



ಡೈಲಿ ವಾರ್ತೆ:08 ಆಗಸ್ಟ್ 2023


ಬಸ್ರೂರು ಕೋಟಿ ಚೆನ್ನೆಯ್ಯು ಗರಡಿಯ ಮುಖ್ಯಸ್ಥ ಗೋಪಾಲ ಪೂಜಾರಿ ವಿಧಿವಶ
ಕುಂದಾಪುರ: ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಬಸ್ರೂರು ಕೋಟಿ ಚೆನ್ನೆಯ್ಯು ಗರಡಿಯ ಮುಖ್ಯಸ್ಥ ಹಾಗೂ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಬಸ್ರೂರು ಗೋಪಾಲ ಪೂಜಾರಿ (74) ಅವರು ಆ. 8 ರಂದು ಮಂಗಳವಾರ ಸಂಜೆ ಹೃದಯಘಾತದಿಂದ ಮೃತಪಟ್ಟಿದ್ದಾರೆ.
ಮೃತ ಗೋಪಾಲ ಪೂಜಾರಿಯವರು ಸಹಕಾರ ಕ್ಷೇತ್ರದಲ್ಲಿ ಸುದೀರ್ಘ ಅವಧಿಯಿಂದ ಗುರುತಿಸಿಕೊಂಡಿದ್ದು ಅವರು ಕಳೆದ 25 ವರ್ಷಗಳಿಗೂ ಹೆಚ್ಚು ಕಾಲ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಂಘವನ್ನು ಮುನ್ನೆಡೆಸಿದ್ದರು. ಅಲ್ಲದೆ ಬಸ್ರೂರು ಗರಡಿಯ ಪಾತ್ರಿಗಳಾಗಿ ಗರಡಿಯ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು ಹಾಗೂ ಬಿಲ್ಲವ ಸಮಾಜದ ಮುಖಂಡರಾಗಿ ಜನಾನುರಾಗಿಯಾಗಿದ್ದರು.
ಮೃತರು ಪತ್ನಿ ಹಾಗೂ 4 ಗಂಡು 2 ಹೆಣ್ಣು ಮಕ್ಕಳನ್ನು ಮತ್ತು ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.