ ಮಠದ ವಿಶೇಷತೆಯನ್ನ ಜಗತ್ತಿಗೆ ಪಸರಿಸುವಂತಹ ಉದ್ದೇಶದಿಂದ ಟೀಮ್ ಪಾರ್ಕ್ ಅನ್ನ ನಿರ್ಮಾಣ ಮಾಡಿ ಇನ್ನಷ್ಟು ಜನರಿಗೆ ಪ್ರವಾಸೋದ್ಯಮದ ಅರಿವು ಹಾಗೂ ಸಿದ್ದಗಂಗರ ಬಾಲ್ಯದ ಕ್ಷಣಗಳನ್ನು ನೆನಪಿಸುವಂತಹ ಸುಂದರಗಳಿಗೆ ಥೀಮ್ ಪಾರ್ಕ್ ಸಾಕ್ಷಿಯಾಗಲಿದೆ. ನೆಲೆಗಟ್ಟು ಮತ್ತು ಚೌಕಟ್ಟಿನ ಅಡಿಪಾಯವನ್ನು ಸಿದ್ದಗಂಗರ ಹೆಸರಿನಲ್ಲಿಯೇ ನಿರ್ಮಾಣ ಮಾಡಿ ಅದಕ್ಕೊಂದು ಸುಂದರವಾದ ಅಂತಹ ಹೈಟೆಕ್ ಸ್ಪರ್ಶವನ್ನು ನೀಡುವುದರೊಂದಿಗೆ ಸರಿಸುಮಾರು ಐದು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವಂತಹ ಟೀಮ್ ಪಾರ್ಕ್ ಸುಮಾರು 60 ಎಕರೆ ಜಾಗವನ್ನು ಇದು ಒಳಗೊಂಡಿರುತ್ತದೆ ಎನ್ನುವುದು ವಿಶೇಷ ಹಾಗೂ ಪ್ರವಾಸೋದ್ಯಮ ಅದಲ್ಲದೆ ಸಿದ್ದಗಂಗಾ ಮಠದ ವಿದ್ಯಾರ್ಜನೆ ಮಾಡುತ್ತಿರುವಂತಹ ಮೂಲ ಮಕ್ಕಳಿಗೆ ಸಿದ್ದಗಂಗರ ಬಾಲ್ಯ ಯೌವ್ವನ ಹಾಗೂ ಅವರ ಜೀವನಶೈಲವನ್ನು ಹೊರ ಜಿಲ್ಲೆಯ ಜನರಿಗೂ ವಿದ್ಯಾರ್ಥಿಗಳಿಗೂ ತಿಳಿಯಪಡಿಸುವಂತಹ ವಿಶೇಷ ಪರಿಕ್ರಮ ಈ ಥೀಮ್ ಪಾರ್ಕ್ ನ ಉದ್ದೇಶವಾಗಿದೆ.
ನಡೆದಾಡುವ ದೇವರು ಎಂದೇ ಖ್ಯಾತವಾಗಿರುವ ಡಾ.ಶ್ರೀ.ಶಿವಕುಮಾರ ಸ್ವಾಮೀಜಿಯವರ ಸಿದ್ದಗಂಗಾ ಮಠಕ್ಕೆ ಹೈಟೆಕ್ ಸ್ಪರ್ಶವನ್ನು ನೀಡಲು ನಿರ್ಧರಿಸಿದ್ದು, ಸಾವಿರಾರು ಭಕ್ತರ ಕಣ್ಮನ ತಣಿಸಲು 60 ಎಕರೆ ವಿಸ್ತೀರ್ಣದಲ್ಲಿ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ (Theme Park) ಸಿದ್ಧಗೊಳ್ಳುತ್ತಿದೆ
ತ್ರಿವಿಧಿ ದಾಸೋಹಿ ಡಾ.ಶಿವಕುಮಾರ ಸ್ವಾಮೀಜಿ ಜೊತೆಗೆ ಸಿದ್ದಗಂಗಾ ಮಠದ ಇತಿಹಾಸ ಹೇಳುವ ಪಾರ್ಕ್ ಕೂಡ ಹೌದು. 60 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಥೀಮ್ ಪಾರ್ಕ್ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಒಂದೆಡೆ ಸಿದ್ದಲಿಂಗೇಶ್ವರರು, ಅಟವಿ ಶ್ರೀಗಳು, ಉದ್ಧಾನ ಶಿವಯೋಗಿಗಳು, ಡಾ.ಶ್ರೀ.ಶಿವಕುಮಾರ ಸ್ವಾಮೀಜಿ, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಶಿಲ್ಪಗಳು ಗಮನ ಸೆಳೆದರೆ ಇನ್ನೊಂದೆಡೆ ಡಾ.ಶಿವಕುಮಾರ ಸ್ವಾಮೀಜಿ ಅವರ ಬಾಲ್ಯ, ವಿದ್ಯಾಭ್ಯಾಸ, ಸನ್ಯಾಸತ್ವ ದೀಕ್ಷೆ, ಜೀವನ ಸಾಧನೆ ಸಾರುವ ಪ್ರತಿಯೊಂದು ಸಾಧನೆಗಳ ಹೂರಣವೇ ಇಲ್ಲಿ ಶಿಲ್ಪ ಕಲೆಯಾಗಿ ಹೊರ ಹೊಮ್ಮಿದೆ. ನಿರ್ಮಾಣ ಹಂತ ತಲುಪಿರುವ ಉದ್ಯಾನವನ ಈಗಾಗಲೇ ಲಕ್ಷಾಂತರ ಜನರ ಮನಸೂರೆಗೊಂಡಿದೆ. ಭಕ್ತರು, ಪ್ರವಾಸಿಗಳು, ಸ್ಥಳೀಯರು ಬೆಟ್ಟ ಹತ್ತುವ ಪ್ರತಿಯೊಬ್ಬರೂ ಇಲ್ಲಿಗೆ ಒಮ್ಮೆ ಭೇಟಿ ನೀಡಲೇಬೇಕು ಎಂದು ಅನಿಸಿದರೆ ಆಶ್ಚರ್ಯವೆನಿಲ್ಲ.
ಥೀಮ್ ಪಾರ್ಕ್ ಸಿದ್ದಗಂಗಾ ಮಠ ಬೆಳೆದು ಬಂದ ಸಮಗ್ರ ಇತಿಹಾಸ ಮತ್ತು ಶಿವಕುಮಾರ ಸ್ವಾಮೀಜಿ ಜೀವನ ಚರಿತೆಯನ್ನು ಹೇಳುವ ಕಲಾಕೃತಿಗಳನ್ನು ಒಳಗೊಂಡಿದ್ದು, ಪಾರ್ಕ್‌ನಲ್ಲಿ 100ಕ್ಕೂ ಹೆಚ್ಚು ಶಿಲ್ಪಗಳ ನಿರ್ಮಾಣವನ್ನು ಮಾಡಲಾಗುತ್ತಿದೆ. ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಅರಣ್ಯ ಇಲಾಖೆ ನಿರ್ಧರಿಸಿದೆ. ನಿರ್ಮಾಣ ಅಂತಿಮ ಹಂತಕ್ಕೆ ತಲುಪಿದ್ದು, ಉದ್ಯಾನವನದಲ್ಲಿ 10 ಜನ ಕಲಾವಿದರು ಹಗಲು ರಾತ್ರಿ ಈ ಕಾರ್ಯದಲ್ಲಿ ಶ್ರಮಿಸುತಿದ್ದಾರೆ. ಒಂದು ವರ್ಷದಿಂದ ಕಲಾವಿದರ ಅವಿರತ ಪ್ರಯತ್ನ ಥೀಮ್ ಪಾರ್ಕ್‌ಗೆ ಮತ್ತಷ್ಟು ಕಳೆ ತುಂಬುವಂತಹ ಪ್ರಯತ್ನ ಸಿದ್ದಗಂಗಾ ಮಠದ ಅಧಿಕಾರಿಗಳು ವಹಿಸಿಕೊಂಡಿದ್ದಾರೆ ಭೌತೇಕವಾಗಿ ರಾಜ್ಯದ ಹೊರ ಜಿಲ್ಲೆಗಳಿಂದ ಬರುವಂತಹ ಪ್ರವಾಸಿಗರಿಗೆ ಸಿದ್ದಗಂಗಾ ಮಠದ ಥೀಮ್ ಪಾರ್ಕ್ ಇನ್ನಷ್ಟು ಹೊಸತನವನ್ನು ತಂದು ಕೊಡಲಿದೆ.
ಜಿಲ್ಲೆ, ಹೊರ ಜಿಲ್ಲೆ, ಹೊರ ರಾಜ್ಯದ ಜೊತೆಗೆ ವಿದೇಶಗಳಿಂದಲೂ ಶ್ರೀಗಳ ಗದ್ದಿಗೆ ದರ್ಶನಕ್ಕೆ ಭಕ್ತಾದಿಗಳು, ಪ್ರವಾಸಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಇಷ್ಟು ದಿನ ಲಿಂಗೈಕ್ಯ ಡಾ.ಶ್ರೀ.ಶಿವಕುಮಾರ ಸ್ವಾಮಿಜಿಗಳ ಗದ್ದಿಗೆ ದರ್ಶನದಿಂದ ಪುನೀತರಾಗುತಿದ್ದ ಭಕ್ತರು ಇನ್ನುಮುಂದೆ ಲಿಂಗೈಕ್ಯ ಶ್ರಿಗಳ ಜೀವನ ಚರಿತ್ರೆಯ ಸಂಪೂರ್ಣ ಶಿಲ್ಪ ಕಲಾಕೃತಿಗಳನ್ನು ಕಂಡು ಪುಳಕಿತರಾಗೋದು ಗ್ಯಾರಂಟಿ. ವೀಕೆಂಡ್, ಜಾತ್ರೆ ಮತ್ತಿತರ ಸಂದರ್ಭದಲ್ಲಿ ಶ್ರೀ ಸಿದ್ಧಗಂಗಾ ಮಠಕ್ಕೆ ಬರುವ ಪ್ರವಾಸಿಗರಿಗೆ ಥೀಮ್ ಪಾರ್ಕ್ ಆಕರ್ಷಣೆಯ ಕೇಂದ್ರವಾಗಲಿದೆ.
ತುಮಕೂರು ಸಿದ್ದಗಂಗಾ ಮಠ ಭಕ್ತಿ ಪ್ರಾಧ್ಯಾನತೆ ಹಾಗೂ ಭಕ್ತಿಗೆ ಪ್ರಕಾರಗಳನ್ನು ತಂದುಕೊಟ್ಟಂತಹ ಕೇಂದ್ರವಾಗಿ, ಅದಲ್ಲದೆ, ಶಿವ ಕುಮಾರ ಸ್ವಾಮೀಜಿ ಅವರ ವಿಶಿಷ್ಟ ಪರಿಕಲ್ಪನೆಯ ಭವಿಷ್ಯ ಬದುಕು ಹಾಗೂ ಬರವಣಿಗೆಗಳು ಹಾಗೂ ಮಾತಿನ ಶೈಲಿಗಳ ಹಾಗೂ ಭಕ್ತಿಗೆ ಸಂಕೇತವಾದಂತಹ ಸಾವಿರಾರು ವಿಚರಾತ್ಮಕ ಚಿಂತನೆಗಳು ಈ ಮಠದಲ್ಲಿ ಹುದುಗಿ ಹೋಗಿದೆ. ಅಂತಹ ಬಾಲ್ಯದ ಜೀವನ ಹಾಗೂ ಅವರ ಬದುಕಿನ ಜೀವನಶೈಲವನ್ನು ಇತರರಿಗೂ ಹಾಗೂ ವಿದ್ಯಾರ್ಥಿಗಳಿಗೂ ಮನದಟ್ಟು ಮಾಡುವ ಉದ್ದೇಶದಿಂದ ಈ ಯೋಜನೆ ಕೈ ಎತ್ತಿಕೊಳ್ಳಲಾಗಿದೆ. ಮುಂದಿನ ಭವಿಷ್ಯಕ್ಕೂ ಹಾಗೂ ವಿದ್ಯಾರ್ಥಿಗಳಿಗೆ ಸರಿ, ಸಮಾನವಾದಂತಹ ವೈಶಿಷ್ಟ್ಯತೆಯನ್ನ ಹಾಗೂ ವಿವಿಧ ಜಿಲ್ಲೆಯಿಂದ ಬಂದಿರುವಂತಹ ಜನಸಾಮಾನ್ಯರಿಗೆ ಕೂಡ ಶಿವಕುಮಾರ ಸ್ವಾಮೀಜಿಯವರ ಮೂಲತತ್ವ ಹಾಗೆ ಸಿದ್ದಗಂಗಾ ಮಠದ ವೈಶಿಷ್ಟ್ಯತೆಯನ್ನ ಜಗತ್ತಿಗೆ ಸಾವು ಅಂತ ಉದ್ದೇಶದಿಂದ, ಈ ಪಾರ್ಕನ್ನ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಸಿದ್ಧತೆಯನ್ನು ಮಾಡಿಕೊಂಡಿದೆ. ಈ ಯೋಜನೆಯಿಂದ ಸುಮಾರು 60 ಎಕರೆ ಜಾಗದಲ್ಲಿ ವಿಶಿಷ್ಟ ಪರಿಕಲ್ಪನೆಯಲ್ಲಿ ನಿರ್ಮಾಣಗೊಂಡಂತಹ ಪಾರ್ಕ್ ಜನಸಾಮಾನ್ಯರಿಗೆ ಸ್ಪಷ್ಟ ಮತ್ತು ಉದ್ದೇಶಪೂರಿತ ಸಂದೇಶಗಳನ್ನ ಈ ವಿಚಾರಾತ್ಮಕವಾಗಿ ರವಾನಿಸಲು ಸಿದ್ಧತೆ ಮಾಡಿಕೊಂಡಿದೆ. ಒಟ್ಟಾರೆಯಾಗಿ, ಮತ್ತೊಮ್ಮೆ ಸಿದ್ದಗಂಗಾ ಮಠಕ್ಕೆ ಹೈಟೆಕ್ ಸ್ಪರ್ಶ ನೀಡುತ್ತಿರುವುದು ಸಂತಸದಾಯಕ ವಿಚಾರ.