ಡೈಲಿ ವಾರ್ತೆ:06 ಆಗಸ್ಟ್ 2023
ಕೋಟ ಪಂಚವರ್ಣ ಸಂಸ್ಥೆ ಆಸಾಡಿ ಒಡ್ರ್ ಕಾರ್ಯಕ್ರಮಕ್ಕೆ ವೈಷ್ಣವಿ ರಕ್ಷಿತ್ ಕುಂದರ್ ಚಾಲನೆ: ಹಿರಿಯರ ಅನುಭವ, ಮಾರ್ಗದರ್ಶನ ಇಂದಿನ ಜನಾಂಗಕ್ಕೆ ಅಗತ್ಯ
ಕೋಟ: ಹಿಂದೆ ಆಷಾಢ ಮಾಸ ಅನ್ನುವುದು ಬಹಳ ಕಷ್ಟಕರವಾದ ದಿನಗಳಾಗಿದ್ದವು. ಯಾವುದೇ ಸಂಭ್ರಮಾಚರಣೆಗಳು ನಡೆಯುತ್ತಿದ್ದಿರಿರಲಿಲ್ಲ. ಇಂದು ಅದನ್ನು ನೆನಪಿಸುವ ಅನೇಕ ಕಾರ್ಯಕ್ರಮಗಳು ಹಿರಿಯರಿಂದ ಆಗುತ್ತಿದ್ದು, ಇದು ಯುವಜನಾಂಗಕ್ಕೆ ಅಗತ್ಯವಾಗಿದೆ ಎಂದು ಕೋಟದ ಗೀತಾನಂದ ಟ್ರಸ್ಟ್‍ನ ನಿರ್ದೇಶಕಿ ವೈಷ್ಣವಿ ರಕ್ಷಿತ್ ಕುಂದರ್ ಹೇಳಿದರು.
ಕೋಟ ಹಂದಟ್ಟು ಗೆಳೆಯರ ಬಳಗ ಸಭಾಂಗಣದಲ್ಲಿ ಭಾನವಾರ ಕೋಟದ ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ನಡೆದ ಆಸಾಡಿ ಒಡ್ರ್ ಗ್ರಾಮೀಣ ಸೊಗಡುಗಳ ತಿಲ್ಲಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಸಿಗುವ ಅದೆಷ್ಟೋ ಔಷಧೀಯ ಗಿಡ, ಎಲೆಗಳ ಪರಿಚಯ ಆಷಾಢ ಮಾಸದಲ್ಲಿ ಆಗುತ್ತಿದೆ. ಹಿರಿಯರ ಮರ್ಗದರ್ಶನದಿಂದ ನಾವು ಇಂದಿನ ಮಕ್ಕಳಿಗೆ ಇಂತಹ ಕಾರ್ಯಕ್ರಮಗಳ ಮೂಲಕ ಪರಿಚಯ ಮಾಡಿಸುತ್ತಿರುವುದು ಶ್ಲಾಘನೀಯ ಎಂದರು.
ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭ ಕೋಟದ ಗ್ರಾಮೀಣ ಪರಿಸರದಲ್ಲಿ ಹುಟ್ಟಿ ಅವಿಭಜಿತ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಗುರುತಿಸಿಕೊಂಡ ಸಾಧಕಿ ಕುಸುಮಾ ದೇವಾಡಿಗ ಅವರಿಗೆ ಆಸಾಡಿ ಒಡ್ರ್ ಗೌರವ ನೀಡಿ ಗೌರವಿಸಲಾಯಿತು. ಕುಂದಕನ್ನಡದ ರಾಯಭಾರಿ ಮನು ಹಂದಾಡಿ ಅವರಿಗೆ ಪಂಚವರ್ಣ ರಜತ ಗೌರವ ನೀಡಿ ಸನ್ಮಾನಿಸಲಾಯಿತು.
ಕಾರ್ಕಳದ ರಂಗನಪಲ್ಕೆ ಹೊಸಬೆಳಕು ಆಶ್ರಮ ಮತ್ತು ಮಟಪಾಡಿಯ ವಿಜಯ ಬಾಲನಿಕೇತನ ಆಶ್ರಮಕ್ಕೆ ದಿನನಿತ್ಯದ ಸಾಮಗ್ರಿಗಳನ್ನು ಹಂದಟ್ಟು ಮಹಿಳಾ ಬಳಗದ ಸಹಯೋಗದೊಂದಿಗೆ ನೀಡಲಾಯಿತು.
ಗ್ರಾಮೀಣ ಪರಿಕರದ ಪ್ರದರ್ಶನವನ್ನು ಮಣೂರು ಸ್ನೇಹಕೂಟದ ಸಂಚಾಲಕಿ ಭಾರತಿ ವಿ ಮಯ್ಯ ಅನಾವರಣಗೊಳಿಸಿದರು.
ಗ್ರಾಮ್ಯ ಭಾಷೆಯ ಸೊಗಡುಗಾರ ಕೋಟದ ಜಯರಾಮ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ ಶೆಣೈ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಸ್ಥಾಪಕಾಧ್ಯಕ್ಷ ಸುರೇಶ ಗಾಣಿಗ, ಗೌರವಾಧ್ಯಕ್ಷ ಸತೀಶ ಎಚ್ ಕುಂದರ್, ವಸಂತಿ ಹಂದಟ್ಟು, ಲಲಿತಾ ಪೂಜಾರಿ, ಪ್ರೇಮಾ ಪ್ರಭಾಕರ ಇದ್ದರು.
ಪಂಚವರ್ಣದ ಸುಜಾತ ಯು.ತಿಂಗಳಾಯ ಸ್ವಾಗತಿಸಿದರು. ಶಕೀಲಾ ನಾಗರಾಜ್ ವರದಿ ವಾಚಿಸಿದರು. ಸಂಚಾಲಕಿ ಪುಷ್ಪಾ ಕೆ ಹಂದಟ್ಟು ವಂದಿಸಿದರು. ಸುಜಾತ ಬಾಯರಿ ಮತ್ತು ಅಭಿಜಿತ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು.
ಗಮನ ಸೆಳೆದ ವಿಶೇಷತೆ..
ಸಮಾರು ಬೈಂದೂರಿನಿಂದ ಹಿಡಿದು ಬ್ರಹ್ಮಾವರದ ತನಕ ಗ್ರಾಮೀಣ ಭಾಷೆ ಕುಂದಗನ್ನಡ ಹಾಗೂ ಅಲ್ಲಿನ ಬದುಕು,ಪರಿಕರಗಳ ಅನಾವರ ವಿಶೇಷವಾಗಿ ಗಮನ ಸೆಳೆಯಿತು.
ಅದಲ್ಲೂ ಬಹುಮುಖ್ಯವಾಗಿ ಸ್ನೇಹಕೂಟ ಮಣೂರು ಈ ತಂಡದಿಂದ ಗ್ರಾಮೀಣ ಬದುಕಿನ ಪರಿಭಾಷೆಯನ್ನು ತಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಅನಾವರಣಗೊಳಿಸಿದರು.
ಪರಿಕರಗಳ ಭಾಗವಾಗಿ ಕೃಷಿಯಲ್ಲಿ ಬಳಕೆ ಮಾಡುವ ನೋಗ ,ನೇಗಿಲು,ಗೋರೆ,ಕೈಗೋರಿ,ಸಾಂಬಾರ್ ಬಟ್ಲ,ಗಳಿನ್ ಸಿದ್ಧಿ,ನೀರಾ ಇಳಿಸುವ ಸಾಧನ,ಅಡಿ ಮಂಚ,ತೋಟಿಲು,ಹರಿ,ಕಮ್ ಗೂಡ್ ಇತರ
ಗ್ರಾಮೀಣ ತಿಂಡಿ ತಿನಿಸು
ಪತ್ರೋಡಿ,ದಾನಿ ಮುಳಕ,ಎಳ್ಳುಂಡಿ,ಶಕಿಹಿಟ್,ಕಾಯಿ ಹೊಡಿ,ದಾಸನ ಕಡುಬು,ಒಡ್ ದೊಸೆ ಅನೇಕ ಗ್ರಾಮೀಣ ತಿನಿಸುಗಳು ಗಮನ ಸೆಳೆದವು
ಬಹುಮಾನ ವಿತರಣೆ
ಇದೇ ಸಂದರ್ಭದಲ್ಲಿ ಗ್ರಾಮೀಣ ತಿನಿಸುಗಳ ಸ್ಪರ್ಧಾ ಕಾರ್ಯಕ್ರಮದಲ್ಲಿ 60ಕ್ಕೂ ಅಧಿಕ ತಿನಿಸುಗಳು ಗಮನ ಸೆಳೆದವು ಅದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಸಿಲಾಯಿತು.ಪ್ರಥಮ ಬಹುಮಾನವನ್ನು ಸುಶೀಲ,ದ್ವಿತೀಯ ಗೀತಾ ಸುಬ್ಬಯ್ಯ,ತೃತೀಯವಾಗಿ ಪ್ರೇಮ ಸುರೇಶ್,ಗ್ರಾಮೀಣ ಪರಿಕರದಲ್ಲಿ ರತ್ನಾ ಚಂದು, ಗಿರೀಜಾ ಅಲ್ಸೆಬೆಟ್ಟು ಬಹಮಾನ ಪಡೆದುಕೊಂಡರು
ಬಹುಮಾನ ವಿತರಣಾ ಸಮಾರಂಭದಲ್ಲಿ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಪಡಿಯಾರ್ ಮರವಂತೆ,ತೀರ್ಪುಗಾರರಾಗಿ ಗೋಪಾಡಿ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷೆ ಸರಸ್ವತಿ ಜಿ ಪುತ್ರನ್,ಸಾಮಾಜಿಕ ಕಾರ್ಯಕರ್ತೆ ಕಲ್ಪನಾ ಭಾಸ್ಕರ್,ಕುಂಭಾಶಿ ಗ್ರಾಮಪಂಚಾಯತ್ ಅಧ್ಯಕ್ಷೆ ಶ್ವೇತ ಶ್ರೀನಿಧಿ ಉಪಾಧ್ಯಾಯ,ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಶೆಣೈ,ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಕಲಾವತಿ ಅಶೋಕ್,ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್,ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ,ಮಹಿಳಾ ಮಂಡಲದ ಗೌರವಾಧ್ಯಕ್ಷೆ ಕುಸುಮ ದೇವಾಡಿಗ,ಗ್ರಾಮೀಣ ಭಾಷಾ ಸೋಗಡುಗಾರ ಜಯರಾಮ್ ಶೆಟ್ಟಿ ,ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ಹಂದಟ್ಟು ಅಧ್ಯಕ್ಷೆ ಜಾನಕಿ ಹಂದೆ,ಮಣೂರು ಫ್ರೆಂಡ್ಸ್ ಅಧ್ಯಕ್ಷ ದಿನೇಶ್ ಆಚಾರ್,ಸುಜಾತ ಬಾಯರಿ ಮತ್ತಿತರರು ಉಪಸ್ಥಿತರಿದ್ದರು.