ಡೈಲಿ ವಾರ್ತೆ:08 ಆಗಸ್ಟ್ 2023

ಬೆಂಗಳೂರು ವಿ.ವಿ.ಕುಲ ಸಚಿವ ಶೇಖ್ ಲತೀಫ್ ಅವರಿಗೆ ಅಲ್ ಫಲಾಹ್ ಸಂಸ್ಥೆ ವತಿಯಿಂದ ಸನ್ಮಾನ

ಬಂಟ್ವಾಳ : ಬೆಂಗಳೂರು ವಿಶ್ವ ವಿದ್ಯಾನಿಲಯದ ಕುಲ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಶೇಖ್ ಲತೀಫ್ ಅವರನ್ನು ಅಲ್ ಫಲಾಹ್ ಸಂಸ್ಥೆ ವತಿಯಿಂದ ಮಂಗಳವಾರ ಬೆಂಗಳೂರು ವಿ.ವಿ. ಕುಲಸಚಿವರ ಕಾರ್ಯಾಲಯ ಜ್ಞಾನಭಾರತಿಯಲ್ಲಿ ಸನ್ಮಾನಿಸಲಾಯಿತು.

ಅಲ್ ಫಲಾಹ್ ಮುಖ್ಯಸ್ಥರಾದ ಯೂಸುಫ್ ಎಸ್., ಬಂಟ್ವಾಳ ಜಮೀಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಉಪ್ಪಿನಂಗಡಿ ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಅಬೂಬಕರ್ ಪುತ್ತು ಅವರು ಕುಲ ಸಚಿವರನ್ನು ಭೇಟಿಯಾಗಿ ಸನ್ಮಾನಿಸಿದರು.