ಡೈಲಿ ವಾರ್ತೆ:11 ಆಗಸ್ಟ್ 2023

ವರದಿ: ವಿದ್ಯಾಧರ ಮೊರಬಾ

ಕ್ರೆಡಿಟ್‍ಆಕ್ಸೆಸ್ ಗ್ರಾಮೀಣ ಲಿ.,ನ ಅಂಕೋಲಾದಲ್ಲಿ ನೂತನ ಶಾಖೆ: ಸಾಲವನ್ನು ಒಳ್ಳೆಯ ಉದ್ದೇಶಕ್ಕೆ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಪಡಿಸಿಕೊಳ್ಳಿ : ಪಿಎಸ್‍ಐ ಸುನೀಲ

ಅಂಕೋಲಾ : ಹಣಕಾಸು ಸಂಸ್ಥೆಗಳು ಹಣಕಾಸು ಉದ್ಯಮವು ಒದಗಿಸುವ ಸೇವೆಗಳಾಗಿವೆ. ಹಣದ ನಿರ್ವ ಹಣೆಯಲ್ಲಿ ವ್ಯವಹರಿಸುವ ರಾಜ್ಯದಲ್ಲಿ ವಿಶಾಲ ವ್ಯಾಪ್ತಿಯ ಸಂಸ್ಥೆಗಳ ಲೊಂದಾದ ಕ್ರೆಡಿಟ್‍ಆಕ್ಸೆಸ್ ಗ್ರಾಮೀಣ ಲಿಮಿಟಡ್ ಒಂದು. ಈ ಸಂಸ್ಥೆಯಿಂದ ಒಳ್ಳೆಯ ಉದ್ದೇಶಕ್ಕಾಗಿ ಸಾಲವನ್ನು ಪಡೆದು, ಆರ್ಥಿಕವಾಗಿ ಅಭಿ ವೃದ್ಧಿ ಪಡಿಸಿಕೊಳ್ಳಿ ಎಂದು ಎಂದು ಪಿಎಸ್‍ಐ ಸುನೀಲ ಹುಲ್ಲೋಳ್ಳಿ ಹೇಳಿದರು.

ಕ್ರೆಡಿಟ್‍ಆಕ್ಸೆಸ್ ಗ್ರಾಮೀಣ ಲಿ.,ದ ಅಂಕೋಲಾ ಮಠಾಕೇರಿಯಲ್ಲಿ ಶುಕ್ರವಾರ ನೂತನ ಶಾಖೆಯನ್ನು ಉದ್ಘಾ ಟಿಸಿ ಅವರು ಮಾತನಾಡಿ, ಈ ಸಂಸ್ಥೆಯ ಗ್ರಾಹಕರು ಯಾವುದೇ ಅನಾಮಿಕ ಪೋನ್ ಕರೆಗೆÀ ವಂಚಿತ ರಾಗದೇ ಓಟಿಪಿ ಹಂಚಿಕೊಳ್ಳಬೇಡಿ. ನಿಮ್ಮ ಯುಪಿಐ ಪಿನ್‍ನ್ನು ವೆಬ್‍ಸೈಟ್‍ಗಳಲ್ಲಿ ಹಂಚಿಕೊಳ್ಳುವಾಗ ಅಥವಾ ಲಿಂಕ್ ಮೂಲಕ ನಿಮಗೆ ಕಳುಹಿಸಲಾದ ಫಾರ್ಮ್‍ಗಳ ಕುರಿತು ಜಾಗರೂಕರಾಗಿರಿ ಎಂದು ಮಹಿಳಾ ಸಂಘದ ಸದಸ್ಯರಿಗೆ ಸಲಹೆ ಸೂಚನೆ ನೀಡಿದರು.

ಸಂಸ್ಥೆಯ ಬೆಳಗಾವಿಯ ವಲಯ ಪ್ರಬಂಧಕ ಎಸ್.ಎನ್.ರವಿ ಮಾತನಾಡಿ, ನಮ್ಮ ಸಂಸ್ಥೆ ಕೇವಲ ಸದಸ್ಯ ರಿಂದ ಪ್ರಾರಂಭವಾದ ಇಂದು 14 ರಾಜ್ಯಗಳಲ್ಲಿ 1748 ಶಾಖೆ ಸೇರಿದಂತೆ 42 ಲಕ್ಷಕ್ಕೂ ಹೆಚ್ಚು ಗ್ರಾಹಕರು ಹೊಂದಿದ್ದು, 18 ಸಾವಿರ ಉದ್ಯೋಗಸ್ಥರು ಕಾರ್ಯನಿರ್ವಹಿಸುತ್ತಾರೆ.

ಸಂಸ್ಥೆಯಿಂದ ಸಾಮಾಜಿಕವಾಗಿ ವಿವಿಧ ಸ್ತರದ ಸೇವೆಗಳನ್ನು ನೀಡುತ್ತಿದ್ದೇವೆ ಎಂದರು. ಬ್ಯಾಂಕಿನ ವ್ಯವಹಾರದ ಕುರಿತು ಇಲ್ಲಿಯ ಎಸ್‍ಬಿಐ ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಧನ್‍ರಾಜ್ ಮಾತನಾಡಿದರು.
ಹುಬ್ಬಳ್ಳಿ ಪ್ರಾಧೀಶಕ ಪ್ರಬಂಧಕ ಆನಂದ ಲಮ್ಮಾಣ , ಶಾಖಾ ವ್ಯವಸ್ಥಾಪಕರಾದ ನಾಗರಾಜ, ಮಹಿಳಾ ಸಂಘದ ಸದಸ್ಯೆ ಮೇಧಾ ನಾಯ್ಕ, ಶಂಕುತಲಾ ತಾಂಡೇಲ, ವಿವಿಧ ಶಾಖೆಯ ಶಾಖೆಯ ವ್ಯವಸ್ಥಾಪಕ ರಾದ ನಾಗರಾಜ, ಅಕ್ಷಯಾ, ಪಕೀರಪ್ಪ ಸಿಬ್ಬಂದಿಗಳಾದ ನವೀನ, ಪ್ರವೀಣ ಎಸ್., ಸಂದೇಶ, ಪ್ರವೀಣ ಎಂ., ಯಲ್ಲಾಪ್ಪ, ಸೇರಿದಂತೆ ಉಪಸ್ಥಿತರಿದ್ದರು. ಕಾರವಾರ ವಲಯ ವ್ಯವಸ್ಥಾಪಕ ಮೆಬೂಬ ಸಾಹೀಬ ನಿರ್ವಹಿಸಿದರುರು.