ಡೈಲಿ ವಾರ್ತೆ:11 ಆಗಸ್ಟ್ 2023
ಕೋಡಿ ಗ್ರಾ. ಪಂ. ವ್ಯಾಪ್ತಿಯ ಕೋಡಿಬೆಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ
ಕೋಟ: ಕೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೋಡಿಬೆಂಗ್ರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಂಚಾಯತ್ ಅಧ್ಯಕ್ಷರಾದ ಪ್ರಭಾಕರ ಮೆಂಡನ್ ಇವರ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಯು ಆ. 7 ರಂದು ಜರುಗಿತು.
ಕಾರ್ಯಕ್ರಮದಲ್ಲಿ ವಾರ್ಷಿಕ ಅನುದಾನ ಹಾಗೂ ನಿರ್ವಹಿಸಬೇಕಾದ ವೆಚ್ಚಗಳ ಬಗ್ಗೆ ಚರ್ಚಿಸಲಾಯಿತು. ತದನಂತರ ಇಂಧ್ರಧನುಷ್ , ಚಿಕ್ಕಮಕ್ಕಳಿಗೆ ಚುಚ್ಚುಮದ್ದು ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ರವೀಂದ್ರ ರಾವ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು, ಕೋಡಿ ಗ್ರಾಮ ಪಂಚಾಯತ್ ಸಚ್ಚಿದಾನಂದ ಭಟ್, ವೈದ್ಯಾಧಿಕಾರಿಯವರು ಪ್ರಾಥಮಿಕ ಆರೋಗ್ಯ ಕೇಂದ್ರ, ಶ್ರೀ ಮಧು ಆರೋಗ್ಯ ನಿರೀಕ್ಷಣಾಧಿಕಾರಿಯವರು, ಪ್ರಾಥಮಿಕ ಆರೋಗ್ಯ ಕೇಂದ್ರ, ಶ್ರೀಮತಿ ಮೀನಾಕ್ಷಿ ಮೇಲ್ವಿಚಾರಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ , ಶ್ರೀಮತಿ ಕುಸುಮ, ಸದಸ್ಯರು ಗ್ರಾಮ ಪಂಚಾಯತ್ ಸಹಶಿಕ್ಷಕರು, ಕೋಡಿ ಬೆಂಗ್ರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶ್ರೀಮತಿ ಅಮಿತಾ ಆರೋಗ್ಯ ಸುgಕ್ಷಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಸ್ಥಿತರಿದ್ದರು.