ಡೈಲಿ ವಾರ್ತೆ:04 ಆಗಸ್ಟ್ 2023

ಸಂಕೇಶ್ವರ: ವೈದ್ಯರ ನಿರ್ಲಕ್ಷದಿಂದ ಬಾಣಂತಿ ಸಾವು – ಠಾಣೆ ಎದುರು ಶವ ಇಟ್ಟು ಪ್ರತಿಭಟನೆ!

ಸಂಕೇಶ್ವರ : ಮಹಿಳೆಯೊಬ್ಬರು ಸರಕಾರಿ ವೈದ್ಯರ ನಿರ್ಲಕ್ಷ್ಯ ದಿಂದ ಮೃತಪಟ್ಟಿದ್ದಾರೆಂದು ಆರೋಪಿಸಿ ವೈದ್ಯರ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಮೃತ ಮಹಿಳೆಯ ಸಂಬಂಧಿಕರು ಮೃತದೇಹವನ್ನು ಪೊಲೀಸ ಠಾಣೆಯ ಎದುರು ಇಟ್ಟು ಪ್ರತಿಭಟನೆಗೆ ಮುಂದಾದ ಘಟನೆ ಸಂಕೇಶ್ವರ ಪಟ್ಟಣದಲ್ಲಿ ವರದಿಯಾಗಿದೆ.

ಕಿರಣ ಟಿಕ್ಕೆ (24) ಎಂಬುವ ಬಾಣಂತಿ ಮೃತಪಟ್ಟ ದುರ್ಧೈವಿಯಾಗಿದ್ದಾಳೆ. ಈ ಬಾಣಂತಿಯ ಸಾವಿನಿಂದ 10 ದಿನದ ಗಂಡು ಮಗು ಅನಾಥವಾಗಿದ್ದು, ತಾಯಿ ಶವ ಇರುವ ಅಂಬ್ಯುಲನ್ಸ್ ನಲ್ಲಿ ಪುಟ್ಟ ಕಂದಮ್ಮನ ಅಳುವ ಸ್ಥಳದಲ್ಲಿದ್ದ ನಾಗರಿಕರ ಕಣ್ಣಲ್ಲಿ ನೀರು ಬರುವಂತೆ ಮಾಡತೋಡಗಿದೆ.

ಮೃತ ಬಾಣಂತಿಯ ಪಾಲಕರು ಹೇಳುವ‌ ಪ್ರಕಾರ ಹುಕ್ಕೇರಿ ತಾಲೂಕಿನ ಕೋಣಕೇರಿ ಗ್ರಾಮದ ಮಹಿಳೆಯೊಬ್ಬರಿಗೆ ಕಳೆದ ಕೆಲವು ದಿನಗಳ ಹಿಂದೆ ಹೆರಿಗೆ ಮಾಡಲಾಗಿತ್ತು. ಆದರೆ ಅವಳಿಗೆ ಹುಕ್ಕೇರಿ ತಾಲೂಕಿನ ನಿಡಸೋಸಿ ಸರಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಬಂದಾಗುವ ಕುಟುಂಬ ಯೋಜನೆಯ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಅದರ ಬಳಿಕ ಮಹಿಳೆ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಸರಕಾರಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ಅದರ ಬಳಿಕ ಹೊಟ್ಟೆನೋವು ಉಂಟಾಗಿ ಬೇರೆ ಆಸ್ಪತ್ರೆಗೆ ದಾಖಾಗಿದ್ದರು.
ಅಲ್ಲಿ ಮೃತ ಮಹಿಳೆಯ ಹೊಟ್ಟೆಯನ್ನು ಸ್ಕಾನ್ ಮಾಡಲಾಗಿದ್ದು, ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗಿ ಮಹಿಳೆ ಮೃತಪಟ್ಟಿರುವದಾಗಿ ಅಲ್ಲಿನ ವೈದ್ಯರು ದೃಢಪಡಿಸಿದ್ದಾರೆ ಎಂದು ಬಾಣಂತಿಯ ಪಾಲಕರು ಹೇಳುತ್ತಿದ್ದಾರೆ.

ಆದರೆ ಬಾಣಂತಿಯ ಪಾಲಕರು ಅಂಬ್ಯುಲನ್ಸ್ ನಲ್ಲಿ ಶವ ತಂದು ಸಂಕೇಶ್ವರ ಪೊಲೀಸ ಠಾಣೆಯ ಎದುರು ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೆ ನಮ್ಮ ಬಾಣಂತಿಯ ಸಾವಿಗೆ ನಿಡಸೋಸಿ ವೈದ್ಯರ ನಿರ್ಲಕ್ಷ್ಯವೇ ಕಾರಣವಾಗಿದ್ದು, ಅವರ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಅಲ್ಲದೆ ಮೃತ ಮಹಿಳೆಯ ಶವವನ್ನು ಪೊಲೀಸರು ಶವ ಪರೀಕ್ಷೆಗೆ ಕಳಿಸುತ್ತಿದ್ದು, ಮರಣ್ಣೋತ್ತರ ವರದಿಯ ನಂತರ ಬಾಣಂತಿಯ ಸಾವಿನ ಚಿತ್ರಣ ಹೊರಬರಲಿದೆ.