ಡೈಲಿ ವಾರ್ತೆ:08 ಆಗಸ್ಟ್ 2023

ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಸಂಸತ್ತು ಚುನಾವಣೆ: ಅಧ್ಯಕ್ಷೆಯಾಗಿ ಫಾತಿಮಾ ಅನ್ಸಬಾ, ಕಾರ್ಯದರ್ಶಿಯಾಗಿ ಸನುಫರ್ ಝುನೋಬಿಯ ಆಯ್ಕೆ

ಬಂಟ್ವಾಳ : ವಿದ್ಯಾರ್ಥಿಗಳಲ್ಲಿ ರಾಜಕೀಯ ಪ್ರಜ್ಞೆ ಹಾಗೂ ಚುನಾವಣೆ ಪ್ರಕ್ರಿಯೆ ಯ ಬಗ್ಗೆ ಮಾಹಿತಿಯನ್ನು ನೀಡುವ ಸಲುವಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಸಂಸತ್ತು ಚುನಾವಣೆಯನ್ನು ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಲಾಯಿತು.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಪದವಿ ಪೂರ್ವ ವಿಭಾಗದ ಫಾತಿಮಾ ಅನ್ಸಬಾ , ಕಾರ್ಯದರ್ಶಿಯಾಗಿ ದ್ವಿತೀಯ ವಿಜ್ಞಾನ ವಿಭಾಗದ ಸನುಫರ್ ಝುನೋಬಿಯ ಜಯಗಳಿಸಿದರು.

ವಿರೋಧಪಕ್ಷದ ನಾಯಕಿಯರಾಗಿ ದ್ವಿತೀಯ ಕಲಾ ವಿಭಾಗದ ರೀಹಾ ಶಾಝಿನ್ ಮತ್ತು ಎಂ.ಸಂಬ್ರಿನಾ ಚುನಾಯಿತರಾದರು.

ಚುನಾವಣೆ ಅಧಿಕಾರಿಯಾಗಿ ಎಂಜಲಿನ್ ಸುನಿತಾ ಪಿರೇರಾ, ಇತರ ಅಧಿಕಾರಿಗಳಾಗಿ ಉಪನ್ಯಾಸಕರಾದ ಸೌಮ್ಯ, ಗಾಯತ್ರಿ, ವಿಜಯ, ನಿಶಾ ಸಹಕರಿಸಿದರು.