ಡೈಲಿ ವಾರ್ತೆ:07 ಆಗಸ್ಟ್ 2023
ಕಾರ್ಕಳ:ಹಿಂಸಾತ್ಮಕವಾಗಿ ಅಕ್ರಮ ಗೋ ಸಾಗಾಟ – ಬಜರಂಗದಳದಿಂದ ಕಾರ್ಯಚರಣೆ, ನಾಲ್ಕು ಗೋವುಗಳ ರಕ್ಷಣೆ!
ಕಾರ್ಕಳ: ಗೋವುಗಳನ್ನು ಅಪಹರಿಸಿ ಪರಾರಿಯಾಗುತ್ತಿದ್ದ ವಾಹನವನ್ನು ಬಜರಂಗದಳದ ಕಾರ್ಯಕರ್ತರು ಬೆನ್ನಟ್ಟಿ ಹಿಡಿದು ಗೋವುಗಳನ್ನು ರಕ್ಷಿಸಿದ ಘಟನೆ ಬಜಗೋಳಿಯಲ್ಲಿ ನಡೆದಿದೆ.
ನಾಲ್ಕು ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸ್ಕಾರ್ಪಿಯೋ ವಾಹನದಲ್ಲಿ ತುಂಬಿಸಿಕೊಂಡು ಕಾರ್ಕಳ ತಾಲೂಕಿನ ಕೆರ್ವಾಶೆಯಲ್ಲಿ ಸಾಗುತ್ತಿರುವುದು ಬಜರಂಗದಳದ ಕಾರ್ಯಕರ್ತರ ಗಮನಕ್ಕೆ ಬಂದು ತಕ್ಷಣ ಕಾರ್ಯಪ್ರವೃತ್ತರಾಗಿ ಬೆನ್ನಟ್ಟಿಕೊಂಡು ಬಂದ ಪರಿಣಾಮ ಆರೋಪಿಗಳು ಬಜಗೋಳಿಯಲ್ಲಿ ವಾಹನ ಬಿಟ್ಟು ಪರಾರಿಯಾಗಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.