ಡೈಲಿ ವಾರ್ತೆ:07 ಆಗಸ್ಟ್ 2023

ಕಾಣದಂತೆ ಮಾಯಾವಾದ ಆಂಬುಲೆನ್ಸ್ – ಆದಷ್ಟು ಬೇಗ ಹುಡುಕಿ ಕೊಡಿ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಿವಮೊಗ್ಗ ಜಿಲ್ಲಾಸಂಸದರು, ಸಾಗರ ಕ್ಷೇತ್ರದ ಶಾಸಕರು

✒️ ಓಂಕಾರ ಎಸ್. ವಿ. ತಾಳಗುಪ್ಪ

ಸಾಗರ :-* ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಸಾಗರ ಉಪ ವಿಭಾಗೀಯ ಆಸ್ಪತ್ರೆಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಮಾಜಿ ಸಚಿವ ಹಾಗೂ ನಿಕಟಪೂರ್ವ MSIL ಅಧ್ಯಕ್ಷರಾದ ಹರತಾಳು ಹಾಲಪ್ಪರವರು MSIL ಸಂಸ್ಥೆಯಿಂದ ನೂತನ ಅತ್ಯಾಧುನಿಕ ಆಂಬುಲೆನ್ಸ್ ನ್ನೂ ನೀಡಿದ್ದರು.

*ಕಳೆದ 03 ತಿಂಗಳ ಹಿಂದೇ ಸಾಗರ ಉಪ ವಿಭಾಗೀಯ ಆಸ್ಪತ್ರೆಯಿಂದ ಶಿವಮೊಗ್ಗಕ್ಕೆ ರೋಗಿಯನ್ನು ತುರ್ತು ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವ ಸಮಯದಲ್ಲಿ ಆಯನೂರು ಸಮೀಪ ಆಂಬುಲೆನ್ಸ್ ಗೆ ದ್ವಿಚಕ್ರ ವಾಹನ ಸವಾರ ಅಡ್ಡ ಬಂದು ಡಿಕ್ಕಿ ಹೊಡೆದು ಮೃತ ಪಟ್ಟಿರುತ್ತಾನೆ*

*ಅಪಘಾತವಾಗಿದ್ದ ಆಂಬುಲೆನ್ಸ್ ವಾಹನವೂ ಅಷ್ಟೇನೂ ಹಾನಿಯಾಗದೇ ಸಣ್ಣ ಪುಟ್ಟ ಹಾನಿಯಾಗಿದ್ದು, ಸುಮಾರು 03 ತಿಂಗಳು ಕಳೆದರೂ ಸಣ್ಣ ಪುಟ್ಟ ಹಾನಿಯಾಗಿದ್ದ ಈ ಆಂಬುಲೆನ್ಸ್ ವಾಹನವನ್ನೂ ದುರಸ್ಥಿ ಮಾಡಿಸಿ ಸಾರ್ವಜನಿಕರ ಸದುಪಯೋಗಕ್ಕಾಗಿ ನೀಡಬೇಕಾಗಿದ್ದ ಈ ಆಂಬುಲೆನ್ಸ್ ತಿಂಗಳುಗಟ್ಟಲೇ ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಆವರಣದಲ್ಲೇ ಇದ್ದೂ, ಸಧ್ಯ ಆಂಬುಲೆನ್ಸ್ ಕಣ್ಮರೆಯಾಗಿದ್ದೂ, ತುರ್ತಾಗಿ ಆಂಬುಲೆನ್ಸ್ ವಾಹನ ರಿಪೇರಿ ಕಾರ್ಯ ಮಾಡಿಸಿ ಸಾರ್ವಜನಿಕರ ಸೇವೆಗೆ ಅನುವು ಮಾಡಿಕೊಡಬೇಕಾದ ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಸಾಗರ ಉಪ ವಿಭಾಗೀಯ ಆಸ್ಪತ್ರೆಯ ಆಡಳಿತ ವೈಧ್ಯಾಧಿಕಾರಿಗಳ ಕರ್ತವ್ಯ ನಿರ್ಲಕ್ಷತನ ವಿರುದ್ಧ ಸಾಗರ ಪ್ರಜ್ಞಾವಂತರು ಆಕ್ರೋಶ ವ್ಯಕ್ತಪಡಿಸುತ್ತಿರುವುದು ಬೆಳಕಿಗೆ ಬಂದಿದೆ.

ಶಿವಮೊಗ್ಗ ಮಣಿಪಾಲ ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆಗಾಗಿ ಬಡ ರೋಗಿಗಳು ತೆರಳಲು ಅನಿವಾರ್ಯವಾಗಿ ದುಪ್ಪಟ್ಟು ಹಣ ತೆತ್ತು ಖಾಸಗಿ ಆಂಬುಲೆನ್ಸ್ ತೆಗೆದುಕೊಂಡು ಹೋಗಲೇ ಬೇಕಾದ ಅನಿವಾರ್ಯ ಸ್ಥಿತಿ

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ, ಶಿವಮೊಗ್ಗ ಜಿಲ್ಲಾ ಸಂಸದರಾದ ಬಿ. ವೈ. ರಾಘವೇಂದ್ರ, ಸಾಗರ ಕ್ಷೇತ್ರದ ಶಾಸಕರಾದ ಗೋಪಾಲ ಕೃಷ್ಣ ಬೇಳೂರು ರವರು ಆದಷ್ಟು ಬೇಗನೇ ಹುಡುಕಿ ಕೊಟ್ಟು ಸಾರ್ವಜನಿಕರ ಸೇವೆಗೆ ಈ ಆಂಬುಲೆನ್ಸ್ ತುರ್ತು ಸೇವೆಗೆ ದೊರಕುವಂತಾಗಲಿ ಎಂದೂ ಸಾರ್ವಜನಿಕರು ಮೊರೆ ಹೋಗಿದ್ದಾರೆ*