ಡೈಲಿ ವಾರ್ತೆ:03 ಆಗಸ್ಟ್ 2023

ವರದಿ: ವಿದ್ಯಾಧರ ಮೊರಬಾ

ಅಂಕೋಲಾ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನ್ಮದಿನ ಅಂಗವಾಗಿ ಇಂದಿರಾ ಕ್ಯಾಂಟೀನಲ್ಲಿ ಸಿಹಿ ವಿತರಣೆ

ಅಂಕೋಲಾ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡತನವನ್ನು ಚೆನ್ನಾಗಿ ಬಲ್ಲ ಅವರು ಬಡವರಿಗಾಗಿ ಅನೇಕ ಯೋಜನೆಗಳನ್ನು ತಂದಿದ್ದಾರೆ. ಗ್ಯಾರಂಟಿ ಯೋಜನೆಗಳ ಮೂಲಕ ದೇಶದಲ್ಲಿಯೇ ಜನಪ್ರಿಯ ಆಡಳಿತವನ್ನು ನೀಡುತ್ತಿದ್ದಾರೆ. ಇಂತಹ ಒಳ್ಳೆಯ ಕಾರ್ಯವನ್ನು ಬಿಜೆಪಿಯವರು ಟೀಕೆ ಮಾಡುತ್ತಿದ್ದಾರೆ. ಮುಂದೆ ಸಿದ್ದರಾಮಯ್ಯ ಅವರಿಂದ ಇನ್ನಷ್ಟು ಒಳ್ಳೆಯ ಆಡಳಿತ ಈ ನಾಡಿಗೆ ಸಿಗಲಿದೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಜಿ.ಪ.ಮಾಜಿ ಅಧ್ಯಕ್ಷ ರಮಾನಂದ ಬಿ.ನಾಯಕ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಮತ್ತು ಮಹಿಳಾ ಕಾಂಗ್ರೆಸ್ ಘಟಕದವರು ಗುರುವಾರ ಕೆ.ಸಿ.ರಸ್ತೆಗೆ ಹೊಂದಿಕೊಂಡಿರುವ ಇಂದಿರಾ ಕ್ಯಾಂಟೀನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 76ನೇ ಜನ್ಮದಿನದ ಅಂಗವಾಗಿ ಕೇಕ್ ಕತ್ತರಿ ಸಿ ಸಿಹಿ ವಿತರಿಸುವ ಮೂಲಕ ಅವರು ಮಾತನಾಡಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುಜಾತಾ ಗಾಂವಕರ ಮಾತನಾಡಿ, ಸಿದ್ದರಾಮಯ್ಯ ಎಲ್ಲ ವರ್ಗದ ಜನರ ನಾಯಕರು. ಬಡವರಿಗೆ ಹಸಿದವರಿಗೆ ಅನ್ನ ನೀಡಿದ ಅವರ ಹುಟ್ಟು ಹಬ್ಬವನ್ನು ಅವರೇ ಪ್ರಾರಂಭಿಸಿದ ಇಂದಿರಾ ಕ್ಯಾಂಟೇನಿನಲ್ಲೇ ಆಯೋಜಿಸಲಾಗಿದೆ. ಪ್ರತಿದಿನ ಇಲ್ಲಿ ಗುಣಮಟ್ಟದ ಉಪಹಾರ ಮತ್ತು ಊಟ ಕ್ಕಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಕರು ಸೇರಿದಂತೆ ಮುಂಜಾನೆ 250 ರಿಂದ 300 ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಸೇರಿದಂತೆ 300ಕ್ಕಿಂತ ಹೆಚ್ಚು ಜನರು ಊಟ ಮಾಡುತ್ತಾರೆ. ಇಂತಹ ಒಳ್ಳೆಯ ಯೋಜನೆಗಳನ್ನು ನೀಡಿದ ಸಿದ್ದರಾಮಯ್ಯ ನೂರು ಕಾಲ ಸುಖವಾಗಿ ಬಾಳಲಿ ಎಂದು ಹಾರೈಸಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಸಾಯಿ ಗಾಂವಕರ ಮಾತನಾಡಿ, ಸಿದ್ದರಾಮಯ್ಯ ಒಬ್ಬ ಮಹಾಪುರಷ ಅವರು ಹುಟ್ಟಿರುವದೇ ಈ ನಾಡಿನ ಶ್ರೇಯಸ್ಸಿಗಾಗಿ. ಇವರ ಹುಟ್ಟು ಹಬ್ಬವನ್ನು ಆಚರಿಸುವದು ತುಂಬ ಹೆಮ್ಮೆಯ ವಿಚಾರ ಎಂದರು. ಕಾರ್ಯಕ್ರಮದ ಬಳಿಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಊಟದ ಜತೆ ವಿಶೇಷವಾಗಿ ಪಾಯಸವನ್ನು ನೀಡಲಾಯಿತು.
ಇದೇ ವೇಳೆ ಪುರಸಭೆ ಮುಖ್ಯಾಧಿಕಾರಿ ಎನ್.ಆರ್.ಸ್ವಾಮಿ ಭೇಟಿ ನೀಡಿ ಇಲ್ಲಿಯ ಸ್ವಚ್ಛತೆ, ಆಹಾರ ತಯಾರಿಕೆ ಪರಿಶೀಲಿಸಿದರು. ಇಂದಿರಾ ಕ್ಯಾಂಟೀನಿನ ಕೆಲ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದ ಕೊರತೆ ಕುರಿತು ಸುಜಾತ ಗಾಂವಕರ ಮುಖ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು, ಅದನ್ನು ಒಂದು ವಾರದೊಳಗೆ ಸರಿಪಡಿಸವು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಾಪಂ.ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಂಜುನಾಥ ಡಿ. ನಾಯ್ಕ, ಕಾಂಗ್ರೆಸ್ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ನಾರಾಯಣ ನಾಯಕ ಸೂರ್ವೆ, ತಾಲೂಕ ಅಧ್ಯಕ್ಷ ಮಧುಕೇಶ್ವರ ದೇವರಭಾವಿ, ಮಾಜಿ ಸದಸ್ಯೆ ದೀಪಾ ಆಗೇರ, ಭಾವಿಕೇರಿ ಗ್ರಾಪಂ.ಮಾಜಿ ಉಪಾಧ್ಯಕ್ಷ ಉದಯ ವಾಮನ ನಾಯಕ, ಶೋಭಾ ನಾಯ್ಕ, ಮೊನ್ನಪ್ಪ ನಾಯ್ಕ ಪ್ರಮುಖರಾದ ಸುಧಾ ನಾಯ್ಕ ಹೊನ್ನೆಕೇರಿ, ಸವಿತಾ ಕಲ್ಮಠ, ಸುರೇಶ ನಾಯ್ಕ ಅಸ್ಲಗದ್ದೆ, ಜಗದೀಶ ಖಾರ್ವಿ, ಮಂಜುನಾಥ ವಿ.ನಾಯ್ಕ, ದರ್ಶನ ನಾಯ್ಕ ಅವರ್ಸಾ, ಹೂವಿನ ವ್ಯಾಪಾರಿ ಸತೀಶ ನಾಯ್ಕ, ಪುರಸಭೆ ಸಂಘಟನಾಧಿಕಾರಿ ಡಿ.ಎಲ್.ರಾಥೋಡ, ಇಂಜಿನೀಯರ ಶೈಲೀಜಾ ನಾಯ್ಕ, ಸಿಬ್ಬಂದಿಗಳಾದ ಬೀರಣ್ಣ ನಾಯಕ, ರಮೇಶ ನಾಯ್ಕ, ಇಂದಿರಾ ಕ್ಯಾಂಟೀನ್ ಮುಖ್ಯ ಅಡಿಗೆಗಾರ್ತಿ ಲಕ್ಷ್ಮೀ ಮೊರಬಾ, ಮೇಲ್ವಿಚಾರಕಿ ಸುಶೀಲಾ ಆಗೇರ, ಊಟ ವಿತರಕಿ ವನಿತಾ ನಾಯ್ಕ, ಸ್ವಚ್ಛತಾಗಾರರಾಗಿ ಮಂಗಲಾ ಆಗೇರ, ಮುಸ್ಕಾನ, ಭಟ್ಕಳ ಇಂದಿರಾ ಕ್ಯಾಂಟೀನ್ ಮ್ಯಾನೇಜರ ಬಸವನ ಗೌಡ ಇತರರಿದ್ದರು.