ಡೈಲಿ ವಾರ್ತೆ:06 ಆಗಸ್ಟ್ 2023

ಹಳ್ಳಿ ಹಳ್ಳಿಗಳಿಗೆ ಹಬ್ಬಿದ ಸೌಜನ್ಯ ಕಿಡಿ: ವಂಡಾರಿನಲ್ಲಿ ಬೃಹತ್ ಪ್ರತಿಭಟನೆ!

ಹನ್ನೊಂದು ವರ್ಷಗಳ ಹಿಂದಿನ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ಈಗ ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸದ್ದು ಮಾಡುತ್ತಿದೆ.

ಕುಂದಾಪುರ:ಹಳ್ಳಿ ಹಳ್ಳಿಗಳಲ್ಲಿ ಸೌಜನ್ಯ ಪರವಾದ ಪ್ರತಿಭಟನೆಗಳು, ಆಕ್ರೋಶಗಳು ಕೇಳಿ ಬರುತ್ತಿದೆ. ಕುಂದಾಪುರ ತಾಲೂಕಿನ ಹಿಲಿಯಾಣ ಆವರ್ಸೆ ವಂಡಾರು ಎಂಬಲ್ಲಿ ಗ್ರಾಮಸ್ಥರು ಸೌಜನ್ಯಾ ಪರ ಧ್ವನಿ ಎತ್ತಿದ್ದಾರೆ. ಸುಮಾರು ನೂರೈವತ್ತಕ್ಕೂ ಹೆಚ್ಚು ಜನ ಹಿಲಿಯಾಣ ವಂಡಾರು ಪೇಟೆಯಲ್ಲಿ ಪ್ರತಿಭಟನೆ ನಡೆಸಿ ಸೌಜನ್ಯಾಳ ಪ್ರಕರಣವನ್ನು ಮರು ತನಿಖೆ ಮಾಡಿ ಅವಳ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ಕರುಣಾಕರ ಶೆಟ್ಟಿ ಹಿಲಿಯಾಣ, ಶಂಕರ ಪೂಜಾರಿ, ಗಣೇಶ ಶೆಟ್ಟಿ, ಪ್ರಸಾದ್, ರಿಕ್ಷಾ ಸತೀಶ ಶೆಟ್ಟಿ, ಸುರೇಂದ್ರ, ರಿಕ್ಷಾ ಜನಾರ್ದನ ಆಚಾರ್ಯ, ಕೃಷ್ಣರಾಜ್ ಶೆಟ್ಟಿ ವಕೀಲರು, ಪ್ರವೀಣ್ ಶೆಟ್ಟಿ ವಂಡಾರು, ಪ್ರಮೋದ್ ಹೆಗ್ಡೆ ಹಿಲಿಯಾಣ, ಅಣ್ಣಪ್ಪ ಕೀರಾಡಿ, ವಿಜಯ ಶೆಟ್ಟಿ ಆವರ್ಸೆ, ಶ್ರೀನಿವಾಸ ಶೆಟ್ಟಿ, ಸುಮನ್ ಶೆಟ್ಟಿ, ಸುನೀಲ್ ಶೆಟ್ಟಿ, ಗಣೇಶ ಸರ್ವೋತ್ತಮ್ ಶೆಟ್ಟಿ, ರಿಕ್ಷಾ ಮಾಲಕರು ಹಾಗೂ ಊರಿನ ಮಹಿಳಾ ಮಾತೆಯವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.