ಡೈಲಿ ವಾರ್ತೆ:02 ಆಗಸ್ಟ್ 2023
ಬಂಟ್ವಾಳ : ತಾಲೂಕು ಅಕ್ರಮ ಸಕ್ರಮ ಭೂ ಮಂಜೂರಾತಿಯಲ್ಲಿ ಭ್ರಷ್ಟಾಚಾರ, ಮುಖ್ಯ ಮಂತ್ರಿಗೆ ದೂರು.
ಬಂಟ್ವಾಳ : ತಾಲೂಕು ಅಕ್ರಮ ಸಕ್ರಮ ಭೂ ಮಂಜೂರಾತಿಯಲ್ಲಿ 2018-2023 ನೇ ಸಾಲಿನ ಬಿಜೆಪಿ ಸರಕಾರದ ಅವಧಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ನ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷ ಪದ್ಮನಾಭ ಸಾಮಂತ್ ವಾಮದಪದವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಭ್ರಷ್ಟಾಚಾರಕ್ಕೆ ಪ್ರಮುಖ ಪಾತ್ರ ವಹಿಸಿರುವ ಅಕ್ರಮ ಸಕ್ರಮ ಸಮಿತಿ ಹಾಗೂ ಅಧಿಕಾರಿ ವರ್ಗದವರು ಸೇರಿ ನಡೆಸಿದ ಭೂ ಮಂಜೂರಾತಿಗಳ ಭ್ರಷ್ಟಾಚಾರದ ದಾಖಲೆಗಳ ಸಮೇತ ಅಕ್ರಮ ಸಕ್ರಮದ ಸಮಿತಿಯು ಬ್ರಷ್ಟಾಚಾರದ ರೂಪದಲ್ಲಿ ಸರಕಾರದ ಭೂ ಮಂಜೂರಾತಿಗಳ ನಿಯಮಗಳನ್ನು ಉಲ್ಲಂಘನೆ ಮಾಡಿ. ಕಾನೂನಿನ ವಿರುದ್ಧವಾಗಿ ಕುಮ್ಕಿ ಜಾಗ ಮಂಜೂರು, ಗೋಮಾಳ ಭೂಮಿ ಒತ್ತುವರಿ, ಅರಣ್ಯ ಭೂಮಿ ಒತ್ತುವರಿ, ರಸ್ತೆ ಕಾಮಗಾರಿಯ ಗುತ್ತಿಗೆದಾರನಿಗೆ, ಮರಣ ಹೊಂದಿದ ವ್ಯಕ್ತಿಗಳಿಗೆ ಹಾಗೂ ಇತರರಿಗೂ ಕಾನೂನು ಬಾಹಿರವಾಗಿ ಸರಕಾರಿ ಭೂಮಿ ಮಂಜೂರು ಮಾಡಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ವಿವರಣೆಯನ್ನು ನೀಡಿದರು.
ಹಾಗೂ ಭ್ರಷ್ಟಾಚಾರ ನಡೆಸಿದ ಅಕ್ರಮ ಸಕ್ರಮ ಸಮಿತಿ ಹಾಗೂ ಅಧಿಕಾರಿ ವರ್ಗದ ವಿರುದ್ಧ ಕಾನೂನು ಕ್ರಮ ಕೈಗೊಂಡು ಭೂ ಮಂಜೂರಾತಿಗಳ ಪೂರ್ಣ ಪ್ರಮಾಣದ ತನಿಖೆ ನಡೆಸುವಂತೆ ಮಂಗಳವಾರ ಮುಖ್ಯ ಮಂತ್ರಿಯವರಿಗೆ ಮನವಿ ಸಲ್ಲಿಸಿದರು.
.