ಡೈಲಿ ವಾರ್ತೆ:02 ಆಗಸ್ಟ್ 2023

✒️ ಓಂಕಾರ ಎಸ್. ವಿ. ತಾಳಗುಪ್ಪ

ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಜನಸ್ನೇಹಿ ಅಧಿಕಾರಿ ಎಂಬ ಹೆಗ್ಗಳಿಕೆ ಪಡೆದ ಶಿಕಾರಿಪುರ ಯಂಗ್ ಡೈನಮಿಕ್ ಪೊಲೀಸ್ ಅಧಿಕಾರಿಗಳಾದ ಪ್ರಶಾಂತ್ ಟಿ ಬಿ ಹಾಗೂ ಶರತ್ ಹೆಚ್.


ಶಿಕಾರಿಪುರ: ಶಿವಶರಣರ ನಾಡು ಎಂದು ಖ್ಯಾತಿ ಪಡೆದ ಶಿಕಾರಿಪುರದ ಟೌನ್ ಪೊಲೀಸ್ ಸ್ಟೇಷನ್ ನಲ್ಲಿ ದಿ ಯಂಗ್ ಅಂಡ್ ಎನರ್ಜಿಟಿಕ್ ಪೊಲೀಸ್ ಆಫೀಸರ್ ಪ್ರಶಾಂತ್ ಟಿ ಬಿ ರವರು ಅಕ್ರಮ ಚಟುವಟಿಕೆಯನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಪ್ರಶಾಂತ್ ರವರ ಆಡಳಿತದಲ್ಲಿ ನ್ಯಾಯಕ್ಕೆಂದು ಸ್ಟೇಷನ್ ಗೆ ಬಂದವರಿಗೆ ನ್ಯಾಯ ಕೊಡಿಸುವಲ್ಲಿ ಎತ್ತಿದ ಕೈ ಇವರದು, ಹಾಗೂ ತಮ್ಮ ಸಿಬ್ಬಂದಿಗಳೊಡನೆ ಉತ್ತಮ ಬಾಂಧವ್ಯ ಹೊಂದಿ ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತ ಜನಸ್ನೇಹಿ ಅಧಿಕಾರಿ ಎಂಬ ಹೆಗ್ಗಳಿಕೆಯನ್ನು ಜನಸಾಮಾನ್ಯರಿಂದ ಪಡೆದಿದ್ದಾರೆ.

ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶರತ್ ಹೆಚ್ ರವರು ಮೂಲತಃ ಚಿತ್ರದುರ್ಗ ಜಿಲ್ಲೆಯವರು.
ಸಬ್ ಇನ್ಸ್ಪೆಕ್ಟರ್ ಆಗಿ ಮೂರು ವರ್ಷ ಕಳೆಯೋದರೊಳಗೆ ಇದೀಗ ಸೂಪರ್ ಕಾಪ್ ಖಡಕ್ ಅಧಿಕಾರಿ ಎಂಬ ಹೆಗ್ಗಳಿಕೆಯನ್ನು ಜನಸಾಮಾನ್ಯರಿಂದ ಪಡೆದಿದ್ದಾರೆ.

ಸ್ಟೇಷನ್ ಬಾಗಿಲಿಗೆ ಸಮಸ್ಯೆ ಎಂದು ಯಾವೊಬ್ಬ ನಾಗರಿಕರು ಹೋದರೆ ಕೂರಿಸಿ ಮಾತನಾಡುವ ಸೌಜನ್ಯ ಇವರದು, ಗ್ರಾಮಾಂತರ ಭಾಗದಿಂದ ಬರುವ ಹಳ್ಳಿ ಜನರ ಕಷ್ಟ ಸುಖಗಳನ್ನು ಕೇಳಿ ನ್ಯಾಯಯುತವಾಗಿ ಸಮಸ್ಯೆ ಬಗೆಹರಿಸುವುದರಲ್ಲಿ ಸಬ್ ಇನ್ಸ್ಪೆಕ್ಟರ್ ಶರತ್ ರವರ ಕಾರ್ಯ ಅಪಾರವಾಗಿದೆ.

ಸ್ಥಳೀಯರ ಹೇಳಿಕೆ ಪ್ರಕಾರ ಸಬ್ ಇನ್ಸ್ಪೆಕ್ಟರ್ ಶರತ್ ರವರು ಚಾರ್ಜ್ ತೆಗೆದುಕೊಂಡ ನಂತರ ಗ್ರಾಮಾಂತರ ಭಾಗದಲ್ಲಿ ಅನೇಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಬಿದ್ದಿದೆ ಎನ್ನಲಾಗಿದೆ.

ಒಟ್ಟಾರೆ ಯಂಗ್ ಸ್ಮಾರ್ಟ್ ಪೋಲೀಸ್ ಅಧಿಕಾರಿಗಳಿಂದ ಶಿಕಾರಿಪುರದಲ್ಲಿ ಕಾನೂನು ಸುವ್ಯವಸ್ಥೆ ಅತ್ಯುತ್ತಮವಾಗಿದೆ ಎಂಬುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ