ಡೈಲಿ ವಾರ್ತೆ:07 ಆಗಸ್ಟ್ 2023

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಬೆಟ್ಟು – ಐರೋಡಿ: ಧ್ವನಿ ವರ್ಧಕ ಹಸ್ತಾಂತರ ಮತ್ತು ಟ್ರ್ಯಾಕ್ ಸೂಟ್ ವಿತರಣೆ ಕಾರ್ಯಕ್ರಮ

ಸಾಸ್ತಾನ: ಗೋಳಿಬೆಟ್ಟು ಐರೋಡಿ ಸರ್ಕಾರಿ ಶಾಲೆಗೆ ವೆರೋನಿಕಾ ರೊಡ್ರಿಗಸ್ ಅವರು ಕೊಡಮಾಡಿದ ಉತ್ತಮ ಗುಣಮಟ್ಟದ ಧ್ವನಿ ವರ್ಧಕಗಳನ್ನು ಸ್ಥಳೀಯ ಜನಪ್ರತಿನಿಧಿಗಳಾದ ಸುಧಾಕರ ಪೂಜಾರಿ ಮತ್ತು ನವೀನ್ ಕಾರಂತ್ ಶಾಲೆಯವರಿಗೆ ಹಸ್ತಾಂತರಿಸಿ ಶುಭ ಹಾರೈಸಿದರು.

ಹಾಗೆಯೇ ಸುಂದರ್ ಹಂದಾಡಿ, ಕವಿತಾ ಆದರ್ಶ್ ಮತ್ತು ದೀಕ್ಷಾ ದೇವಾಡಿಗರವರ ಪ್ರಾಯೋಜಿಕತ್ವದಡಿ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಟ್ರ್ಯಾಕ್ ಸೂಟ್ ವಿತರಣೆ ಮಾಡಿದರು.

ಕೊಡುಗೆ ನೀಡಿದವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷೆ ಪೂರ್ಣಿಮಾ ಸತೀಶ್ ವಹಿಸಿದ್ದರೆ, SDMC ಉಪಾಧ್ಯಕ್ಷರಾದ ವಿಜಯ್ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ಸರ್ವ SDMC ಸದಸ್ಯರು, ಪೋಷಕರು ಮತ್ತು ಮಕ್ಕಳು ನೆರೆದಿದ್ದರು. ಸಹ ಶಿಕ್ಷಕಿ ಭವಾನಿ ಮತ್ತು ಗೌರವ ಶಿಕ್ಷಕಿ ಅಕ್ಷತಾ ಸಹಕರಿಸಿದರು.